ರುದ್ರಣ್ಣ ಹರ್ತಿಕೋಟೆ ಬೆಳಗಾವಿರಾಜ್ಯದ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಹನೀಯರ ಹೆಸರಿನಲ್ಲಿ ರಚನೆಯಾಗಿರುವ ಟ್ರಸ್ಟ್​ಗಳ ಕಾರ್ಯಚಟುವಟಿಕೆಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿರುವುದು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರಾಜ್ಯದಲ್ಲಿ 24 ಟ್ರಸ್ಟ್ ಗಳನ್ನು ರಚನೆ ಮಾಡಲಾಗಿದೆ. ಈ ಟ್ರಸ್ಟ್​ಗಳು ಶಾಶ್ವತ ಅನುದಾನಕ್ಕೆ ಒಳಪಟ್ಟಿವೆ. ಆದರೆ ಈ ಟ್ರಸ್ಟ್ ಗಳ ಕಾರ್ಯ ನಿರ್ವಹಣೆ ತೃಪ್ತಿದಾಯಕವಾಗಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ.
ಟ್ರಸ್ಟ್​ಗಳು ರಚನೆಯಾಗಿ ಹಲವು ವರ್ಷ ಕಳೆದಿದ್ದರೂ ಅನೇಕ ಸಂಸ್ಥೆಗಳು ಪ್ರಗತಿ ಪರಿಶೀಲನೆಯನ್ನೇ ನಡೆಸಿಲ್ಲ. ಅನೇಕ ಟ್ರಸ್ಟ್​ಗಳು ಕಾಟಾಚಾರಕ್ಕೆ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಆದ್ದರಿಂದ ಸರ್ಕಾರ ಪ್ರತ್ಯೇಕ ನಿಯಮಗಳ ಮೂಲಕ ಸರಿದಾರಿಗೆ ತರಲು ನಿರ್ಧರಿಸಿದೆ. ಪ್ರತಿಯೊಂದು ಟ್ರಸ್ಟ್​ಗೆ ವಾರ್ಷಿಕ 10 ಲಕ್ಷ ರೂ.ಗಳಿಂದ 12 ಲಕ್ಷ ರೂ. ತನಕ ಅನುದಾನ ನೀಡಲಾಗುತ್ತಿದೆ. ಸರ್ಕಾರ ನೀಡುವ ಅನುದಾನದ ಸದ್ಬಳಕೆಯಾಗಬೇಕು ಎಂದು ಒಟ್ಟಾರೆ ಉದ್ದೇಶ
ವಾಗಿದೆ. ಟ್ರಸ್ಟ್​ಗಳ ನಿಯಮಾವಳಿಗಳಲ್ಲಿ ಬದಲಾವಣೆ ತರಲು ಡಿಸೆಂಬರ್ 20ರ ನಂತರ ಸಭೆ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀರ್ವನಿಸಿದ್ದಾರೆ.
ಏನು ಮಾಡಲಿದೆ ಸರ್ಕಾರ?:ಸರ್ಕಾರ ಟ್ರಸ್ಟ್​ಗಳ ನಿಯಮಾವಳಿಗಳಿಗೆ ಪೂರ್ಣ ತಿದ್ದುಪಡಿ ತರಲಿದೆ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಕಾರ್ಯ ನಿರ್ವಹಣೆಯಲ್ಲಿ ಬಿಗಿ ಮಾಡುವ ಜತೆಗೆ ಆರ್ಥಿಕ ಸಂಹಿತೆಯನ್ನು ರೂಪಿಸಲಿದೆ. ಒಟ್ಟಾರೆಯಾಗಿ ಟ್ರಸ್ಟ್​ಗಳನ್ನು ಸಾರ್ವಜನಿಕ ಆಸ್ತಿಯನ್ನಾಗಿ ಮಾಡಲಿದೆ.
ಸಾಂಸ್ಕೃತಿಕ ವಲಯದಲ್ಲಿ ಚರ್ಚೆ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ವರ್ಷ ನೂರಾರು ಸಂಘ-ಸಂಸ್ಥೆಗಳಿಗೆ ಅನುದಾನ ನೀಡುತ್ತದೆ. ಅನೇಕ ಸಂಸ್ಥೆಗಳ ಮೇಲೆ ಆರೋಪಗಳಿವೆ. ಇದೀಗ ಸರ್ಕಾರದ ಟ್ರಸ್ಟ್​ಗಳಿಗೆ ಮೂಗುದಾರ ಹಾಕಲು ಮುಂದಾಗಿರುವುದು ಲೆಟರ್​ಹೆಡ್ ಸಂಸ್ಥೆಗಳಲ್ಲಿ ಆತಂಕಕ್ಕೂ ಕಾರಣವಾಗಿದೆ. ಸಾಂಸ್ಕೃತಿಕ ವಲಯದಲ್ಲಿ ಈಗಾಗಲೇ ಈ ವಿಚಾರ ಚರ್ಚೆಗೂ ಒಳಪಟ್ಟಿದೆ.
ಟ್ರಸ್ಟ್​ಗಳಲ್ಲಿ ಏನಾಗಿದೆ?:ಅನೇಕ ಟ್ರಸ್ಟ್​ಗಳಿಗೆ ಜಿಲ್ಲಾಧಿಕಾರಿಗಳನ್ನು ಪದನಿಮಿತ್ತ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಕರ್ತವ್ಯದ ಹೊಣೆಗಾರಿಕೆ ಹೆಚ್ಚಿರುತ್ತದೆ. ಜತೆಗೆ ಅನೇಕ ಜಿಲ್ಲಾಧಿಕಾರಿಗಳಿಗೆ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಅದು ಟ್ರಸ್ಟ್​ಗಳ ಕಾರ್ಯ ಚಟುವಟಿಕೆ ನಿಲ್ಲುವಂತೆ ಮಾಡಿದೆ. ಬಹುತೇಕ ಟ್ರಸ್ಟ್​ಗಳಿಗೆ ಸರ್ಕಾರ ನೇಮಕ ಮಾಡುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಅನುಸರಿಸುತ್ತಿಲ್ಲ. ಹಿಂದುಳಿದ ವರ್ಗಗಳು, ಪರಿಶಿಷ್ಟರು, ಅಲ್ಪಸಂಖ್ಯಾತರಿಗೆ ಟ್ರಸ್ಟ್​ಗಳ ನಿರ್ದೇಶಕ ಸ್ಥಾನಗಳಿಗೆ ಅವಕಾಶ ಸಿಗುತ್ತಿಲ್ಲ. ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಎಲ್ಲ ವರ್ಗಗಳ ಅರ್ಹ ಪ್ರತಿಭಾವಂತರನ್ನು ಟ್ರಸ್ಟ್​ಗಳಿಗೆ ನೇಮಕ ಮಾಡಲು ಉದ್ದೇಶಿಸಲಾಗಿದೆ. ಅನೇಕ ಟ್ರಸ್ಟ್​ಗಳು ಸರ್ಕಾರದಿಂದಲೇ ರಚನೆಯಾಗಿದ್ದರೂ ಸಹ ಕುಟುಂಬದ ಸದಸ್ಯರೇ ತುಂಬಿದ್ದಾರೆ. ಕುಟುಂಬದ ಹಿಡಿತವನ್ನು ತಪ್ಪಿಸುವ ಮೂಲಕ ಯಾವ ವ್ಯಕ್ತಿಗಳ ಹೆಸರಿನಲ್ಲಿ ರಚನೆಯಾಗಿವೆಯೋ ಅಂತಹ ವ್ಯಕ್ತಿಗಳ ಆಶಯಗಳಿಗೆ ಪೂರಕವಾಗಿ ಕೆಲಸ ಮಾಡುವಂತೆ ಟ್ರಸ್ಟ್​ಗಳನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಸರ್ಕಾರ ವಾರ್ಷಿಕ ಬಿಡುಗಡೆ ಮಾಡುತ್ತಿರುವ ಅನುದಾನದ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕಾಗಿದೆ. ಎಲ್ಲಿಯೂ ದುರುಪಯೋಗವಾಗದಂತೆ ಕಾಲಕಾಲಕ್ಕೆ ಆಡಿಟ್ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಉದ್ದೇಶಿಸಿದೆ.
ಸರ್ಕಾರದ ಗ್ಯಾರಂಟಿಗಳ ಟೀಕೆ:ಇತ್ತೀಚೆಗೆ ಟ್ರಸ್ಟ್​ವೊಂದರ ಕಾರ್ಯಕ್ರಮದಲ್ಲಿ ಭಾಷಣಕಾರರೊಬ್ಬರು ಸರ್ಕಾರದ ಗ್ಯಾರಂಟಿಗಳ ಬಗ್ಗೆಯೇ ವಾಚಾಮ ಗೋಚರ ಟೀಕೆ ಮಾಡಿರುವುದು ಗಮನಕ್ಕೆ ಬಂದಿದೆ. ಇದು ಸರ್ಕಾರದ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆದ್ದರಿಂದಲೇ ಸರ್ಕಾರ ಕೆಲವೊಂದು ನಿಯಮಗಳನ್ನು ರೂಪಿಸಿ ನಿಯಂತ್ರಣ ಹಾಕಲು ಮುಂದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಗಳು ಹೇಳಿವೆ.
ಚಿತ್ರಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ
ಸರ್ಕಾರದ ವತಿಯಿಂದಲೇ ರಚನೆಯಾಗಿರುವ ಟ್ರಸ್ಟ್​ಗಳಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ. ಸರ್ಕಾರದ ಯೋಜನೆಗಳನ್ನೇ ಟೀಕಿಸುವ ಭಾಷಣಕಾರರನ್ನು ಕರೆಸಿ ಕಾರ್ಯಕ್ರಮ ಮಾಡುತ್ತಾರೆ. ಇದನ್ನು ಹೇಗೆ ಸಹಿಸಲು ಸಾಧ್ಯ? ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಟ್ರಸ್ಟ್​ಗಳ ಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದ ನಿಯಮಗಳಲ್ಲಿ ಬದಲಾವಣೆ ತರಲಾಗುತ್ತದೆ.
| ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 12 =
Remember me
