ಬೆಂಗಳೂರು:ಮಳೆ ಕೊರತೆಯಿಂದ ರಾಜ್ಯದ 196 ತಾಲೂಕುಗಳಲ್ಲಿ ಬರ ಕಾಣಿಸಿರುವ ಹಿನ್ನೆಲೆಯಲ್ಲಿ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆಯಾಗಲಿದೆ.ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದಂತೆ ರಚಿಸಲಾದ ಸಂಪುಟ ಉಪ ಸಮಿತಿ ನಾಲ್ಕನೇ ಸಭೆ ಸೋಮವಾರ ನಡೆದಿದ್ದು, ತನ್ನ ಶಿಾರಸನ್ನು ಸಂಪುಟ ಸಭೆ ಮುಂದೆ ಮಂಡಿಸಲಿದೆ. ಈಗಾಗಲೇ ಸಂಪುಟ ಉಪ ಸಮಿತಿ ತರಿಸಿಕೊಂಡ ವರದಿಯಂತೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ 62 ತಾಲೂಕುಗಳಲ್ಲಿ ಬರವಿದೆ. ಅದನ್ನು ಹೊರತುಪಡಿಸಿ 134 ತಾಲೂಕಲ್ಲಿ ಇನ್ನೊಂದು ಸರ್ವೆ ನಡೆಸಲು ಸಂಪುಟ ಉಪ ಸಮಿತಿ ಜಿಲ್ಲಾಡಳಿತಗಳಿಗೆ ಸೋಮವಾರ ಸೂಚನೆ ನೀಡಿತ್ತು.ಗುರುವಾರ ಸಂಪುಟ ಸಭೆಯೊಳಗೆ ಈ ಸರ್ವೆಯ ವರದಿ ಬರುವುದು ಅನುಮಾನವಾದ್ದರಿಂದ ಹಂತಹಂತವಾಗಿ ಬರ ೋಷಣೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ಒಂದೊಮ್ಮೆ ಸಭೆ ಒಪ್ಪಿಗೆ ಸೂಚಿಸಿದರೆ 62 ತಾಲೂಕುಗಳ ಬರ ಪೀಡಿತ ತಾಲೂಕಗಳ ಪಟ್ಟಿ ಪ್ರಕಟವಾಗಲಿದೆ.ಇದರೊಟ್ಟಿಗೆ ಮೇವು ಉತ್ಪಾದನೆಗೆ ಪ್ರೋತ್ಸಾಹ ನೀಡಲು ಪಶುಸಂಗೋಪನೆ ಇಲಾಖೆಗೆ ಹೆಚ್ಚುವರಿ ಅನುದಾನ ಬಿಡುಗಡೆ, ನರೇಗಾದಡಿ ಕೆಲಸ ಮಾಡುವ ದಿನಗಳ ಹೆಚ್ಚಳ, ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ನೆರವಿಗೆ ಧಾವಿಸಲು ಹೆಚ್ಚಿನ ಹಣ ಬಿಡುಗಡೆ, ಟಾಸ್ಕ್ ೆರ್ಸ್ ರಚನೆ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ.ಕೆಲವು ಕಡೆ ಕೆಲವು ದಿನಗಳಿಂದ ಮಳೆ ಆಗುತ್ತಿದೆ, ಹೀಗಾಗಿ ಬರ ೋಷಣೆ ಮತ್ತು ಪರಿಹಾರ ವಿತರಣೆಯಲ್ಲಿ ತೀರ್ಮಾನ ಕೈಗೊಳ್ಳುವುದು ಕಷ್ಟಕರ. ಆದರೆ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಅನೇಕ ಕಡೆ ಬಿತ್ತನೆ ವ್ಯರ್ಥವಾಗಿದ್ದರೆ ಮತ್ತೆ ಕೆಲವು ಕಡೆ ಬಿತ್ತನೆಯೇ ಆಗಿಲ್ಲ. ಹೀಗಾಗಿ ರೈತ ಸಮುದಾಯ ಸರ್ಕಾರದ ನೆರವನ್ನೂ ಸಹ ನಿರೀಕ್ಷಿಸುತ್ತಿದೆ. ಈ ವಿಷಯದಲ್ಲಿ ಸರ್ಕಾರ ಕೂಡ ಧನಾತ್ಮಕವಾಗಿದ್ದು ಯಾವ ರೂಪದಲ್ಲಿ ಪರಿಹಾರ ವಿತರಿಸಬಹುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಬಹುದು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × five =
Remember me
