ಬೆಂಗಳೂರು:ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಯು ರಾಜ್ಯದ ಅಭಿವೃದ್ಧಿ, ಸಮೃದ್ಧಿ ಸಾಧಿಸಲು ನೆರವಾಗಲಿವೆ ಎಂಬ ಆಶಾಭಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವ್ಯಕ್ತಪಡಿಸಿದರು.
ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಉದ್ಯಮಿಗಳು, ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರೊಂದಿಗೆ ಉಪಾಹಾರ ಕೂಟದಲ್ಲಿ ಈ ವರ್ಷ ಬೆಂಗಳೂರು ತಾಂತ್ರಿಕ ಶೃಂಗ ಸಭೆ (ಬಿಟಿಎಸ್)ಯ ಪೂರ್ವ ಸಿದ್ಧತೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾವೀನ್ಯತೆ ಪೋಷಿಸುವ, ಹೂಡಿಕೆ ಪೋತ್ರಾಹಿಸುವ ಮತ್ತು ಸುಸ್ಥಿರ ಬೆಳವಣಿಗೆ ಬೆಂಬಲಿಸುವ ಪರಿಸರ ಬೆಳೆಸಲು ಸರ್ಕಾರ ಬದ್ಧವಾಗಿದೆ. ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಉದ್ಯಮವು ಪ್ರಮುಖಪಾತ್ರವಹಿಸುತ್ತದೆ ಎಂಬ ಅರಿವು ನಮಗಿದೆ ಎಂದರು.
ಭಾರತದ ಜಿಡಿಪಿಗೆ ಕರ್ನಾಟಕ ಶೇಕಡ 8.2ರಷ್ಟು ಕೊಡುಗೆ ನೀಡುತ್ತದೆ. ಜಾಗತಿಕಮಟ್ಟದಲ್ಲಿ ಉನ್ನತಿ ಸಾಧಿಸಲು ಉದ್ಯಮ ಸಂಸ್ಥೆಗಳು, ಸೇವಾ ಕಂಪನಿಗಳು, ಎಲೆಕ್ಟ್ರಾನಿಕ್ಸ್, ಬಯೋಕೆಮಿಸ್ಟ್ರಿ, ಸೆಮಿಕಂಡಕ್ಟರ್ ಮುಂತಾದ ವಲಯಗಳು ಬೆಂಬಲಿಸಿವೆ ಎಂದು ಹೇಳಿದರು.
ಪರಿವರ್ತನೆ, ಶ್ರೇಷ್ಠತೆಯ ನಿರಂತರ ಅನ್ವೇಷಣೆ ಮತ್ತು ಭಾರತವು ಜಾಗತಿಕ ತಂತ್ರಜ್ಞಾನದ ನಾಯಕನಾಗಿ ಹೊರಹೊಮ್ಮುವ ಕನಸು, ಬೆಂಗಳೂರು ಈ ಕನಸಿನ ಕೇಂದ್ರ ಬಿಂದುವಾಗಿದ್ದು, ಉದ್ಯಮ-ನವೋದ್ಯಮಗಳೆಲ್ಲರೂ ವಾಸ್ತುಶಿಲ್ಪಿಗಳಾಗಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಶ್ಲಾಸಿದರು.
ಉದಯೋನ್ಮುಖ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಇಂಟರ್ನೆಟ್ ಆ್ ಥಿಂಗ್ಸ್, ಬ್ಲಾಕ್‌ಚೈನ್, ಕ್ವಾಂಟಮ್ ಕಂಪ್ಯೂಟಿಂಗ್ ನಮ್ಮ ಡಿಜಿಟಲ್ ವಿಕಾಸದ ಮುಂದಿನ ಹಾದಿಯಾಗಿದೆ. ತಂತ್ರಜ್ಞಾನದ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿ ಇರುವುದನ್ನು ಖಾತರಿಪಡಿಸಿಕೊಳ್ಳುವುದಾಗಿ ಎಂದು ಹೇಳಿದರು.
ಬೆಂಗಳೂರು ಟೆಕ್ ಶೃಂಗಸಭೆಯು ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದೆ. ಕಳೆದ 26 ವರ್ಷಗಳಿಂದ ಈ ಉಪಕ್ರಮವನ್ನು ನಿರಂತರವಾಗಿ ಚಾಲ್ತಿಯಲ್ಲಿಟ್ಟಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಅತ್ಯುತ್ತಮ ಮನಸ್ಸುಗಳನ್ನು ಒಟ್ಟುಗೂಡಿಸಲು ಪರಿಣಾಮಕಾರಿ ವೇದಿಕೆಯಾಗಿದೆ.
ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಸಮಾವೇಶ (ಬಿಟಿಎಸ್) ಈ ಬಾರಿ ನವೆಂಬರ್ 19 ರಿಂದ 21ರವರೆಗೆ ನಡೆಯಲಿದೆ. ಸೀಮೋಲ್ಲಂಘನೆ (ಬ್ರೇಕಿಂಗ್ ಬೌಂಡ್ರೀಸ್) ಧ್ಯೇಯದಡಿ ನಡೆಯಲಿದೆ. ಹೊಸತನ ಹೆಚ್ಚಿಸಲು, ವೈವಿಧ್ಯಮಯ ವಲಯಗಳ ನಡುವಿನ ಸಹಯೋಗದ ಪ್ರಾಮುಖ್ಯತೆಯನ್ನು ಈ ಧ್ಯೇಯ ಒತ್ತಿ ಹೇಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ತಾಂತ್ರಿಕ ಶೃಂಗ ಸಭೆ ಕುರಿತು ಕಿರು ಹೊತ್ತಗೆ ಬಿಡುಗಡೆ ಮಾಡಿ, ಪೂರ್ವಸಿದ್ಧತೆಗೆ ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಹಿರಿಯ ಅಧಿಕಾರಿಗಳಾದ ಎಲ್.ಕೆ.ಅತೀಕ್, ಏಕರೂಪ್ ಕೌರ್, ದರ್ಶನ್, ಶೈಲೇಂದ್ರತ್ಯಾಗಿ, ಉದ್ಯಮಿಗಳು, ಇನ್ನಿತರರು ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
