| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಕರೊನಾದಿಂದ ತತ್ತರಿಸಿರುವ ಜನರ ಜೀವನ ಹಾಗೂ ರಾಜ್ಯದ ಸ್ಥಿತಿಯನ್ನು ಮೊದಲಿನ ಹಂತಕ್ಕೆ ತರಲು ಸರ್ಕಾರ ಮುಂದಾಗಿದೆ. ನೆರೆಯ ರಾಜ್ಯಗಳು, ವಿವಿಧ ದೇಶಗಳಲ್ಲಿ ಕೈಗೊಂಡ ಹೊಸ ಕ್ರಮಗಳನ್ನು ಅಧ್ಯಯನ ನಡೆಸಿ, ತಜ್ಞರಿಂದ ಅಭಿಪ್ರಾಯ ಪಡೆದು, ಅದನ್ನು ಇಲಾಖೆಗಳಲ್ಲಿ ಅಳವಡಿಸಿಕೊಳ್ಳಲು ಸೂಚನೆ ನೀಡಿದೆ. ಶಾಲೆ-ಕಾಲೇಜುಗಳಲ್ಲಿ ಸಂಜೆ ಬಳಿಕ ಕೌಶಲ ತರಬೇತಿ ಆರಂಭಿಸುವುದು, ರೈಸ್ ಎಟಿಎಂ ಸ್ಥಾಪನೆ, ಹೊಸ ಸಂಶೋಧನೆಗಳಿಗೆ ಅತ್ಯುಚ್ಚ ಶೈಕ್ಷಣಿಕ ಸಂಸ್ಥೆಗಳನ್ನೊಳಗೊಂಡ ತಂಡ ರಚನೆ ಸೇರಿ ವಿವಿಧ ವಿಚಾರದಲ್ಲಿ ಸರ್ಕಾರ ಆಸಕ್ತಿ ತೋರಿದೆ. ಕೆಲವು ಕೆಲಸಗಳನ್ನು ತಕ್ಷಣದಿಂದಲೇ ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಿದೆ.
ರಾಜ್ಯ ಯೋಜನಾ ಮಂಡಳಿ ತಜ್ಞರ ಸಭೆ ನಡೆಸಿ, ಹೊಸ ಆಲೋಚನೆಗಳನ್ನು ಕ್ರೋಡೀಕರಿಸಿ ಇಲಾಖಾ ಮುಖ್ಯಸ್ಥರ ಮುಂದೆ ಪ್ರಸ್ತಾವನೆ ಸಲ್ಲಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಡಾ. ಅಲೋಕೆ ಕುಮಾರ್, ಡಾ. ಸಂತೋಷ್ ಅಂಶುಮಾಲಿ, ಡಾ. ಪ್ರಕಾಶ್ ಮೆಹ್ರ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್, ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್​ನ ಡಾ. ಆಕಾಶ್ ಪ್ರಭುನೆ ಸೇರಿ 52 ತಜ್ಞರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಆದ್ಯತೆ ಮೇಲೆ ಪ್ರಮುಖವಾಗಿ ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ಉದ್ಯೋಗದ ವಿಚಾರದಲ್ಲಿ ತಜ್ಞರ ಸಲಹೆಗಳ ಆಧಾರದಲ್ಲಿ ಇಲಾಖೆಗಳು ಆದ್ಯತೆ ಮೇಲೆ ಕೈಗೊಳ್ಳಬೇಕಾದ ವಿಷಯಗಳನ್ನು ಪಟ್ಟಿ ಮಾಡಲಾಗಿದೆ.
ಈ ಪೈಕಿ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆ ಸಹಯೋಗದಲ್ಲಿ ಅಂತರ್ಜಾಲದಲ್ಲಿ ಸಿಟಿಜನ್ ಬಜೆಟ್ ಟ್ರಾ್ಯಕರ್ ಸಿದ್ಧಪಡಿಸಿ ಸಾರ್ವಜನಿಕರಿಗೆ ಕೋವಿಡ್ ಅಥವಾ ಸರ್ಕಾರದ ನಿಧಿಯ ಮಾಹಿತಿ ನೀಡಿ ಪಾರದರ್ಶಕತೆ ಹೆಚ್ಚಿಸಬಹುದಾಗಿದೆ ಎಂಬ ಸಲಹೆ ಬಂದಿತ್ತು. ಈ ನಿಟ್ಟಿನಲ್ಲಿ ಪ್ರಯತ್ನವೂ ಆರಂಭವಾಗಿ ಯುಎನ್​ಡಿಪಿ ಸಹಭಾಗಿತ್ವದಲ್ಲಿ ಯೋಜನಾ ಇಲಾಖೆಯಿಂದ ಸಿಎಸ್​ಆರ್ ಆನ್​ಲೈನ್ ವೇದಿಕೆ ಸಿದ್ಧಪಡಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ.ಇದನ್ನೂ ಓದಿ:ಗಂಡನಿಗಾಗಿ ರಾಷ್ಟ್ರೀಯ ಬ್ಯಾಡ್ಮಿಂಟನ್​ ಶಿಬಿರದಿಂದ ಹೊರಗುಳಿದ ಸೈನಾ..!
ಗೀತಂ ವಿಶ್ವವಿದ್ಯಾಲಯದ ಜತೆ ಸೇರಿ ಯೋಜನಾ ಇಲಾಖೆಯು ಜಿಎಸ್​ಡಿಪಿ ಡ್ಯಾಶ್ ಬೋರ್ಡ್ ರಚನೆಗೆ ಮುಂದಾಗಿದೆ. ಈ ಡ್ಯಾಶ್ ಬೋರ್ಡ್ ತ್ವರಿತವಾಗಿ ಸೃಷ್ಟಿಸಿ ಕರೊನಾದಿಂದ ರಾಜ್ಯಾದಾಯದ ಮೇಲಿನ ಪರಿಣಾಮ ಗುರುತಿಸಿ ಸೂಕ್ತ ನೀತಿ ರೂಪಿಸಲು ಸರ್ಕಾರ ಬಯಸಿದೆ. ಇಂಡೋನೇಷ್ಯಾದಲ್ಲಿ ಯುವ ಸಂಶೋಧಕರನ್ನೊಳಗೊಂಡ ಕರೊನಾ ದತ್ತಾಂಶ ವಿಶ್ಲೇಷಣಾ ಗುಂಪು ರಚಿಸಲಾಗಿದೆ. ಇದೇ ರೀತಿಯಲ್ಲಿ ಇಲ್ಲ್ಲೂ ಆಗಬೇಕೆಂದು ತಜ್ಞರು ಬಯಸಿದ್ದು, ಯುವ ಸಂಶೋಧಕರನ್ನೊಳಗೊಂಡ ಇಂಟರ್ನ್ ಗುಂಪು ರಚನೆ ಮಾಡಲಾಗಿದೆ.
ಕರೊನಾ ಎದುರಿಸುವುದು ಮತ್ತು ಮುಂದೆ ಏನು ಮಾಡಬೇಕೆಂಬ ಕುರಿತು ನೀಲಿನಕ್ಷೆ ಸಿದ್ಧವಾಗಿದೆ. ಅಭಿವೃದ್ಧಿ ಆಯುಕ್ತರು ಎಲ್ಲಾ ಇಲಾಖೆಗಳಿಗೆ ಪ್ರಸ್ತಾವನೆ ಕಳಿಸಿಕೊಟ್ಟಿದ್ದಾರೆ. ಯೋಜನಾ ಆಯೋಗದಿಂದ ಮುಂದಿನ ವಾರದಲ್ಲಿ ಉಪ ಸಮಿತಿಗಳನ್ನು ಮಾಡುತ್ತೇವೆ. ವಿವಿಧ ಇಲಾಖೆಗಳು ತಕ್ಷಣದಿಂದಲೇ ಕಾರ್ಯೋನ್ಮುಖವಾಗಿವೆ.
| ಬಿ.ಜೆ.ಪುಟ್ಟಸ್ವಾಮಿ, ಯೋಜನಾ ಮಂಡಳಿ ಉಪಾಧ್ಯಕ್ಷ
ಎಲ್ಲ ಶಾಲೆ, ಕಾಲೇಜುಗಳು, ಕರ್ನಾಟಕ ವಿಕಾಸ ಕೇಂದ್ರಗಳನ್ನು ಸಂಜೆ ಪಾಳಿಯಲ್ಲಿ ಕೌಶಲ ತರಬೇತಿ ಕೇಂದ್ರವಾಗಿ ಬಳಸಿಕೊಳ್ಳುವುದು ಸೂಕ್ತ ಎಂದು ಐಐಎಸ್ಸಿ ತಜ್ಞರು ಸಲಹೆ ನೀಡಿದ್ದಾರೆ. ಇದಕ್ಕೆ ಆದ್ಯತೆ ಸಿಕ್ಕರೆ ಆಯ್ದ ಕಡೆಗಳಲ್ಲಿ ಉದ್ಯೋಗಕ್ಕೆ ಅನುಕೂಲಕರ ಅಥವಾ ಉದ್ಯಮ ಆರಂಭಕ್ಕೆ ಪೂರಕ ತರಬೇತಿಗಳು ಸಿಗಲಿವೆ.
ಇಂಡೋನೇಷ್ಯಾದಲ್ಲಿ ರಾಷ್ಟ್ರ ಮಟ್ಟದ ಸಂಶೋಧನಾ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಸಚಿವಾಲಯಗಳ ತಂಡ ರಚಿಸಿ ಕೋವಿಡ್​ನಿಂದ ಪಾರಾಗಲು ವಿನೂತನ ಸಂಶೋಧನೆ ಜಾರಿಗೆ ತರಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟದಲ್ಲಿ ಐಐಎಸ್ಸಿ, ಐಐಎಂ, ಐಐಐಟಿಬಿ, ವಿಶ್ವವಿದ್ಯಾಲಯಗಳನ್ನು ಸೇರಿಸಿ ತಂಡ ರಚಿಸುವ ಬಗ್ಗೆ ಒಲವು ವ್ಯಕ್ತವಾಗಿದೆ. ಈ ಬಗ್ಗೆ ಶೀಘ್ರವೇ ಸರ್ಕಾರದ ತೀರ್ಮಾನ ಪ್ರಕಟವಾಗುವ ಸಾಧ್ಯತೆ ಇದೆ.ಇದನ್ನೂ ಓದಿ:ರಾಜಧಾನಿಯಲ್ಲಿ ಸಜ್ಜಾಯ್ತು ಇನ್ನೊಂದು ಕೋವಿಡ್​ ಆಸ್ಪತ್ರೆ; ಇನ್ಫೋಸಿಸ್​, ವಿಪ್ರೋ ನೆರವು
ಎಟಿಎಂ ಮಾದರಿಯಲ್ಲಿ ಎಟಿಆರ್ ಸ್ಥಾಪಿಸುವ ಅಗತ್ಯವನ್ನು ತಜ್ಞರು ಪ್ರತಿಪಾದಿಸಿದ್ದು, ಸರ್ಕಾರದ ಮಟ್ಟದಲ್ಲಿ ಪ್ರಾಥಮಿಕ ಹಂತದ ಚರ್ಚೆ ನಡೆದಿದೆ. ವಿಯೆಟ್ನಾಂನಲ್ಲಿ ರೈಸ್ ಎಟಿಎಂ ಅನುಷ್ಠಾನ ಮಾಡಿದ್ದು, ಇಲ್ಲೂ ಇಂಥ ಪ್ರಯೋಗ ಮಾಡುವ ಸಾಧ್ಯತೆ ಇದೆ. ಎಟಿಎಂ ಮಾದರಿಯ ಯಂತ್ರದ ಮುಂದೆ ನಿಂತು ಬಟನ್ ಒತ್ತಿದರೆ ಒಂದೂವರೆ ಕೆಜಿ ಅಕ್ಕಿ ಬರುವ ವ್ಯವಸ್ಥೆ ಅಲ್ಲಿದೆ.
ಗಣೇಶ ವಿಸರ್ಜನೆ ವೇಳೆ ಪ್ರಸಾದ ತಿಂದವರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − five =
Remember me
