ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಖ್ಯಮಂತ್ರಿಯವರನ್ನು ಆವರಿಸಿಕೊಂಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಗರಣದ ಗ್ರಹಣ ನಿಧಾನವಾಗಿ ಸರಿಯಲು ಆರಂಭವಾಗಿರುವ ಲಕ್ಷಣ ಕಾಣಿಸಿದೆ. ಈ ಪ್ರಕರಣದಲ್ಲಿ ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ಎಚ್ಚರಿಕೆ ನಡೆ, ಕಾನೂನು ಪಂಡಿತರೊಂದಿಗಿನ ಚರ್ಚೆಯ ಬಳಿಕ ಸ್ಪಷ್ಟತೆ ತಂದುಕೊಳ್ಳುವ ಪ್ರಯತ್ನದಿಂದ ತಕ್ಷಣಕ್ಕೆ ಯಾವುದೇ ಕ್ರಮವಾಗುವುದು ಅನುಮಾನವಾಗಿದೆ.
ದಿನದ ಬೆಳವಣಿಗೆಯಲ್ಲಿ ರಾಜ್ಯಪಾಲರ ನಡೆ ಹಾಗೂ ರಾಜಭವನಕ್ಕೆ ಯಾರೆಲ್ಲ ಭೇಟಿ ನೀಡುತ್ತಾರೆ, ಅವರ ಉದ್ದೇಶ ಏನಿರಬಹುದೆಂಬುದರ ಕುರಿತೇ ಚರ್ಚೆ ಗಿರಕಿಹೊಡೆಯುತ್ತಿತ್ತು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಸಿಎಂ ಪುತ್ರ ಯತೀಂದ್ರ ಅವರು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಜತೆ ರಾಜಭವನಕ್ಕೆ ತೆರಳುತ್ತಾರೆಂಬ ಊಹಾಪೋಹ ಹರಿದಾಡಿತ್ತು. ಅಂತಿಮವಾಗಿ ಸಚಿವ ಸುಧಾಕರ್ ಮಾತ್ರವೇ ರಾಜಭವನಕ್ಕೆ ಭೇಟಿ ನೀಡಿದರು ಮತ್ತು ತಾವು ವಿಶ್ವವಿದ್ಯಾಲಯಗಳ ವ್ಯವಸ್ಥೆ ಸುಧಾರಣೆ ಕುರಿತು ಚರ್ಚೆ ನಡೆಸಲು ರಾಜ್ಯಪಾಲರನ್ನು ಭೇಟಿ ಮಾಡಿದ್ದಾಗಿ ಸ್ಪಷ್ಟಪಡಿಸಿದರು.
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆ ರಾಜ್ಯಪಾಲರನ್ನು ಕೋರಿದ್ದ ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ರಾಜಭವನಕ್ಕೆ ಭೇಟಿಕೊಟ್ಟರು. ತಮ್ಮ ಮೇಲೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರು ಮಾಡಿದ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಜತೆಗೆ ಶೀಘ್ರವೇ ಅಭಿಯೋಜನೆಗೆ ಅನುಮತಿ ನೀಡುವ ವಿಶ್ವಾಸವಿದೆ ಎಂದು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನೂ ನೀಡಿದರು.
ಆತುರವಿಲ್ಲ?:ಸಿಎಂ ವಿರುದ್ಧ ಅಭಿಯೋಜನೆಗೆ ಅವಕಾಶ ಕೊಡುವ ಅಥವಾ ಅಬ್ರಹಾಂ ಸಲ್ಲಿಸಿರುವ ಕೋರಿಕೆಯನ್ನು ತಿರಸ್ಕರಿಸುವ ಕುರಿತು ರಾಜ್ಯಪಾಲರು ತರಾತುರಿ ತೋರಿದಂತೆ ಕಾಣಿಸುತ್ತಿಲ್ಲ. ಅಬ್ರಹಾಂ ಅರ್ಜಿ ಕೊಟ್ಟ ದಿನವೇ ಸಿಎಂಗೆ ಶೋಕಾಸ್ ನೋಟಿಸ್ ಕೊಟ್ಟ ಕಾರಣ ರಾಜ್ಯಪಾಲರು ಆತುರದಲ್ಲಿದ್ದಾರೆಂಬ ವಿಶ್ಲೇಷಣೆ ಇತ್ತಾದರೂ ಅಂತಹ ಲಕ್ಷಣ ಕಾಣಿಸುತ್ತಿಲ್ಲ.
ವಿವೇಚನೆಯೇ ಮುಖ್ಯ:ಮುಡಾ ಪ್ರಕರಣದಲ್ಲಿ ಈವರೆಗೆ ತನಿಖೆಯೇ ನಡೆದಿಲ್ಲ ಮತ್ತು ಎಲ್ಲೂ ಸಹ ಮುಖ್ಯಮಂತ್ರಿ ಪಾತ್ರದ ಬಗ್ಗೆ ದಾಖಲೆ ಸಹ ಇಲ್ಲ. ಹೀಗಿರುವಾಗ ಮುಂದೆ ಎದುರಾಗಬಹುದಾದ ಕಾನೂನು ಹೋರಾಟದಲ್ಲಿ ರಾಜ್ಯಪಾಲರ ತೀರ್ಮಾನ ಹೆಚ್ಚು ವಿಶ್ಲೇಷಣೆಗೊಳಪಡುತ್ತದೆ. ಈ ಕಾರಣಕ್ಕೆ ಸಾವಧಾನ ಮಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಸಿಎಂಗೆ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಆದರೆ, ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ ಅಂತಹ ಚಟುವಟಿಕೆಯೇ ನಡೆದಿಲ್ಲ. ಈ ಕಾರಣಕ್ಕೆ ರಾಜ್ಯಪಾಲರ ವಿವೇಚನೆ ಮುಖ್ಯವಾಗುತ್ತದೆ.
ತನಿಖಾ ವರದಿ:ಪ್ರಸ್ತುತ ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಈ ಆಯೋಗ ತನ್ನ ಕೆಲಸ ಆರಂಭಿಸಿ ಸರ್ಕಾರಕ್ಕೆ ವರದಿ ಕೊಟ್ಟ ಬಳಿಕವಷ್ಟೇ ಅಬ್ರಹಾಂ ಅವರು ನೀಡಿರುವ ಅಭಿಯೋಜನೆ ಕೋರಿಕೆ ಅರ್ಜಿಯ ಮಹತ್ವ ಎಷ್ಟೆಂಬುದು ಸ್ಪಷ್ಟವಾಗಲಿದೆ.
ಇನ್ನೊಂದು ಬೆಳವಣಿಗೆಯಲ್ಲಿ ರಾಜ್ಯಪಾಲರು ಮುಡಾ ಪ್ರಕರಣವನ್ನು ಸಿಬಿಐ, ಲೋಕಾಯುಕ್ತ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದ ತನಿಖಾ ಸಮಿತಿಯಿಂದ ತನಿಖೆಗೆ ನಡೆಸಿ ವರದಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬಹುದಾದ ಸಾಧ್ಯತೆ ಕುರಿತು ಚರ್ಚೆಯಾಗಿತ್ತು. ಈಗಿನ ಸಂದರ್ಭದಲ್ಲಿ ತನಿಖೆ ಕುರಿತೂ ಸಹ ರಾಜ್ಯಪಾಲರು ನಿರ್ಧರಿಸುವ ಸಾಧ್ಯತೆ ಕಡಿಮೆ. ಪ್ರಕರಣದ ಕುರಿತು ಹೆಚ್ಚುವರಿ ಸ್ಪಷ್ಟನೆ ಕೇಳಬಹುದು, ದಾಖಲೆ ಬಯಸಬಹುದಷ್ಟೇ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ನಾಯಕರಿಗೆ ರಾಂಗ್ ಅಡ್ವೈಸ್:ಬಿ.ಎಸ್.ಯಡಿಯೂರಪ್ಪ ಪ್ರಕರಣದಲ್ಲಾದಂತೆ ಇಲ್ಲೂ ರಾಜ್ಯಪಾಲರು ಆಸಕ್ತಿ ತೋರಿದರೆ ಅಭಿಯೋಜನೆಗೆ ಕೊಟ್ಟುಬಿಡಬಹುದು. ಇದರಿಂದ ಸಿಎಂ ಖುರ್ಚಿಗೆ ಆಪತ್ತು ಬರುತ್ತದೆ ಎಂದು ಮುಖ್ಯಮಂತ್ರಿಯವರಲ್ಲಿ ಆತಂಕ ಬಿತ್ತಿದ್ದು ಯಾರೆಂಬ ಬಗ್ಗೆ ಕಾಂಗ್ರೆಸ್​ನಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಅಲ್ಲದೇ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಯವರಿಂದಲೇ ಸ್ಪಷ್ಟನೆ ಕೊಡಿಸಿದ ಪ್ರಯತ್ನಕ್ಕೂ ಸಹ ಕಾಂಗ್ರೆಸ್ ವಲಯದಲ್ಲೇ ವ್ಯತಿರಿಕ್ತ ಅಭಿಪ್ರಾಯ ಕೇಳಿಬರಲಾರಂಭಿಸಿದೆ.
ಇನ್ನೊಂದು ಸುತ್ತಿನ ದಾಖಲೆ ಬಿಡುಗಡೆಗೆ ಸಿದ್ಧತೆ: ಮುಡಾ ಹಗರಣ ಕೇವಲ 14 ನಿವೇಶನ ವಿಚಾರವಲ್ಲ. ಅದರಾಚೆಗೂ ಇದೆ ಎಂದು ಬಿಜೆಪಿ ವಾದಿಸುತ್ತಲೇ ಬಂದಿದೆ ಮತ್ತು ಆ ನಿಟ್ಟಿನಲ್ಲಿ ಮಾಹಿತಿ ಹೊರ ಹಾಕಲು ಚಿಂತನೆ ನಡೆಸಿದೆ. ಹೊಸ ಸರ್ಕಾರ ಬಂದ ನಂತರ ಯಾರಿಗೆಲ್ಲ ನಿವೇಶನ ಸಿಕ್ಕಿದೆ? ರಾಜಕಾರಣಿಗಳ ಸಂಬಂಧಿಗಳು ಯಾರು ಎಂದು ಮಾಹಿತಿ ಕೆದಕುವ ಕೆಲಸ ನಡೆಸಿದೆ. ಇನ್ನೊಂದೆಡೆ ಸರ್ಕಾರ ಕೂಡ ಮುಡಾ ದಾಖಲೆಯನ್ನು ಬೆಂಗಳೂರಿಗೆ ತಂದಿದ್ದು, ಬಿಜೆಪಿ, ಜೆಡಿಎಸ್​ನವರು ಯಾರದ್ದೆಲ್ಲ ಇದೆ ಎಂದು ಪಟ್ಟಿ ಮಾಡುವ ಕೆಲಸ ನಡೆದಿದೆ. ಎರಡೂ ಪಕ್ಷಗಳು ಕ್ರಮವಾಗಿ ಆ.9 ಹಾಗೂ 10ರಂದು ದಾಖಲೆ ಬಹಿರಂಗಪಡಿಸಲು ಬಯಸಿವೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.
* ಮುಡಾ ಸೈಟು ಮಾಡಿ ಜನರಿಗೆ ನಿವೇಶನ ಹಂಚಿಕೆಯಾಗಿದ್ದರೂ ಕೃಷಿ ಜಮೀನು ಎಂದು ನೋಂದಣಿಯಾಗಲು ಹೇಗೆ ಸಾಧ್ಯವಾಯಿತು?
* ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿದ್ದಾಗ ಅಲ್ಲಿ ನಿವೇಶನ ಕಂಡಿರಬೇಕು, ಕೃಷಿ ಭೂಮಿ ಹೇಗೆ ಕಾಣಲು ಸಾಧ್ಯ. ಕೃಷಿ ಭೂಮಿ ಇದೆ ಎಂದು ವರದಿ ಪಡೆಯಲು ಡಿಸಿ ಮೇಲೆ ಒತ್ತಡ ತಂದವರು ಯಾರು?
* ಪರಿಹಾರ ರೂಪದಲ್ಲಿ ಸಮಾನಾಂತರ ಬಡಾವಣೆಯಲ್ಲೇ ಜಮೀನು ಅಥವಾ ನಿವೇಶನ ಪಡೆದುಕೊಳ್ಳಬೇಕಾಗಿತ್ತು. ಪ್ರೖೆಮ್ ಏರಿಯಾದಲ್ಲಿ ಪರಿಹಾರ ರೂಪದ ನಿವೇಶನ ಪಡೆದುಕೊಳ್ಳಲು ಹೇಗೆ ಸಾಧ್ಯವಾಯಿತು?
* 50:50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಕೊಡುವುದು ಬೇಡ ಎಂದು ನಗರಾಭಿವೃದ್ಧಿ ಇಲಾಖೆ ಆದೇಶವಿದ್ದರೂ ಅದನ್ನು ಉಲ್ಲಂಘಿಸಿದ್ದರ ಹಿಂದೆ ಯಾರಿದ್ದರು?
ಮೈಸೂರು:ಕೆಸರೆ ಗ್ರಾಮದ ದೇವನೂರು ಬಡಾವಣೆ ಜಮೀನು ವಿವಾದ ತಾರಕಕ್ಕೆ ಏರಿರá-ವ ನಡá-ವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರá-ದ್ಧ ಈಗ ರಾಜ್ಯಪಾಲರಿಗೆ ಇನ್ನೊಂದು ‘ಭೂ ವಿವಾದ’ ದೂರು ನೀಡಲಾಗಿದೆ.
ಮೈಸೂರು ತಾಲೂಕು ವರುಣ ಹೋಬಳಿ ಸರ್ಕಾರಿ ಉತ್ತನಹಳ್ಳಿ ಗ್ರಾಮದ ಸರ್ವೆ ನಂ. 205/2ರಲ್ಲಿನ 1.39 ಎಕರೆ ಜಮೀನನ್ನು ಸಿದ್ದರಾಮಯ್ಯ ಪ್ರಭಾವ ಬಳಸಿ ಭೂ ಸ್ವಾಧೀನದಿಂದ ಕೈ ಬಿಡಿಸಿ ಮಾರಪ್ಪ ಅವರ ಹೆಸರಿಗೆ ಮಾಡಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈ ಜಮೀನು ಸರ್ಕಾರಿ ಜಮೀನಾಗಿದ್ದು, ಕೆಲವರು ಉಳá-ಮೆ ಮಾಡಿಕೊಂಡು ಬಂದಿದ್ದ ಫಲಾನá-ಭವಿಗಳ ಹೆಸರಿನಲ್ಲಿ ಇತ್ತು. 24-11-1979ರ ರಾಜ್ಯ ಪತ್ರದ ಪ್ರಕಾರ ಸರ್ಕಾರಿ ಉತ್ತನಹಳ್ಳಿಯ ಸರ್ವೆ ನಂ.42/3, 44/1, 44/2, 205/2ರಲ್ಲಿ ಒಟ್ಟು 7.01 ಎಕರೆ ಜಮೀನನ್ನು ನಿವೇಶನಗಳನ್ನಾಗಿ ಪರಿರ್ವಸಿ ಫಲಾನá-ಭವಿಗಳಿಗೆ ಹಂಚಿಕೆ ಮಾಡಿ ಜಮೀನು ಮಾಲೀಕರಿಗೆ ಪರಿಹಾರವನ್ನು ನೀಡಲಾಗಿತ್ತು ಎಂದಿದ್ದಾರೆ.
ಆದರೆ ಡಿ.ಸಾಲುಂಡಿಯ ಮರಪ್ಪ ಅವರು ಸರ್ವೆ ಸಂಖ್ಯೆ 205/2ರಲ್ಲಿ ಅನಧಿಕೃತವಾಗಿ ಇಟ್ಟಿಗೆಗೆ ಮಣ್ಣು ತೆಗೆಯá-ತ್ತಾ ನಿವೇಶನ ಹಂಚಿಕೆಯಾದ ಫಲಾನá-ಭವಿಗಳು ಬಾರದಂತೆ ತಡೆದಿದ್ದರು. ಮೂಲ ದಾಖಲೆ ಪ್ರಕಾರ ಭೂಮಿ ಕುಂಡ ಬೀರಯ್ಯ, ಕಾಳಯ್ಯ ಎಂಬá-ವರಿಗೆ ಸೇರಿದ್ದರೂ ನಕಲಿ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ ಎಂದು ಆಪಾದಿಸಿದ್ದಾರೆ. ಈ ಮಧ್ಯೆ 10-08-2008ರಲ್ಲಿ ಮುಖ್ಯಮಂತ್ರಿಯಾಗಿರá-ವ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗೆ ಪತ್ರ (ಪತ್ರ ಸಂಖ್ಯೆ 681/2008-09) ಬರೆದು ಮರಪ್ಪ ಬಿನ್ ಬೀರಮ್ಮ ಸರ್ಕಾರಿ ಉತ್ತನಹಳ್ಳಿಯ 205/2ರ ಜಮೀನಿನಲ್ಲಿ ವ್ಯವಸಾಯ ಮಾಡá-ತ್ತಿದ್ದು, ಜೀವನ ಸಾಗಿಸಲು ಬೇರೆ ಯಾವುದೇ ರೀತಿಯ ಆದಾಯ ಇಲ್ಲದಿರá-ವುದರಿಂದ ಸದರಿ ಭೂಮಿಯನ್ನು ಭೂ ಸ್ವಾಧೀನ ಪ್ರÅಯೆಯಿಂದ ಕೈ ಬಿಡá-ವಂತೆ ತಿಳಿಸಿದ್ದಾರೆ. ರಾಜೕಯ ಪ್ರಭಾವಕ್ಕೆ ಒಳಗಾದ ಅಂದಿನ ಅಧಿಕಾರಿಗಳು, ಭೂಮಿಯನ್ನು 13-10-2009ರಲ್ಲಿ ಭೂ ಸ್ವಾಧೀನ ಪ್ರÅಯೆಯಿಂದ 205/2ರ 1.39 ಎಕರೆಯನ್ನು ಕೈ ಬಿಟ್ಟಿದ್ದಾರೆ. ಆದ್ದರಿಂದ ಈ ಕá-ರಿತು ಜಿಲ್ಲಾಧಿಕಾರಿಗಳಿಂದ ತನಿಖೆ ನಡೆಸಿ ತಕ್ಷಣ ವರದಿ ತರಿಸಿಕೊಂಡು ಕ್ರಮಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಮಾರೋಪದಲ್ಲಿ ದೇವೇಗೌಡರು ಭಾಗಿ ಸಾಧ್ಯತೆ:ಮುಡಾ ಹಗರಣ ವಿರೋಧಿಸಿ ಬಿಜೆಪಿ, ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಸಮಾರೋಪ ಸಮಾರಂಭವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮತ್ತು ರ್ತಾಕ ಅಂತ್ಯಕ್ಕೆ ಕೊಂಡೊಯ್ಯಲು ಮೈತ್ರಿ ಪಕ್ಷಗಳು ಪ್ರಯತ್ನ ನಡೆಸಿವೆ. ಅದರ ಭಾಗವಾಗಿ ಮೈಸೂರಿನಲ್ಲಿ ಆ.10 ರಂದು ನಡೆಯಲಿರುವ ಸಮಾರೋಪಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸುವ ಪ್ರಯತ್ನ ನಡೆಸಿವೆ. ಬಹುತೇಕ ದೇವೇಗೌಡರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡರು ಪಾದಯಾತ್ರೆ ಸಮಾರೋಪದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪಾದಯಾತ್ರೆಗೆ ಅದ್ಭುತ ಜನಬೆಂಬಲವೂ ವ್ಯಕ್ತವಾಗುತ್ತಿದೆ. ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ದೇವೇಗೌಡರನ್ನು ಆಹ್ವಾನಿಸಲಾಗುತ್ತದೆ. ಅವರು ಭಾಗವಹಿಸುವ ನಿರೀಕ್ಷೆ ಇದೆ.
| ಟಿ.ಎ.ಶರವಣ ವಿಧಾನ ಪರಿಷತ್ ಜೆಡಿಎಸ್ ಸದಸ್ಯ.
ಕುಸ್ತಿ ಪಂದ್ಯದಲ್ಲಿ ಮಹತ್ವದ ಸಾಧನೆ ಮಾಡಿದ ಭಾರತ, ಫೈನಲ್​ ತಲುಪಿದ ವಿನೇಶ್ ಫೋಗಟ್

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:two × three =
Remember me
