ಬೆಳಗಾವಿ:ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಸೋಮವಾರದಿಂದ ಮತ್ತಷ್ಟು ಗಂಭೀರ ವದನ, ತೀವ್ರ ಮಾತಿನ ಕದನ ಹಾಗೂ ಅಡಳಿತ, ಪ್ರತಿಪಕ್ಷಗಳ ರಾಜಕೀಯ ಪಟ್ಟು, ಪ್ರತಿಪಟ್ಟುಗಳ ಮೇಲಾಟಕ್ಕೆ ಸಾಕ್ಷಿಯಾಗುವ ಲಕ್ಷಣಗಳಿವೆ.
ಮೊದಲ ವಾರದಲ್ಲಿ ಉಭಯ ಸದನಗಳು ನಡೆದು ಬಂದ ದಾರಿ ಅವಲೋಕಿಸಿದರೆ, ಆಡಳಿತ- ಪ್ರತಿಪಕ್ಷಗಳು ತಮ್ಮದೇ ಕಾರ್ಯಸೂಚಿ ಅನುಷ್ಠಾನಕ್ಕೆ ಪ್ರಯತ್ನಿಸಿವೆ. ಸರ್ಕಾರದ ವೈಫಲ್ಯ, ಸಂಕಷ್ಟಗಳ ನಿರ್ಲಕ್ಷ್ಯದ ವಿರುದ್ಧ ಕಿಡಿ, ಹಲವು ಸಚಿವರ ಗೈರಿಗೆ ಆಕ್ರೋಶ, ಪರಿಶಿಷ್ಟ ಜಾತಿ, ಪಂಗಡಗಳ ಅನುದಾನ ಗ್ಯಾರಂಟಿಗಳಿಗೆ ಬಳಕೆ, ಹಲ್ಲೆ ಪ್ರಕರಣ ಮುಂದಿಟ್ಟುಕೊಂಡು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು.
ಆದರೆ, ಆಡಳಿತ ಪಕ್ಷವು ಬರಗಾಲ ನಿರ್ವಹಣೆ, ಉತ್ತರ ಕರ್ನಾಟಕದ ಅಭಿವೃದ್ಧಿ, ಕೇಂದ್ರ ಸರ್ಕಾರದ ವಿಳಂಬ ಧೋರಣೆಯನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳ ಆಕ್ರಮಣ ಹಿಮ್ಮೆಟ್ಟಿಸುವಲ್ಲಿ ಆಂಶಿಕವಾಗಿ ಸಫಲತೆ ಸಾಧಿಸಿದೆ. ಸದನದ ಮುಂದಿಟ್ಟ ವಿಷಯಗಳಲ್ಲಿ ಬಿಜೆಪಿ ಆಂತರಿಕ ಗೊಂದಲ, ಹೊಂದಾಣಿಕೆ ಕೊರತೆಯು ಕಾಂಗ್ರೆಸ್​ಗೆ ವರದಾನವಾಯಿತು. ಆಡಳಿತ, ಪ್ರತಿಪಕ್ಷಗಳ ಬಲ- ದೌರ್ಬಲ್ಯಗಳು ಕಲಾಪವನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಿದೆ ಎನ್ನುವುದು ಎರಡನೇ ವಾರದ ಕುತೂಹಲವಾಗಿದೆ.
ಶಾಸನಗಳನ್ನು ರಚಿಸುವುದು ಉಭಯ ಸದನಗಳ ಪ್ರಧಾನ ಕರ್ತವ್ಯವಾಗಿದೆ. ಈಗಾಗಲೆ ಮಂಡಿಸಿರುವುದು ಸೇರಿ 18 ವಿಧೇಯಕಗಳ ಮೇಲೆ ಚರ್ಚೆ ನಡೆದು, ಅಂಗೀಕಾರ ಪಡೆಯುವತ್ತ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಲಿದ್ದು, ಈ ನಿಟ್ಟಿನಲ್ಲಿ ಪ್ರತಿಪಕ್ಷಗಳ ಮನವೊಲಿಸಲು ಪ್ರಯತ್ನಿಸಿದರೂ ಅಚ್ಚರಿಯಿಲ್ಲ. ಬರಗಾಲ ನಿರ್ವಹಣೆ ಮೇಲೆ ಚರ್ಚೆಗೆ ಉತ್ತರ, ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯಗಳನ್ನು ಆಡಳಿತ ಪಕ್ಷ ಪದೇಪದೆ ಪ್ರಸ್ತಾಪಿಸಿ, ಪ್ರತಿಪಕ್ಷಗಳ ತಂತ್ರಗಾರಿಕೆ ವಿಫಲಗೊಳಿಸಲು ಆಡಳಿತ ಪಕ್ಷ ಪ್ರತಿತಂತ್ರ ಹೂಡುವ ಸಾಧ್ಯತೆಗಳಿವೆ.
ಪ್ರತಿಪಕ್ಷಗಳ ಧಾವಂತ: ಭ್ರಷ್ಟಾಚಾರ, ವರ್ಗಾವಣೆ, ಕಮಿಷನ್ ದಂಧೆ, ಲಂಚದ ಹಾವಳಿ ತಾರಕಕ್ಕೇರಲಿದೆ ಎಂಬ ಸುಳಿವು ನೀಡುತ್ತದೆ. ‘ಹಲೋ ಅಪ್ಪಾ’ ವೈರಲ್ ವಿಡಿಯೋ ವಿಚಾರವಾಗಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ವಿಸõತ ಚರ್ಚೆಗೆ ಅವಕಾಶ ಪಡೆಯಲು ಪ್ರತಿಪಕ್ಷ ಬಿಜೆಪಿ ಆಲೋಚಿಸಿದೆ ಎಂದು ಮೂಲಗಳು ತಿಳಿಸಿವೆ. ವರ್ಗಾವಣೆ ದಂಧೆ, ಕಮಿಷನ್ ವಿಚಾರವಾಗಿ ಹಲವು ಆರೋಪ ಪ್ರಕರಣಗಳು, ಹಲವು ಸಚಿವರು ತಮ್ಮ ಆಪ್ತರನ್ನೇ ಏಜೆಂಟರನ್ನಾಗಿ ನೇಮಿಸಿಕೊಂಡು ಬಿಡುಗಡೆಯಾದ ಅನುದಾನದಲ್ಲಿ ಪರ್ಸೆಂಟೇಜ್ ವಸೂಲಿಗೆ ಇಳಿದ ದೂರುಗಳು, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಕೇಸ್ ಕೈಬಿಟ್ಟ ಸಚಿವ ಸಂಪುಟದ ನಿರ್ಣಯ ಅಪ್ಪಳಿಸಲಿದೆ. ಪೂರಕವಾಗಿ ಐಟಿ ರೇಡ್ ವೇಳೆ ಗುತ್ತಿಗೆದಾರರ ನಿವಾಸದಲ್ಲಿ ಬಹು ಕೋಟಿ ರೂ. ಪತ್ತೆ ಪ್ರಕರಣಗಳನ್ನು ಬಳಸಿಕೊಂಡು ಸರ್ಕಾರದ ಮೇಲೆ ದಾಳಿ ನಡೆಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಬಿ.ವೈ. ವಿಜಯೇಂದ್ರ ತಯಾರಿ:ಸೋಮವಾರ ಉಭಯ ಸದನಗಳು ಸೇರುವ ಮುನ್ನ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಪಕ್ಷದ ಶಾಸಕರೊಂದಿಗೆ ಔಪಚಾರಿಕವಾಗಿ ರ್ಚಚಿಸಿ ಆಡಳಿತ ಪಕ್ಷವನ್ನು ಕಟ್ಟಿಹಾಕುವ ಕಾರ್ಯತಂತ್ರದ ತಾಲೀಮು ನಡೆಸುವ ಸಾಧ್ಯತೆಗಳಿವೆ.ಮೊದಲ ಚರಣದ ಅಧಿವೇಶನದಲ್ಲಿ ತಲೆದೋರಿದ ಗೊಂದಲ, ಸಮನ್ವಯದ ಕೊರತೆ ನಿವಾರಿಸಿ, ಸರ್ಕಾರದ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವುದು ಪೂರ್ವಭಾವಿ ಸಭೆಯ ಚಿಂತನೆಯಾಗಿದೆ ಎಂದು ಹೇಳಲಾಗುತ್ತಿದೆ.
ಬುಧವಾರ ಸಿಎಲ್ಪಿ ಸಭೆ:ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬುಧವಾರ ಬೆಳಗಾವಿಯಲ್ಲಿ ನಡೆಯಲಿದೆ. ಅಧಿವೇಶನದಲ್ಲಿ ಪ್ರತಿಪಕ್ಷದ ಟೀಕೆಯನ್ನು ಎದುರಿಸುವುದು, ಲೋಕಸಭೆ ಚುನಾವಣೆ ತಯಾರಿ, ಪಕ್ಷ ಹಾಗೂ ಸರ್ಕಾರದಲ್ಲಿನ ನೇಮಕ ಕುರಿತು ಚರ್ಚೆಯಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
