ಬೆಂಗಳೂರು:ಇವರು ಹೆಸರಿಗಷ್ಟೇ ಸರ್ಕಾರಿ ನರ್ಸ್​ಗಳು. ಆದರೆ, ಇವರಿಗೆ ಸರ್ಕಾರದ ಸವಲತ್ತುಗಳು ಮಾತ್ರ ಸಿಗುವುದಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ನರ್ಸ್​ಗಳ ಪರಿಸ್ಥಿತಿ ಇದು. ಕರೊನಾ ವಿರುದ್ಧ ಇವರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ, ಇಲಾಖೆ ವ್ಯಾಪ್ತಿಯಡಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನರ್ಸ್​ಗಳು ಪಡೆಯುವ ನೂತನ ಪಿಂಚಣಿ ವ್ಯವಸ್ಥೆ (ಎನ್​ಪಿಎಸ್), ಸರ್ಕಾರಿ ವಿಮಾ ಸೌಲಭ್ಯ (ಕೆಜಿಐಡಿ), ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್), ಮರಣ ಮತ್ತು ನಿವೃತ್ತಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಈ ಸಂಬಂಧ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 2015ರಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು 600 ಸಿಬ್ಬಂದಿ ನರ್ಸ್ ಗಳ ನೇಮಕಾತಿ ನಡೆಸಿತ್ತು. ಆದರೆ ಸರ್ಕಾರಿ ವೇತನ ಹೊರತಾಗಿ ಬೇರೆ ಯಾವುದೇ ಸೌಲಭ್ಯ ದೊರೆಯತ್ತಿಲ್ಲ.
ಆರ್ಥಿಕ ಸಂಕಷ್ಟ: 2016ರಲ್ಲೇ ರಾಜ್ಯ ಸರ್ಕಾರ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಎನ್​ಪಿಎಸ್​ಗೆ ಒಳಪಡಿಸಬೇಕೆಂದು ಆದೇಶ ನೀಡಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿ ಯಲ್ಲಿ 7 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 10 ಸ್ವಾಯತ್ತ ಕಾಲೇಜು ಸೇರಿ ರಾಜ್ಯದಲ್ಲಿ ಒಟ್ಟಾರೆ 17 ವೈದ್ಯಕೀಯ ಆಸ್ಪತ್ರೆಗಳಿವೆ. ಹೊರ ರೋಗಿಗಳಿಗೆ ಪಡೆಯುವ ಶುಲ್ಕದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶೇ.50, ಹಿರಿಯ ನಾಗರಿಕರಿಗೆ ಶೇ.30 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಂಪೂರ್ಣ ಉಚಿತ ಎಂಬ ಸ್ಲ್ಯಾಬ್​ಗಳನ್ನು ನಿಗದಿ ಪಡಿಸಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಂದಾಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಕಾರಣಕ್ಕೆ ನೌಕರರಿಗೆ ಸೌಲಭ್ಯಗಳನ್ನು ನೀಡುತ್ತಿಲ್ಲ.
ತಾರತಮ್ಯ ಧೋರಣೆ:ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ ಮಾಡುವ ಕೆಲಸವನ್ನೇ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿರುವ ನರ್ಸ್ಗಳು ಮಾಡುತ್ತಿದ್ದಾರೆ. ಮತ್ಯಾಕೆ ಈ ತಾರತಮ್ಯ ಎಂದು ನೊಂದ ನರ್ಸ್​ಗಳು ಪ್ರಶ್ನಿಸಿದ್ದಾರೆ.
ಆರ್ಥಿಕ ಸಂಕಷ್ಟ ಇದೆ
ನರ್ಸ್​ಗಳ ಶ್ರಮದ ಬಗ್ಗೆ ಮಾತನಾಡುವುದಕ್ಕೆ ಆಗುವು ದಿಲ್ಲ. ಆದರೆ, ಸ್ವಾಯತ್ತ ಸಂಸ್ಥೆಗಳಿಗೆ ಸರ್ಕಾರದ ಎಲ್ಲ ಸವಲತ್ತುಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಕರೊನಾ ದಿಂದಾಗಿ ರಾಜ್ಯವೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇನ್ನೂ ಎರಡು ವರ್ಷ ಈ ಬಗ್ಗೆ ಮಾತನಾಡುವುದು ತಪ್ಪು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಗಿರೀಶ್ ಹೇಳಿದ್ದಾರೆ. ಸ್ವಾಯತ್ತ ಸಂಸ್ಥೆಗಳಲ್ಲಿರುವ ನರ್ಸ್ ಗಳಿಗೂ ಬೇರೆ ನರ್ಸ್​ಗಳಿಗೂ ಒಂದೇ ಸಮನಾದ ವೇತನ ಇದೆ. ಇಲ್ಲಿನ ನರ್ಸ್​ಗಳಿಗೆ ವರ್ಗಾವಣೆ ಇರುವುದಿಲ್ಲ. 2006ರ ನಂತರ ನೇಮಕವಾದರವರಿಗೆ ಎನ್​ಪಿಎಸ್ ಇಲ್ಲ. ಕರೊನಾ ಇರುವುದರಿಂದ ಈ ಸಮಯದಲ್ಲಿ ನಾವು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಡುವುದು ಸೂಕ್ತವಲ್ಲ ಎಂದಿದ್ದಾರೆ.
| ದೇವರಾಜ್ ಎಲ್.
ಚೇತರಿಕೆಯ ಕ್ರಮಗಳು, ಒಂದಿಷ್ಟು ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
