ಕಲಬುರಗಿ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಮೂಲಕ ಎಫ್​ಡಿಎ ಹುದ್ದೆಗೆ ನೇರ ನೇಮಕಾತಿ ನಡೆಯುತ್ತಿದ್ದರೂ ಕಂದಾಯ ಇಲಾಖೆ ಇದರಿಂದ ಹೊರತಾಗಿದೆ. ಒಟ್ಟು ಹುದ್ದೆಗಳ ಶೇ.30 ನೇರ ನೇಮಕ ಮೂಲಕ ಭರ್ತಿ ಮಾಡಬೇಕೆಂಬ ರಾಜ್ಯ ನಾಗರಿಕ ಸೇವಾ ಕಾಯ್ದೆ ನಿಯಮ ಇದ್ದರೂ ಪರಿಗಣನೆಗೆ ಬರುತ್ತಿಲ್ಲ.
ಎಫ್​ಡಿಎ ಖಾಲಿ ಹುದ್ದೆಗಳನ್ನು ಗುರುತಿಸಿ ಆಯಾ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಆಯುಕ್ತರಿಗೆ ಮಾಹಿತಿ ನೀಡಬೇಕು. ರಾಜ್ಯದಲ್ಲಿ ಒಟ್ಟು ಖಾಲಿ ಹುದ್ದೆಗಳ ಪಟ್ಟಿ ಅಂತಿಮಗೊಳಿಸಿ ಭರ್ತಿ ಮಾಡಲು ಕೆಪಿಎಸ್​ಸಿಗೆ ಪ್ರಸ್ತಾವನೆ ಸಲ್ಲಿಸುವುದು ರೂಢಿ. ಆದರೆ, ಇದ್ಯಾವುದೂ ಆಗುತ್ತಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಹತ್ತಾರು ವರ್ಷಗಳಿಂದ ನೇರ ನೇಮಕಾತಿ ನಡೆದಿಲ್ಲ. ಬಡ್ತಿ, ಅನುಕಂಪ ಆಧರಿಸಿ ಮಾತ್ರ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಆಡಳಿತದ ನಿತ್ಯ ಚಟುವಟಿಕೆಗೆ ತೊಂದರೆ ಆಗಿದ್ದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿದರೂ ನೇರ ನೇಮಕದ ಹುದ್ದೆ ಪ್ರತಿವರ್ಷ ಬ್ಯಾಕ್​ಲಾಗ್ ಮಾದರಿಯಲ್ಲಿ ತೋರಿಸಲೇಬೇಕೆಂಬ ನಿಯಮವಿದೆ.
ಅರ್ಹರು ಉದ್ಯೋಗ ವಂಚಿತ: ಕಲಬುರಗಿ ಜಿಲ್ಲಾ ಘಟಕದಲ್ಲಿ 63, ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ 24 ಎಫ್​ಡಿಎ ಹುದ್ದೆ ಖಾಲಿ ಇವೆ. ಈ ಪೈಕಿ ಶೇ.30 ನೇರ ನೇಮಕದಡಿ 26 ಹುದ್ದೆ ಭರ್ತಿ ಮಾಡಬೇಕು. ಇದರಲ್ಲಿ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಶೇ.80 ಮೀಸಲು ಸಿಗಲಿದೆ. ಒಂದು ಜಿಲ್ಲೆಯಲ್ಲಿ 30-40 ಹುದ್ದೆ ಖಾಲಿ ಎಂದರೂ ರಾಜ್ಯದಲ್ಲಿ ಸಾವಿರಾರು ಹುದ್ದೆ ಖಾಲಿ ಉಳಿಯಲಿವೆ. ನೇರ ನೇಮಕಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ್ದರಿಂದ ಪದವಿ, ಸ್ನಾತಕೋತ್ತರ ಪದವೀಧರರು ಉದ್ಯೋಗವಂಚಿತರಾಗಿ ಪರದಾಡುತ್ತಿದ್ದಾರೆ.
ವೆಬ್​ಗೆ ಅಪ್​ಲೋಡ್:ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆ ವಿವರ ಕಡ್ಡಾಯವಾಗಿ ಕರ್ನಾಟಕ ಸರ್ಕಾರದ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು. ಇದರಿಂದ ಸಾರ್ವಜನಿಕರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಗಳು ಸರ್ಕಾರದ ಎಲ್ಲ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಮೂಲಕ ಗಮನ ಸೆಳೆದಿದ್ದನ್ನು ಸ್ಮರಿಸಬಹುದು.
ಕಂದಾಯ ಇಲಾಖೆಯಲ್ಲಿ ಎಫ್​ಡಿಎ ಹುದ್ದೆಗಳನ್ನು ನೇರ ನೇಮಕದಿಂದ ಭರ್ತಿ ಮಾಡಲೇಬೇಕು. ಈ ಮೂಲಕ ಸಾವಿರಾರು ನಿರುದ್ಯೋಗಿಗಳಿಗೆ ಅರ್ಹತೆ ಆಧಾರದ ಮೇಲೆ ಉದ್ಯೋಗ ದೊರೆಯಲಿದೆ. ಉಳಿದ ಇಲಾಖೆಗಳಂತೆ ನೇರ ನೇಮಕ ಪ್ರಕ್ರಿಯೆಗೆ ಸರ್ಕಾರ ಮುಂದಾಗಬೇಕು.
| ಶರಣಪ್ಪ ಮಟ್ಟೂರ್ ವಿಧಾನ ಪರಿಷತ್ ಸದಸ್ಯ
ಪ್ರಥಮ ದರ್ಜೆ ಸಹಾಯಕರ ನೇರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಇತ್ತೀಚೆಗೆ ಏಳೆಂಟು ಜನ ನೇರ ನೇಮಕದ ಮೂಲಕ ಸೇವೆಗೆ ಸೇರಿದ್ದಾರೆ. ಸರ್ಕಾರ ಆಗಾಗ್ಗೆ ನೇರ ನೇಮಕ ಮೂಲಕ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುತ್ತಿದೆ.
| ಡಾ.ಶಂಕ್ರಣ್ಣ ವಣಿಕ್ಯಾಳ ಅಪರ ಜಿಲ್ಲಾಧಿಕಾರಿ ಕಲಬುರಗಿ
ಸರ್ಕಾರದ ಇತರ ಇಲಾಖೆಗಳಂತೆ ಕಂದಾಯ ಇಲಾಖೆಯೂ ನೇರ ನೇಮಕದ ಕೋಟಾ ಶೇ.30 ಎಫ್​ಡಿಎ ಹುದ್ದೆ ಭರ್ತಿ ಮಾಡಿದ್ದಲ್ಲಿ ಸಾವಿರಾರು ಮಂದಿಗೆ ನೌಕರಿ ಸಿಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಬೇಕು.
| ಮಲ್ಲಿಕಾರ್ಜುನ ಗರೂರ್ ಅಧ್ಯಕ್ಷ, ಬಸವಸೇವಾ ಪ್ರತಿಷ್ಠಾನ ಕಲಬುರಗಿ
ಜಯತೀರ್ಥ ಪಾಟೀಲ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 2 =
Remember me
