ರುದ್ರಣ್ಣ ಹರ್ತಿಕೋಟೆಬೆಂಗಳೂರು:ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ, ಸಮುದಾಯದಲ್ಲಿ ದ್ವೇಷ ಹರಡುವ ಯಾವುದೇ ಕೋಮು ಸಂಘಟನೆಗಳ ಸದಸ್ಯರಾಗುವಂತಿಲ್ಲ. ಸರ್ಕಾರಿ ನೌಕರರ ನಡತೆಯ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಆ ಮೂಲಕ ಸಮಾಜದಲ್ಲಿ ದ್ವೇಷ, ಅಸೂಯೆ ಭಾವನೆಗಳನ್ನು ಉದ್ದೀಪನಗೊಳಿಸುವ ಸಂಘಟನೆಗಳಿಂದ ನೌಕರರನ್ನು ದೂರವಿಡಲು ಮುಂದಾಗಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯ ಮುಂದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೌಕರರ ನಡತೆಯ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಮಂಡಿಸಿದೆ. ಅದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆಯೂ ಇದೆ. ಸರ್ಕಾರಿ ನೌಕರರ ನಡತೆಯ ಮೇಲೆ ಸಾಕಷ್ಟು ನಿಯಂತ್ರಣ ಸಾಧಿಸುವ ಹಾಗೂ ಎಚ್ಚರಿಕೆ ನೀಡುವಂತಹ ಕೆಲ ನಿಯಮಾವಳಿಗಳನ್ನು ಸರ್ಕಾರ 1966ರಲ್ಲಿಯೇ ರೂಪಿಸಿತ್ತು. ಅದಕ್ಕೆ 2021ರಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸಿ ಬಲಗೊಳಿಸಲಾಯಿತು.
ಶಿಕ್ಷೆ ಏನು?ಸರ್ಕಾರ ನಿಗದಿ ಪಡಿಸಿರುವ ನಡತೆಗಳ ನಿಯಮಾವಳಿ ಉಲ್ಲಂಘನೆ ಮಾಡಿದರೆ ಯಾವುದೇ ಶಿಕ್ಷೆಯನ್ನು ನೀಡುತ್ತಿಲ್ಲ. ಶಿಸ್ತುಕ್ರಮ ಎಂಬುದನ್ನು ಮಾತ್ರ ಹೇಳುತ್ತದೆ. ವೇತನ ಬಡ್ತಿ, ಅಮಾನತು ಅಂತಹ ಶಿಕ್ಷೆ ಇಲ್ಲದಿರುವುದರಿಂದ ಈ ನಿಯಮಾವಳಿಗಳನ್ನು ನೌಕರರು ಗಂಭೀರವಾಗಿ ಪರಿಗಣಿಸುತ್ತಾರಾ ಎಂಬ ಪ್ರಶ್ನೆಯೂ ಇದೆ.
ಅಗತ್ಯವೇನಿದೆ?ಇತ್ತೀಚಿನ ದಿನಗಳಲ್ಲಿ ಕೋಮುಭಾವನೆ ಕೆರಳಿಸಿ ಅಶಾಂತಿ ಉಂಟು ಮಾಡುವ ಸಂಘಟನೆಗಳು ಹೆಚ್ಚಾಗುತ್ತಿವೆ. ಸರ್ಕಾರಿ ನೌಕರರು ಇಂತಹ ಸಂಘಟನೆಗಳ ಸದಸ್ಯರಾಗಿ ತೊಡಗಿರುವ ದೂರುಗಳು ಸರ್ಕಾರಕ್ಕೆ ಬಂದಿವೆ. ಹೀಗಾಗಿ ಸರ್ಕಾರ ಕರ್ನಾಟಕ ಸಿವಿಲ್ ಸೇವೆ ನಿಯಮಾವಳಿಗಳಿಗೆ ತಿದ್ದುಪಡಿಯ ಮೂಲಕ ಸರ್ಕಾರಿ ನೌಕರರು ಜಾತ್ಯತೀತ ಹಾಗೂ ಕೋಮುರಹಿತವಾಗಿರುವಂತೆ ನೋಡಿಕೊಳ್ಳಲು ನಿರ್ಧರಿಸಿದೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ.
ತಿದ್ದುಪಡಿಯಲ್ಲಿ ಏನಿದೆ?ಸರ್ಕಾರಿ ನಾಗರಿಕ ಸೇವಾ ನೌಕರರು ಧರ್ಮ, ಜನಾಂಗ, ಪ್ರದೇಶ, ಭಾಷೆ, ಕೋಮು ಕಾರಣಗಳಿಂದ ಸಮುದಾಯಗಳ ನಡುವೆ ದ್ವೇಷ ಮತ್ತು ಅಸೂಯೆ ಭಾವನೆಗಳನ್ನು ಉದ್ದೀಪನಗೊಳಿಸುವ ಸಂಸ್ಥೆಗಳೊಂದಿಗೆ ಜತೆಗೂಡುವುದನ್ನು ಅಥವಾ ಸದಸ್ಯರಾಗುವುದನ್ನು ಪ್ರತಿಬಂಧಿಸುವ ವಿಚಾರ ಸಂಪುಟದ ಮುಂದೆ ಮಂಡಿಸಲಾಗುತ್ತಿದೆ.
ಆಸ್ತಿ ಮಾಹಿತಿ ಸಲ್ಲಿಕೆ?ಸರ್ಕಾರಿ ನೌಕರರು ತಮ್ಮ ಆಸ್ತಿಯ ವಿವರಗಳನ್ನು ಪ್ರತಿ ವರ್ಷ ಡಿಸೆಂಬರ್ ಅಂತ್ಯಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು. ಆದರೆ, ಅದನ್ನು ಹಣಕಾಸು ವರ್ಷ ಕೊನೆಯಾಗುವ ಮಾರ್ಚ್ ಅಂತ್ಯಕ್ಕೆ ಸಲ್ಲಿಸುವಂತೆ ಸರ್ಕಾರ ತಿದ್ದುಪಡಿಗೆ ಮುಂದಾಗಿದೆ. ಮೊದಲು ಮಾರ್ಚ್ ಅಂತ್ಯಕ್ಕೆ ಎಂದು ಇದ್ದಿದ್ದನ್ನು ಕೆಲ ವರ್ಷಗಳ ಹಿಂದೆ ಡಿಸೆಂಬರ್ ಅಂತ್ಯಕ್ಕೆ ಸಲ್ಲಿಸುವಂತೆ ತಿದ್ದುಪಡಿ ಮಾಡಲಾಗಿತ್ತು. ಇದೀಗ ನೌಕರರ ಬೇಡಿಕೆಯಂತೆ ಮತ್ತೆ ಮಾರ್ಚ್ ಅಂತ್ಯಕ್ಕೆ ಎಂದೇ ತಿದ್ದುಪಡಿ ಮಾಡಲಾಗುತ್ತಿದೆ.
ಯುವ ನೀತಿ?ಯುವ ಸಮುದಾಯಕ್ಕೆ ಸ್ಪಷ್ಟವಾದ ದಾರಿ ತೋರಿಸುವ ನಿಟ್ಟಿನಲ್ಲಿ ಸರ್ಕಾರ ರೂಪಿಸಿರುವ ಯುವ ನೀತಿಗೂ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗುತ್ತಿದೆ. ಯುವ ಸಬಲೀಕರಣ ಸಚಿವ ನಾರಾಯಣಗೌಡ ಆಸಕ್ತಿವಹಿಸಿ ಬಾಲಸುಬ್ರಮಣ್ಯ ನೇತೃತ್ವದ ಸಮಿತಿ ರಚನೆ ಮಾಡಿದ್ದರು. ಸಮಿತಿ ನೀಡಿದ ಶಿಫಾರಸುಗಳ ಆಧಾರದಲ್ಲಿ ನೀತಿ ಅಂತಿಮವಾಗಿದೆ. ಯುವಕ ಸಂಘಗಳನ್ನು ರಚನೆ ಮಾಡಿ ಅವುಗಳನ್ನು ನವೋದ್ಯಮಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ.
ನೌಕರರ ಮೇಲೆ ಹಾಲಿ ಇರುವ ನಿಯಂತ್ರಣಗಳು
ತಿದ್ದುಪಡಿ ಉದ್ದೇಶಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − two =
Remember me
