ಬೆಂಗಳೂರು:6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರವಿದ್ದರೂ ತರಬೇತಿ ನೌಕರರು ಮತ್ತು ಈ ಹಿಂದೆ ಅಮಾನತಾಗಿರುವ ನೌಕರರ ಮೂಲಕ ಬಸ್ ಸೇವೆ ಮುಂದುವರಿದಿದೆ.
ಬೆಂಗಳೂರು, ಮೈಸೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಬಸ್ ಸೇವೆ ಆರಂಭವಾಗಿದ್ದು, ರಾಜ್ಯಾದ್ಯಂತ ನಾಲ್ಕು ನಿಗಮಗಳ ಈವರೆಗೆ 134 ಬಸ್​ಗಳು ರಸ್ತೆಗೆ ಇಳಿದಿವೆ. ಈ ಪೈಕಿ ಬಿಎಂಟಿಸಿಯ 28, ಕೆಎಸ್​ಆರ್​ಟಿಸಿ 38, ಈಶಾನ್ಯ ಕರ್ನಾಟಕ ನಿಗಮದ 54 ಹಾಗೂ ವಾಯುವ್ಯ ಕರ್ನಾಟಕ ನಿಗಮದ 14 ಬಸ್​ಗಳು ಸಂಚಾರ ಆರಂಭಿಸಿವೆ. ಕೆಲವೆಡೆ ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಬಸ್ ಸಂಚಾರ ನಡೆಯುತ್ತಿದೆ.
ಕರ್ತವ್ಯಕ್ಕೆ ಹಾಜರಾಗದಿದ್ದರೆ ತಾತ್ಕಾಲಿಕ ಪಟ್ಟಿಯಿಂದ ತೆಗೆದು ಹಾಕುವ ಕುರಿತು ತರಬೇತಿ ನೌಕರರಿಗೆ ಸಾರಿಗೆ ನಿಗಮಗಳು ನೋಟಿಸ್ ನೀಡಿದ್ದವು. ಆ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 2 ಸಾವಿರಕ್ಕೂ ಹೆಚ್ಚಿನ ತರಬೇತಿ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕೆಲವೆಡೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಗುಲಾಬಿ ಹೂ ನೀಡಿ ಅಧಿಕಾರಿಗಳು ಸ್ವಾಗತಿಸುತ್ತಿದ್ದ ದೃಶ್ಯ ಕಂಡು ಬಂತು. ಕೊಪ್ಪಳದಲ್ಲಿ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ಬಸವರಾಜ ಹಾಗೂ ಹಂಚನಾಳಗೆ ವಿಭಾಗೀಯ ಆಯುಕ್ತ ಎಂ.ಎ.ಮುಲ್ಲಾರಿಂದ ಗುಲಾಬಿ ಹೂ ನೀಡಿ ಕಳುಹಿಸಿದರು.
ಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ

ಪರ್ಮನೆಂಟ್ ಜಾಬ್​ ಬೇಕಂದ್ರೆ ಬೆತ್ತಲೆ ವಿಡಿಯೋ ಕಳಿಸ್ಬೇಕು! ಓಕೆ ಅಂತ ವಿಡಿಯೋ ಕಳಿಸಿದ ಬೆನ್ನಲ್ಲೇ ಕಾದಿತ್ತು ಶಾಕ್​

ಪತ್ನಿ ಮಲಗಿದ್ದ ಮನೆಗೆ ಬೆಂಕಿ ಇಟ್ಟು 7 ಜನರನ್ನ ಕೊಂದ ಪತಿ! ಬಳಿಕ ಮಗಳಿಗೆ ಕರೆ ಮಾಡಿ ಮನದಾಳ ಬಿಚ್ಚಿಟ್ಟ ಕ್ರೂರಿ

ಪಾರ್ಟಿಗೆ ಹೋಗ್ಬೇಕು ಚಪಾತಿ ಮಾಡಮ್ಮ ಎಂದ ಮಗ ಶವವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 3 =
Remember me
