ಬೆಂಗಳೂರು:ಕರೊನಾ ಕಾರಣದಿಂದಾಗಿ ಈ ವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆ ಅಥವಾ ಮುಂದೂಡಬೇಕೆ ಎಂಬ ವಿಚಾರದಲ್ಲಿ ಸರ್ಕಾರ ಗೊಂದಲಕ್ಕೆ ಸಿಲುಕಿದೆ.
ಈ ವರ್ಷ 66 ಜನರಿಗೆ ಪ್ರಶಸ್ತಿ ನೀಡಬೇಕು. ಈ ಸಲದ ಬದಲು ಮುಂದಿನ ವರ್ಷ ಎರಡು ವರ್ಷದ್ದೂ ಸೇರಿ ನೀಡುವ ಬಗ್ಗೆ ಚಿಂತನೆ ನಡೆದಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ. ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮಾರಂಭ ಮುಂದೂಡಬೇಕೆಂದು ಕೆಲವರು ಸಿಎಂ ಮೇಲೆ ಒತ್ತಡ ತರಲಾರಂಭಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿಟ್ಟುಕೊಂಡು ಮುಂದಿನ ವರ್ಷ ಅಥವಾ ಕರೊನಾ ಹಾವಳಿ ಮುಗಿದ ನಂತರ ಪ್ರದಾನ ಮಾಡಬೇಕೆಂಬುದು ಈ ಗುಂಪಿನ ವಾದವಾಗಿದೆ. ಆದರೆ ಚುನಾವಣೆ ನಡೆಯುತ್ತಿವೆ. ದಸರಾ ನಡೆಸಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ತೀರ್ವನಿಸಿದೆ. ಇಂತಹ ಸಂದರ್ಭದಲ್ಲಿ ಸಮಾರಂಭವನ್ನು ಸರಳವಾಗಿ ಮಾಡಲು ಅಡ್ಡಿ ಏನೆಂಬ ಪ್ರಶ್ನೆಯೂ ಇದೆ.
ಪ್ರಶಸ್ತಿ ಪುರಸ್ಕೃತರು ಹಾಗೂ ಅವರೊಂದಿಗೆ ಕೇವಲ ಒಬ್ಬರನ್ನಷ್ಟೇ ಆಹ್ವಾನಿಸಿ ಸಮಾರಂಭ ಮಾಡಬೇಕೆಂಬ ಸಲಹೆಯೂ ಇದೆ. ಈ ವರ್ಷ ಕೈಬಿಟ್ಟರೆ ಅನೇಕ ಹಿರಿಯರಿಗೆ ಪ್ರಶಸ್ತಿ ಪಡೆಯುವ ಅವಕಾಶ ತಪ್ಪಿಹೋಗಬಹುದೇನೋ ಎಂಬ ಅಭಿಪ್ರಾಯವೂ ಇದೆ. ಹೀಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಲ್ಲೂ ಗೊಂದಲ ಮೂಡಿದೆ.
ಶೀಘ್ರ ತೀರ್ಮಾನ:ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಶೀಘ್ರವೇ ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಅವರು 2008-09ರಲ್ಲಿ ಸಿಎಂ ಆಗಿದ್ದ ಸಂದರ್ಭದಲ್ಲೂ ಅತಿವೃಷ್ಟಿ ಕಾರಣಕ್ಕೆ 2 ವರ್ಷದ ಪ್ರಶಸ್ತಿಯನ್ನು ಒಟ್ಟಿಗೆ ನೀಡಲಾಗಿತ್ತು.
ಆಯ್ಕೆಗೆ ಸಿದ್ಧತೆ:ಮತ್ತೊಂದೆಡೆ, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು 26 ಜನರ ಸಮಿತಿ ರಚಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅದರಲ್ಲಿ 130 ಜನರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ. ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಸಭೆಗಳು ನಡೆದಿದ್ದು, 1:2 ಪ್ರಕಾರ ಪಟ್ಟಿ ತಯಾರಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುತ್ತದೆ. ಇಲಾಖೆ ಸಿದ್ಧತೆಯನ್ನಂತೂ ಮಾಡಿಕೊಳ್ಳುತ್ತಿದೆ.
|ಸಿ.ಟಿ. ರವಿಕನ್ನಡ ಮತ್ತು ಸಂಸ್ಕೃತಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − three =
Remember me
