ಬೆಂಗಳೂರು:ಕರೊನಾ ಲಾಕ್​ಡೌನ್​ನಿಂದ ರಾಜ್ಯದ ಖಾಸಗಿ ಸಾರಿಗೆ ಕ್ಷೇತ್ರ ತತ್ತರಿಸಿದ್ದು, ಹಲವಾರು ಸಂಸ್ಥೆಗಳು ಹಾಗೂ ಹತ್ತಾರು ಸಾವಿರ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ರಾಜ್ಯಗಳಲ್ಲಿ ತೆರಿಗೆ ಸಹಿತ ಹಲವು ವಿನಾಯಿತಿಗಳನ್ನು ನೀಡಿ ಉದ್ಯಮಕ್ಕೆ ಉತ್ತೇಜನ ನೀಡುತ್ತಿದ್ದರೆ, ಕರ್ನಾಟಕ ಮಾತ್ರ ನಿರ್ಲಕ್ಷ್ಯ ತೋರಿದೆ.
ಕೈಗಾರಿಕೆ ಮತ್ತು ಉದ್ದಿಮೆಗಳ ಜೀವನಾಡಿಯಂತಿರುವ ವಾಣಿಜ್ಯ ವಾಹನ ಸೇವಾ ಕ್ಷೇತ್ರಕ್ಕೆ ಕರೊನಾ ಲಾಕ್​ಡೌನ್ ಬಳಿಕ ತಲೆ ಎತ್ತಲು ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ವಿಶೇಷ ಆರ್ಥಿಕ ಪ್ಯಾಕೇಜ್ ಬಯಸದೇ, ವಿನಾಯಿತಿ ಮಾತ್ರ ನೀಡುವಂತೆ ಮನವಿ ಮಾಡಲಾಗಿತ್ತು. ಮುಂದಿನ ಆರು ತಿಂಗಳವರೆಗೆ ರಸ್ತೆ ತೆರಿಗೆಯನ್ನು ಮನ್ನಾ ಮಾಡಬೇಕು ಮತ್ತು ಶೇ.50 ತೆರಿಗೆಯನ್ನು ಮಾತ್ರ ಸಂಗ್ರಹಿಸಬೇಕೆಂದು ರಾಜ್ಯದ ವಿವಿಧ ವಾಹನ ಮಾಲೀಕರ ಸಂಘಗಳು ಏಪ್ರಿಲ್, ಮೇ ತಿಂಗಳಲ್ಲೇ ಸರ್ಕಾರವನ್ನು ಒತ್ತಾಯಿಸಿದ್ದವು. ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಬೆಂಬಲ ಬೇಕು:ಸಾರಿಗೆ ಕ್ಷೇತ್ರಕ್ಕೆ ಇಂಥ ಪರಿಸ್ಥಿತಿ ಎದುರಾಗಿದ್ದು ಇದೇ ಮೊದಲು ಎನ್ನಬಹುದು. ಸಾವಿರಾರು ವಾಣಿಜ್ಯ ವಾಹನಗಳು ರಸ್ತೆಗಿಳಿಯದೆ ತಿಂಗಳುಗಳೇ ಕಳೆದಿವೆ. ಒಂದಷ್ಟು ಚಟುವಟಿಕೆ ಆರಂಭವಾದರೂ ನಿರೀಕ್ಷೆಯಷ್ಟು ಸಂಚಾರ ಆರಂಭವಾಗಿಲ್ಲ. ಇದರಿಂದ ವಾಹನಗಳ ನಿರ್ವಹಣೆ ಕಷ್ಟವಾಗುತ್ತಿದೆ. ಈ ಕಾರಣಕ್ಕೆ ವಾಣಿಜ್ಯ ವಾಹನ ಕ್ಷೇತ್ರಕ್ಕೆ ಬೂಸ್ಟರ್ ಅಗತ್ಯವಿದೆ ಎಂಬ ಕೂಗು ಕೇಳಿಬರುತ್ತಿದೆ. ಈ ಹಂತದಲ್ಲಿ ಸರ್ಕಾರ ಬೆಂಬಲ ನೀಡದಿದ್ದರೆ ಈ ಕ್ಷೇತ್ರವನ್ನೆ ನೆಚ್ಚಿಕೊಂಡ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಸಾಲ ಕೊಟ್ಟ ಬ್ಯಾಂಕುಗಳೂ ಸಂಕಷ್ಟಕ್ಕೆ ಸಿಲುಕಬಹುದು. ಸಾರಿಗೆ ಕ್ಷೇತ್ರ ನಂಬಿಕೊಂಡ ಇತರೆ ಉದ್ಯಮ ಅಥವಾ ಕ್ಷೇತ್ರದ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಯಾವ ವಾಹನಗಳು ಎಷ್ಟಿವೆ?ಸರಕು ಸಾಗಣೆ: ಟ್ರಕ್, ಲಾರಿ, ಮಲ್ಟಿಎಕ್ಸೆಲ್ಡ್- 3,64,884ಬಸ್ಸು: ಸ್ಟೇಜ್ ಕ್ಯಾರಿಯೇಜ್, ಒಪ್ಪಂದ ವಾಹನ, ಶಾಲಾವಾಹನ, ಪ್ರೖೆವೇಟ್ ಸರ್ವಿಸ್ ವೆಹಿಕಲ್- 1,15,028ಟ್ಯಾಕ್ಸಿ: ಮೋಟಾರು ಕ್ಯಾಬ್, ಮ್ಯಾಕ್ಸಿ ಕ್ಯಾಬ್, ಇತರೆ ಟ್ಯಾಕ್ಸಿ-3,71,942
ಅಧಿಕಾರಿಗಳು ಹೇಳುವುದೇನು?ರಾಜ್ಯದ ಸಾರಿಗೆ ಸಂಘಟನೆಗಳ ಮನವಿ ಮತ್ತು ವಿವಿಧ ರಾಜ್ಯಗಳಲ್ಲಿ ಘೋಷಿಸಿರುವ ತೆರಿಗೆ ವಿನಾಯಿತಿ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ವಿನಾಯಿತಿ ಅಗತ್ಯತೆ ಬಗ್ಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ನೆರವಿಗೆ ನಿಂತ ರಾಜ್ಯಗಳುಗುಜರಾತ್, ರಾಜಸ್ಥಾನ, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಹರಿಯಾಣ ಸರ್ಕಾರಗಳು ವಾಣಿಜ್ಯ ವಾಹನಗಳ ರಸ್ತೆ ತೆರಿಗೆಯನ್ನು ಮನ್ನಾ ಮಾಡಿವೆ. ತಮಿಳುನಾಡು ಮತ್ತು ಆಂಧ್ರದಲ್ಲೂ ಈ ಸಂಬಂಧ ಪ್ರಸ್ತಾವನೆ ಇದ್ದು, ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ವಾಣಿಜ್ಯ ವಾಹನ ಮಾಲೀಕರು ಪಾವತಿಸಬೇಕಾದ ವಾರ್ಷಿಕ ರಸ್ತೆ ತೆರಿಗೆಯನ್ನು ಏಪ್ರಿಲ್ 1 ರಿಂದ ಆರು ತಿಂಗಳವರೆಗೆ ಮನ್ನಾ ಮಾಡಲಾಗಿದೆ. ರಾಜ್ಯದಲ್ಲಿ ನೋಂದಾಯಿತ 11.41 ಲಕ್ಷಕ್ಕೂ ಹೆಚ್ಚು ವಾಹನಗಳಿವೆ.
ವಿನಾಯಿತಿ ನೀಡುವುದರಿಂದ ಸರ್ಕಾರಕ್ಕೆ ಆಗುವ ಲಾಭಗಳು1. ವಾಹನಗಳ ಓಡಾಟ ಹೆಚ್ಚಿದರೆ ಡೀಸೆಲ್ ಮೇಲಿನ ತೆರಿಗೆ ಮೊತ್ತ ಸರ್ಕಾರದ ಬೊಕ್ಕಸಕ್ಕೆ ಬರುತ್ತದೆ. ಪ್ರತಿ ಲೀಟರ್​ಗೆ 36 ರೂಪಾಯಿ ಸರ್ಕಾರಕ್ಕೆ ಲಭ್ಯವಾಗುತ್ತದೆ.2. ಬಿಡಿಭಾಗಗಳ ಉದ್ಯಮಕ್ಕೆ ಬೇಡಿಕೆ ಹೆಚ್ಚಿ ಆ ಮೂಲಕವೂ ಸರ್ಕಾರಕ್ಕೆ ತೆರಿಗೆ ಬರಲಿದೆ. ಶೇ.18ರಿಂದ ಶೇ. 28ರವರೆಗೆ ಜಿಎಸ್ಟಿ ಸಿಗಲಿದೆ.3. ಪ್ರತಿ ಟೈರ್ ಖರೀದಿಯಿಂದ ಎರಡು ಸಾವಿರ ರೂ.ಗಿಂತ ಹೆಚ್ಚು ಜಿಎಸ್ಟಿ ಸಂದಾಯವಾಗುತ್ತದೆ.
ಸಮಸ್ಯೆಗಳೇನು?1. ವಾಹನಗಳು ರಸ್ತೆಗಿಳಿಯದೆ ವಾಹನ ಮಾಲೀಕರ ಸ್ಥಿತಿ ಚಿಂತಾಜನಕ.2. ಸಾಲ ಮಾಡಿ ವಾಹನ ಖರೀದಿಸಿದವರು ಕಂತು ಕಟ್ಟಲು ಪರದಾಡಬೇಕಾಗಿದೆ.3. ಚಾಲಕರು, ನಿರ್ವಾಹಕರಿಗೆ ವೇತನ ಪಾವತಿ ಸಾಧ್ಯವಾಗುತ್ತಿಲ್ಲ.4. ವಾಹನ ನಿರ್ವಹಣೆಯೂ ಸಾಧ್ಯವಾಗುತ್ತಿಲ್ಲ
ವಾಣಿಜ್ಯ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ನಮ್ಮ ಕ್ಷೇತ್ರದ ಆಗ್ರಹ. ಸರ್ಕಾರ ತೀರ್ಮಾನ ಮಾಡುವುದಾಗಿ ಭರವಸೆ ನೀಡಿದೆ, ಕಾಯುತ್ತಿದ್ದೇವೆ.‌|ರಾಧಾಕೃಷ್ಣ ಹೊಳ್ಳ, ಸಾರಿಗೆ ಕ್ಷೇತ್ರ
ಆರು ಬಾರಿ ಮನವಿ ಕೊಟ್ಟಿದ್ದೇವೆ. ಸಿಎಂ, ಸಾರಿಗೆ ಸಚಿವರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಹೋರಾಟಕ್ಕಿಳಿಯುವುದೊಂದೇ ದಾರಿ ಎಂಬಂತಾಗಿದೆ.|ಎಸ್. ನಟರಾಜ ಶರ್ಮ, ಕರ್ನಾಟಕ ರಾಜ್ಯ ಟೂರಿಸ್ಟ್ ಆಪರೇಟರ್ಸ್ ಅಸೋಸಿಯೇಷನ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + four =
Remember me
