ಮುಂಬೈ:ಕರ್ನಾಟಕದ ಗಡಿಭಾಗವಾದ, ಕನ್ನಡಿಗರು ಬಹುಸಂಖ್ಯಾತ ರಾಗಿರುವ ಮಹಾರಾಷ್ಟ್ರದ ಸೊಲ್ಲಾಪುರದ ಪರಿತೆವಾಡಿ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆಯ ಶಿಕ್ಷಕ ರಂಜಿತ್​ಸಿಂಹ ದಿಸಾಳೆ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಂಡನ್​ನ ನ್ಯಾಚುರಲ್ ಮ್ಯೂಸಿಯಂ ಆಫ್ ಹಿಸ್ಟರಿಯಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಗ್ಲೋಬಲ್ ಟೀಚರ್ಸ್ ಅವಾರ್ಡ್ ಘೋಷಣೆ ಮಾಡಲಾಗಿದೆ. ಪ್ರಶಸ್ತಿ 7.37 ಕೋಟಿ ರೂ. ಒಳಗೊಂಡಿದೆ.
ರಂಜಿತ್ ಸಿಂಹ ಕ್ವಿಕ್ ರೆಸ್ಪಾನ್ಸ್ ಕೋಡ್ (ಕ್ಯೂಆರ್ ಕೋಡ್) ಮೂಲಕ ಶಿಕ್ಷಣದಲ್ಲಿ ಕ್ರಾಂತಿ ಮೂಡಿಸಿದ ಖ್ಯಾತಿ ಪಡೆದಿದ್ದಾರೆ. ಕೋವಿಡ್ ಸಮಯದಲ್ಲಿ ಆನ್​ಲೈನ್ ಶಿಕ್ಷಣ ಅನಿವಾರ್ಯವಾದಾಗ ಸರ್ಕಾರಿ ಶಾಲೆ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ದೊರೆಯುವಂತೆ ನೋಡಿಕೊಂಡರು. ಒಂದರಿಂದ ನಾಲ್ಕನೇತರಗತಿವರೆಗಿನ ಎಲ್ಲ ಪಠ್ಯಗಳನ್ನು ಕ್ಯೂಆರ್ ಕೋಡ್​ಗೆ ಪರಿವರ್ತಿಸಿ ವಿದ್ಯಾರ್ಥಿಗಳು ಮೊಬೈಲ್​ನಲ್ಲಿಯೇ ಓದುವಂತೆ ವ್ಯವಸ್ಥೆ ಮಾಡಿದರು.
ಕನ್ನಡ ಕಲಿತು ಬೋಧನೆ:ಸೊಲ್ಲಾಪುರ ಕನಾಟಕದ ಗಡಿಭಾಗವಾದ್ದರಿಂದ ಇಲ್ಲಿ ಕನ್ನಡಿಗರೇ ಹೆಚ್ಚು. ಹೀಗಾಗಿ ಈ ಮಕ್ಕಳಿಗಾಗಿ ಕನ್ನಡ ಕಲಿತು, ಕನ್ನಡದಲ್ಲಿಯೇ ಬೋಧನೆ ಮಾಡಿದರು. ಗ್ರಾಮಸ್ಥರ ಮನಗೆದ್ದು ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮಾಡಿದರು. ಇದಕ್ಕಾಗಿ ಈ ಹಿಂದೆಯೇ ಇವರಿಗೆ 2016 ಹಾಗೂ 2018ರಲ್ಲಿ ನಾವೀನ್ಯತಾ ಸಂಶೋಧಕ ಪ್ರಶಸ್ತಿ ಸಂದಿವೆ. ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ಕೂಡ ರಂಜಿತ್ ಸಿಂಹ ಕಾರ್ಯವೈಖರಿಯನ್ನು ಪ್ರಶಂಸಿಸಿದ್ದಾರೆ.
ಕೊಟ್ಟಿಗೆಯಾಗಿದ್ದ ಶಾಲೆ:ಪರಿತೆವಾಡಿ ಶಾಲೆಗೆ ರಂಜಿತ್ ಸಿಂಹ ಶಿಕ್ಷಕರಾಗಿ ನೇಮಕಗೊಂಡಾಗ ಅದೊಂದು ಪಾಳುಬಿದ್ದ, ದನಗಳನ್ನು ಕಟ್ಟಲು ಬಳಸುತ್ತಿದ್ದ ಕಟ್ಟಡವಾಗಿತ್ತು. ಇದರ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತ ದಿಸಾಳೆ, ಶಾಲೆಯ ಚಿತ್ರಣವನ್ನೇ ಬದಲಿಸಿದರು. ಹೊಲ, ಗದ್ದೆಗಳಲ್ಲಿ ಪಾಲಕರೊಂದಿಗೆ ಕೆಲಸಕ್ಕೆ ಹೋಗುತ್ತಿದ್ದವರನ್ನು ಶಾಲೆಗೆ ಬರುವಂತೆ ಮಾಡಿದರು. ಸರ್ಕಾರಿ ಶಾಲೆಯಾದರೂ ಎಲ್ಲ ಆಧುನಿಕ ಸೌಕರ್ಯ ಸಿಗುವಂತೆ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
