| ಎನ್.ಎಲ್. ಶಿವಮಾದು ಬೆಂಗಳೂರುಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಳೆದ ಮಾರ್ಚ್/ಏಪ್ರಿಲ್​ನಲ್ಲಿ 5 ಮತ್ತು 8ನೇ ತರಗತಿ ಮಕ್ಕಳಿಗೆ ನಡೆಸಿದ ಮೌಲ್ಯಾಂಕನ (ಸಂಕಲನಾತ್ಮಕ ಮೌಲ್ಯಮಾಪನ-2) ವಿಶ್ಲೇಷಣಾತ್ಮಕ ವರದಿಯನ್ನು ಶಾಲಾ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಕಲಿಕೆಯಲ್ಲಿ 8ನೇ ತರಗತಿಗಿಂತ 5ನೇ ಕ್ಲಾಸ್ ಮಕ್ಕಳೇ ಮುಂದಿದ್ದಾರೆ. ಗ್ರಾಮೀಣರು ಮತ್ತು ಬಾಲಕಿಯರು ಮೇಲುಗೈ ಸಾಧಿಸಿದ್ದು, 5ನೇ ತರಗತಿಯಲ್ಲಿ ಸರ್ಕಾರಿ ಶಾಲೆ ಹಾಗೂ 8ನೇ ತರಗತಿಯಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳು ಮುಂದಿದ್ದಾರೆ. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ವರದಿಯನ್ನು ಪ್ರಕಟಿಸಿದೆ. 2023-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಯ 5ನೇ ತರಗತಿಯ 9,59,734 ಮತ್ತು 8ನೇ ತರಗತಿಯ 9,43,919 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 5ನೇ ತರಗತಿಯ 80,945 ಹಾಗೂ 8ನೇ ತರಗತಿಯ 82,388 ವಿದ್ಯಾರ್ಥಿಗಳ ಫಲಿತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಮಾ.27ರಿಂದ ಏ.1ರವರೆಗೆ ಈ ಮೌಲ್ಯಾಂಕನ ನಡೆಸಲಾಗಿತ್ತು. ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನ್ಯತೆ, ಕಲಿಕಾ ಪ್ರಗತಿ ಹಾಗೂ ಯಾವ ವಿಷಯದಲ್ಲಿ ಎಷ್ಟು ಹಿನ್ನಡೆ ಎಂಬುದನ್ನು ತಿಳಿಯಲು ಪರೀಕ್ಷೆ ಕೈಗೊಳ್ಳಲಾಗಿತ್ತು.
ಶಿಕ್ಷಣ ಇಲಾಖೆಯು ಈ ಹಿಂದೆ ರಾಜ್ಯ ಕಲಿಕಾ ಸಾಧನಾ ಸಮೀಕ್ಷೆಯನ್ನು 3,5,8,9 ಮತ್ತು 10ನೇ ತರಗತಿಗೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ 5 ಮತ್ತು 8ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆಯು ಕ್ರಮವಾಗಿ ಶೇ.71 ಮತ್ತು ಶೇ.51 ಇತ್ತು. 5ನೇ ತರಗತಿಯ ಮೌಲ್ಯಾಂಕನದಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಆದರೆ, 8ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಶೇ.77 ಆಗಿದ್ದರೆ, ಹಿಂದಿನ ಸಮೀಕ್ಷೆಯಲ್ಲಿ ಶೇ.51 ಆಗಿತ್ತು. ಈ ವ್ಯತ್ಯಾಸದ ಕಾರಣಕ್ಕೆ ತುಲನಾತ್ಮಕ ಅಧ್ಯಯನದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಡಲಾಗಿದೆ. ಎರಡೂ ತರಗತಿಯಲ್ಲಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿದೆ. ಶೇ.80 ಗ್ರಾಮೀಣ ಮತ್ತು ಶೇ.76 ನಗರ ಪ್ರದೇಶದ ಮಕ್ಕಳು ಸಾಧನೆ ಮಾಡಿದ್ದಾರೆ.
ಪರಿಶಿಷ್ಟ ಮಕ್ಕಳ ಸಾಧನೆ:5ನೇ ತರಗತಿಯಲ್ಲಿ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಕಲಿಕೆ ಶೇ.79 ರಷ್ಟಿದೆ. 8ನೇ ತರಗತಿಯಲ್ಲಿ ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಾಧನೆ ಶೇ.78 ರಷ್ಟಿದ್ದು, ಶೇ.77 ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಾಧನೆಯಾಗಿದೆ.
– ಜಿಲ್ಲಾ ಹಂತದಲ್ಲಿ ಎಲ್ಲ ಅನುಷ್ಠಾನಾಧಿಕಾರಿಗಳು ಫಲಿತಾಂಶ ವಿಶ್ಲೇಷಣೆಯನ್ನು ಗ್ರಹಿಸುವುದು ಹಾಗೂ ತಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಫಲಿತಾಂಶವನ್ನು ಸೂಕ್ಷ್ಮವಾಗಿ ಅವಲೋಕಿಸಿ ಸುಧಾರಣೆಗೆ ಕಾರ್ಯತಂತ್ರ ರೂಪಿಸುವುದು
– 5 ತ್ತು 8ನೇ ತರಗತಿಯಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಬೇಕಾದ ಸಾಮರ್ಥ್ಯಗಳ ವಿಷಯವಾರು ಪಟ್ಟಿಯನ್ನು ನೀಡಿದ್ದು, ಈ ಸಾಮರ್ಥ್ಯಗಳ ಸುಧಾರಣೆಗೆ ಶಿಕ್ಷಕರಿಗೆ ಹೊಸ ಕಾರ್ಯತಂತ್ರಗಳನ್ನು, ನಾವೀನ್ಯತಾ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಪೂರಕವಾಗುವಂತೆ, ಕಾರ್ಯಾಗಾರಗಳು, ಸಮಾಲೋಚನಾ ಸಭೆಗಳನ್ನು ಹಮ್ಮಿಕೊಳ್ಳಲು ಕ್ರಮವಹಿಸುವುದು
– ಭಾಷೆ ಮತ್ತು ಇತರ ವಿಷಯಗಳ ಕಲಿಕೆಗೆ ಸಂಬಂಧಿಸಿದಂತೆ ಉನ್ನತಮಟ್ಟದ ಕೌಶಲದ ಸಾಮರ್ಥ್ಯಗಳನ್ನು ನಿರೀಕ್ಷಿಸುವ ಪ್ರಶ್ನೆಗಳಿಗೆ ನೀಡಿರುವ ಪ್ರತಿಕ್ರಿಯೆ ಸಾಕಷ್ಟು ಸುಧಾರಿಸಬೇಕಿದೆ. ಈ ನಿಟ್ಟಿನಲ್ಲಿ ಈ ಅಂಶಗಳ ಸುಧಾರಣೆಗೆ ಪೂರಕವಾಗಿ ಶಾಲಾ ಹಂತದಲ್ಲಿ ಕ್ರಿಯಾ ಸಂಶೋಧನೆಗಳನ್ನು ಹಾಗೂ ಡಯಟ್ ಹಂತದಲ್ಲಿ ಅಧ್ಯಯನ ಕೈಗೊಳ್ಳುವಂತೆ ಪ್ರೇರೇಪಿಸುವುದು.
ಬಾಲಕಿಯರೇ ಮುಂದು:5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆ ಗಮನಿಸಿದಾಗ 5ನೇ ತರಗತಿಯಲ್ಲಿ ಶೇ.78 ಮತ್ತು 8ನೇ ತರಗತಿಯಲ್ಲಿ ಶೇ.77 ವಿದ್ಯಾರ್ಥಿಗಳ ಕಲಿಕಾ ಸಾಧನೆಯಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಂತೆ 5 ಮತ್ತು 8ನೇ ತರಗತಿಯಲ್ಲಿಯೂ ಬಾಲಕಿಯರ ಸಾಧನೆಯೇ ಉತ್ತಮವಾಗಿದೆ.
ಮೀನು ಮಾರ್ಕೆಟ್​ನಲ್ಲಿ ಮಾತೃವಾತ್ಸಲ್ಯ ಅನಾವರಣ; ವಿದೇಶದಿಂದ ಮಗ ಮುಖಮುಚ್ಚಿಕೊಂಡು ಬಂದರೂ ಗುರುತು ಹಿಡಿದ ಅಮ್ಮ!

ಸಿದ್ದರಾಮಯ್ಯಗೆ ಅಡುಗೆ ಮಾಡಲು ಬರುತ್ತಾ? ಹೆಂಡ್ತಿ ಹತ್ರ ಸಿಎಂ ಯಾವತ್ತಾದ್ರೂ ಬೈಸಿಕೊಂಡಿದ್ರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − two =
Remember me
