ರುದ್ರಣ್ಣ ಹರ್ತಿಕೋಟೆ ಬೆಂಗಳೂರುಕೃಷಿ ಕ್ಷೇತ್ರದಲ್ಲಿನ ಆವಿಷ್ಕಾರಗಳು ಮತ್ತು ತಾಂತ್ರಿಕತೆಗಳನ್ನು ವಾಣಿಜ್ಯೀಕರಣ ಮಾಡುವ ಮೂಲಕ ಉದ್ಯಮಶೀಲತೆಗೆ ಉತ್ತೇಜನದ ಜತೆಗೆ ಉದ್ಯೋಗಗಳನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಿದೆ.
ಕೃಷಿಗೆ ಮುಂದಾಗಿದ್ದ ಯುವಕರು ಭ್ರಮನಿರಸನಗೊಂಡು ನಗರಗಳತ್ತ ಮರುವಲಸೆ ಆರಂಭಿಸಿರುವುದರಿಂದ ಕೃಷಿಯಲ್ಲಿಯೇ ಹೆಚ್ಚಿನ ಉದ್ಯೋಗ ಗಳನ್ನು ನವೋದ್ಯಮಗಳ ಮೂಲಕವೇ ಕಂಡುಕೊಳ್ಳಬೇಕೆಂದು ಸರ್ಕಾರ ನಿರ್ಧರಿಸಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ನಾವೀನ್ಯತೆ ಪ್ರೋತ್ಸಾಹಿಸಸಲು ಸಿಎಂ ಸಿದ್ದರಾಮಯ್ಯ ಬಜೆಟ್​ನಲ್ಲಿ 10 ಕೋಟಿ ರೂ. ಮೀಸಲಿಟ್ಟಿದ್ದರು. ಇದೀಗ ಯೋಜನೆ ಆರಂಭಕ್ಕೆ ಸಿದ್ಧತೆ ನಡೆದಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹಣವನ್ನು ನವೋದ್ಯಮಗಳಿಗೆ ಮೀಸಲಿರಿಸಲಾಗುತ್ತದೆ ಎಂದು ಕೃಷಿ ಇಲಾಖೆ ಮೂಲಗಳು ಹೇಳಿವೆ. ರೈತರ ಆದಾಯ ದ್ವಿಗುಣಕ್ಕಾಗಿ ಸೆಕೆಂಡರಿ ಅಗ್ರಿಕಲ್ಚರ್ ಡೈರೆಕ್ಟರೇಟ್ (ಉಪ ಕೃಷಿ ನಿರ್ದೇಶನಾಲಯ) ಸ್ಥಾಪಿಸಿದೆ.
ರೈತರನ್ನು ಉದ್ಯಮಿಗಳಾಗಿಸಿದರೆ, ಉತ್ಪನ್ನಗಳ ಮೌಲ್ಯವರ್ಧನೆ ಮಾಡಿದರೆ ಮಾತ್ರ ಆದಾಯ ದ್ವಿಗುಣವಾಗಲು ಸಾಧ್ಯವಾಗುತ್ತದೆ. ಕೆಲ ರೈತರು ಈ ನಿಟ್ಟಿನಲ್ಲಿ ಮಾಡಿರುವ ಪ್ರಯತ್ನದಿಂದ ಮಧ್ಯವರ್ತಿಗಳಿಲ್ಲದೆ ಉತ್ಪನ್ನಗಳ ಮಾರಾಟದಲ್ಲಿ ಯಶಸ್ವಿಯಾಗಿದ್ದಾರೆ. ಅದನ್ನು ವಿಸ್ತರಣೆ ಮಾಡುವುದು ಸರ್ಕಾರದ ಯೋಜನೆಯಾಗಿದೆ.
ಕೃಷಿ ಪದವೀಧರರು, ಆಸಕ್ತ ಪ್ರಗತಿಪರ ರೈತರು ಕೃಷಿಯಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗುತ್ತದೆ. ಜತೆಗೆ, ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಗಳನ್ನು ಜಮೀನಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಗುತ್ತದೆ. ಯಾವುದೇ ನವೋದ್ಯಮ ಸ್ಥಾಪನೆಯಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ. ನವೋದ್ಯಮಗಳ ಆಯ್ಕೆಗೆ ಜಿಲ್ಲಾ, ರಾಜ್ಯಮಟ್ಟದಲ್ಲಿ ಕೃಷಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ. ಆ ಸಮಿತಿಗಳು ಕಾರ್ಯಸಾಧ್ಯತೆ, ವಿಭಿನ್ನತೆ, ವ್ಯವಹಾರ ಮಾದರಿ, ಮಾರುಕಟ್ಟೆ ಸಾಮರ್ಥ್ಯ, ಕಾರ್ಯ ನಿರ್ವಹಣೆ ತಂಡದ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡಬೇಕಾಗುತ್ತದೆ. ನೋಂದಣಿಯ ಬಗ್ಗೆಯೂ ವಿಶೇಷ ನಿಯಮಗಳಿರುತ್ತವೆ. ಗಳಿಕೆಯು ವರ್ಷದಲ್ಲಿ 5 ಕೋಟಿ ರೂ. ಮೀರುವಂತಿಲ್ಲ.
ಎಲ್ಲಿ ಸ್ಥಾಪನೆ?: ಮೈಸೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಬೆಳಗಾವಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಎರಡನೇ ಹಂತದ ನಗರಗಳಲ್ಲಿ ನವೋದ್ಯಮಗಳ ಸ್ಥಾಪನೆಗೆ ಒತ್ತು ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಆಯಾ ಭಾಗದ ಕೃಷಿ ಉತ್ಪನ್ನಗಳನ್ನು ಆಧರಿಸಿ ನವೋದ್ಯಮಗಳ ಸ್ಥಾಪಿಸುವುದು ಸರ್ಕಾರದ ಆಶಯವಾಗಿದೆ.
ಕೃಷಿ ನವೋದ್ಯಮಗಳೇ ಕಮ್ಮಿ: ದೇಶದಲ್ಲಿ 2014ರಿಂದ ನವೋದ್ಯಮ ಯುಗ ಆರಂಭವಾಯಿತು. 28 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳು ನವೋದ್ಯಮ ನೀತಿ ರೂಪಿಸಿಕೊಂಡಿವೆ. ದೇಶದಲ್ಲಿ ಅಂದಾಜು 70 ಸಾವಿರ ಸ್ಟಾರ್ಟಪ್​ಗಳಿದ್ದು, ಅದರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದವುಗಳ ಸಂಖ್ಯೆ 700 ಮೀರಿಲ್ಲ. ಅದರಲ್ಲೂ ಕೃಷಿ ಪದವೀಧರರಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿ ನವೋದ್ಯಮ ಸ್ಥಾಪಿಸಿದ್ದಾರೆ. ರಾಜ್ಯದಲ್ಲಿಯೂ ಕೃಷಿ ನವೋದ್ಯಮಗಳ ಸಂಖ್ಯೆ ಒಟ್ಟಾರೆ ಸ್ಟಾರ್ಟಪ್​ಗಳಲ್ಲಿ ಶೆ.10 ರಷ್ಟು ಮೀರುತ್ತಿಲ್ಲ. ಅವುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
ಉದ್ಯೋಗ ಸೃಷ್ಟಿ: ರಾಜ್ಯದಲ್ಲಿ 20 ಸಾವಿರ ಸ್ಟಾರ್ಟಪ್​ಗಳ ಮೂಲಕ 6 ಲಕ್ಷ ನೇರ ಹಾಗೂ 12 ಲಕ್ಷ ಪರೋಕ್ಷ ಉದ್ಯೋಗಸ್ಥಾಪನೆ ಗುರಿ ಹೊಂದಲಾಗಿದೆ. ಅದರಲ್ಲಿ ಕೃಷಿ ಸ್ಟಾರ್ಟಪ್​ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳು ಸ್ಥಾಪನೆಯಾಗಬೇಕು ಎಂಬ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ.
ಸವಾಲುಗಳ ನಿರ್ವಹಣೆ: ಕೃಷಿ ಕ್ಷೇತ್ರದಲ್ಲಿ ಅನೇಕ ಸವಾಲುಗಳಿವೆ. ತ್ವರಿತವಾಗಿ ಮಣ್ಣು, ರೋಗ, ಕೀಟಬಾಧೆಯ ಪರೀಕ್ಷೆಗಳು ನಡೆಯುತ್ತಿಲ್ಲ. ಗ್ರೇಡಿಂಗ್ ಆಗುತ್ತಿಲ್ಲ. ಇ-ಮಾರುಕಟ್ಟೆ ವ್ಯವಸ್ಥೆ ಸರಿಯಾಗುತ್ತಿಲ್ಲ. ಇವುಗಳಿಗೆ ನವೋದ್ಯಮಗಳ ಸ್ಥಾಪನೆಯಿಂದ ಪರಿಹಾರ ಸಾಧ್ಯವಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದಲೇ ನವೋದ್ಯಮಗಳಿಗೆ ನೆರವು ನೀಡಲಾಗುತ್ತಿದೆ.
ನೆರವು ಹೇಗೆ?:ಹೊಸ ನವೋದ್ಯಮಗಳ ಸ್ಥಾಪನೆಗೆ ಆರ್ಥಿಕ ನೆರವು ಹಾಲಿ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸಲು ನೆರವು ಕ ಷಿ ನವೋದ್ಯಮಗಳ ಸಾಮರ್ಥ್ಯಾಭಿವೃದ್ಧಿ ಹೊಸ ನವೋದ್ಯಮ ಗಳಿಗೆ ಕನಿಷ್ಠ 5 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳ ತನಕ ನೆರವು, ಅದರಲ್ಲಿ ಶೇ.50 ರಷ್ಟು ಬ್ಯಾಂಕ್ ಸಾಲದ ಮುಖಾಂತರ ಸಹಾಯಧನ ಇರುವ ನವೋದ್ಯಮಗಳ ವಿಸ್ತರಣೆಗೆ 20 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳ ತನಕ ನೆರವು. ಅದರಲ್ಲಿ ಶೇ.50 ರಷ್ಟು ಬ್ಯಾಂಕ್ ಸಾಲದ ಮೂಲಕ ಸಬ್ಸಿಡಿ  ಸಾಮರ್ಥ್ಯಾಭಿವೃದ್ಧಿಗೆ 20 ಲಕ್ಷ ರೂ. ನೆರವು, ತರಬೇತಿ ನೀಡಲು ಸಂಸ್ಥೆಗಳಿಗೆ ಶುಲ್ಕ
ಕೃಷಿಯಲ್ಲಿ ನೂತನ ತಾಂತ್ರಿಕತೆ ಮತ್ತು ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣ
ರೈತರ ಆದಾಯ ಹೆಚ್ಚಳದ ಮೂಲಕ ಹಳ್ಳಿಗಳಲ್ಲಿ ನೆಲೆಸುವಂತೆ ಮಾಡುವುದು
ಉದ್ಯೋಗಗಳ ಸೃಷ್ಟಿಗೆ ಅವಕಾಶ ಇರುವ ಉದ್ದಿಮೆಗಳ ಸ್ಥಾಪನೆ
ಉತ್ಪನ್ನಗಳನ್ನು ಬ್ರಾ್ಯಂಡಿಂಗ್ ಮಾಡಿ ಮಾರುಕಟ್ಟೆ ಕಂಡುಕೊಳ್ಳುವುದು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
