ಬೆಂಗಳೂರು:ರಾತ್ರಿ ಮುಷ್ಕರ ಕೈ ಬಿಟ್ತೀವಿ ಅಂದ್ರು, ಬಳಿಕ ಉಲ್ಟಾ ಹೊಡೆದರು. ಹೀಗೆ ಮಾಡಿದ್ರೆ ಏನರ್ಥ? ಯಾರು ಉಳಿ ಹಿಂಡುತ್ತಿದ್ದಾರೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಸಚಿವ ಆರ್​.ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಸೋಮವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಮಧ್ಯಾಹ್ನ 1 ಗಂಟೆಯಾದರೂ ಸಾರಿಗೆ ಸಂಚಾರದಲ್ಲಿನ ಅಸ್ತವ್ಯಸ್ತ ಹಾಗೆ ಇದೆ. ಪರಿಣಾಮ ಭಾರಿ ಸಂಕಷ್ಟಕ್ಕೆ ಸಿಲುಕಿರುವ ಸಾರ್ವಜನಿಕರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಜತೆಗೆ ಸರ್ಕಾರದ ಕೆಂಗಣ್ಣಿಗೂ ಕೋಡಿಹಳ್ಳಿ ಗುರಿಯಾಗಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್​ ಅವರು ಗಂಟೆಗೊಂದು ಹೇಳಿಕೆ ಕೊಡ್ತಿದ್ದಾರೆ. ಎಸ್ಸಿ-ಎಸ್ಟಿ ನೌಕರರು ಮುಷ್ಕರಕ್ಕೆ ಬೆಂಬಲ ನಿಡಲ್ಲ ಎಂದಿದ್ದಾರೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ
ವಿಧಾನಸೌಧದಲ್ಲಿ ಮಾತಾಡೋದು ಒಂದು, ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡೋದು ಮತ್ತೊಂದು. ಈಗ ನಡೆದುಕೊಳ್ಳುತ್ತಿರುವುದು ಇನ್ನೊಂದು… ಸಾರಿಗೆ ನೌಕರರೇ ಸಾರ್ವಜನಿಕರು- ರೋಗಿಗಳಿಗೆ ತೊಂದರೆ ಆಗ್ತಿದೆ. ಮುಷ್ಕರ ಕೈ ಬಿಟ್ಟು ಕೆಲಸಕ್ಕೆ ಹಾಜರಾಗಿ. ನಿನ್ನೆ(ಭಾನುವಾರ) ಸರ್ಕಾರ ಒಪ್ಪಿದಂತೆ ನಿಮ್ಮ 9 ಬೇಡಿಕೆ ಈಡೇರಿಸಲು ಸಿದ್ಧವಾಗಿದೆ ಎಂದು ಆರ್.ಅಶೋಕ್​ ಮನವಿ ಮಾಡಿದ್ದಾರೆ.
ನಮಗೆ ಯಾವುದೇ ಪ್ರತಿಷ್ಠೆ ಇಲ್ಲ. ಜನರ ಸಮಸ್ಯೆ ಮುಖ್ಯ. ಸಿಎಂ ಜತೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸಾರ್ವಜನಿಕರಿಗೆ ತೊಂದರೆ ಆಗ್ತಿದೆ ಎಂದು ಮೂರು ದಿನಗಳಿಂದ ಮೂವರು ಸಚಿವರು, ಸಿಎಂ ಶ್ರಮ ಪಡ್ತಿದ್ದೇವೆ. ಆದರೂ ಮುಷ್ಕರ ಮುಂದುವರಿಸುವುದು ಸರಿಯಲ್ಲ. ಡ್ರೈವರ್​ಗಳಿಗೂ ಗೊಂದಲ ಉಂಟಾಗಿದೆ, ಒಮ್ಮೆ ಬಸ್ ಹತ್ತುತ್ತಾರೆ, ಇಳಿಯುತ್ತಾರೆ ಎಂದು ಕೋಡಿಹಳ್ಳಿ ವಿರುದ್ಧ ಅಶೋಕ್ ಅಸಮಾಧಾನ ಹೊರ ಹಾಕಿದರು.
ಇನ್ನು ಮೆಜೆಸ್ಟಿಕ್​ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಕೆಲ ಪ್ರಯಾಣಿಕರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಕೋಡಿಹಳ್ಳಿ ರೈತ ನಾಯಕನೇ ಅಲ್ಲ, ನೌಕರರು ಕೋಡಿಹಳ್ಳಿ ಮಾತು ಕೇಳಿ‌ ಮೋಸ ಹೋಗ್ತಿದ್ದಾರೆ. ಕೋಡಿಹಳ್ಳಿ ಸಿಕ್ಕಿದ್ರೆ ಕಲ್ಲು ಹೊಡಿತೀವಿ ಎಂದೆಲ್ಲ ವಾಗ್ದಾಳಿ ನಡೆಸಿದರು.
ಜನಾಕ್ರೋಶಕ್ಕೆ ಬೆದರಿದ್ರು ಕೋಡಿಹಳ್ಳಿ – ಸಾರ್ವಜನಿಕ ಹಿತ ಮುಖ್ಯ ಎನ್ನುತ್ತ, ಮುಷ್ಕರ ಮಾಡುವ ನೌಕರರಿಗೆ ಆಸೆ, ನಿರಾಸೆ ಸಾಮಾನ್ಯ ಅಂದ್ರು

https://www.vijayavani.net/love-case-suicide/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
