ಬೆಂಗಳೂರು:ವಿದ್ಯುತ್ ಸಂಕಷ್ಟದಿಂದ ತಕ್ಷಣ, ತುರ್ತು ಪರಿಹಾರದ ಮಾರ್ಗವಾಗಿ ರಾಜ್ಯದೊಳಗಿನ ಖಾಸಗಿ ವಿದ್ಯುತ್ ಉತ್ಪಾದಕರಿಗೆ ಸರ್ಕಾರ ಲಗಾಮು ಹಾಕಿದೆ. ಸಿಎಂ ಸಿದ್ದರಾಮಯ್ಯ ಇಂಧನ ಇಲಾಖೆ ಅಧಿಕಾರಿಗಳ ಜತೆಗೆ ಇತ್ತೀಚೆಗೆ ಸಭೆ ನಡೆಸಿ, ವಿದ್ಯುತ್ ಬಿಕ್ಕಟ್ಟಿಗೆ ಪರಿಹಾರೋಪಾಯಗಳನ್ನು ಸೂಚಿಸಿದ್ದರು.
ಈ ಪೈಕಿ ವಿದ್ಯುತ್ ಕಾಯ್ದೆ ಕೊಡಮಾಡಿದ ಅಧಿಕಾರ ಬಳಸಿಕೊಂಡರೆ ಕೊರತೆ ಪ್ರಮಾಣ ಗಣನೀಯವಾಗಿ ತಗ್ಗಿಸಲು ಸಾಧ್ಯವಿದೆ ಎಂದು ಅರಿತು, ಕಾಯ್ದೆಯ ಸೆಕ್ಷನ್ 11 ಅಸ ಪ್ರಯೋಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ನಂತರ ಇಂಧನ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆದು, ಸೆಕ್ಷನ್ 11 ಜಾರಿಗೆ ಪೂರಕ ನಡವಳಿ, ವಿವರಣೆ ಪ್ರಸ್ತಾಪವನ್ನು ಅಂತಿಮಗೊಳಿಸಲಾಯಿತು. ವಿದ್ಯುತ್ ಕಾಯ್ದೆ 2003ರ ಸೆಕ್ಷನ್ 11 ಜಾರಿಗೊಳಿಸಿ ಇಂಧನ ಇಲಾಖೆ ಸೋಮವಾರ ಆದೇಶಿಸಿದೆ.
ವಿದ್ಯುತ್ ಕಾಯ್ದೆ 2003ರ 11ನೇ ವಿಧಿಯಿಂದ ಪ್ರದತ್ತವಾದ ‘ಅಸಾಧಾರಣ ಸಂದರ್ಭದಲ್ಲಿ ಆ ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ವಿದ್ಯುತ್ ಉತ್ಪಾದನಾ ಕಂಪನಿ ಕೇಂದ್ರವನ್ನು ನಿರ್ವಹಿಸುತ್ತದೆ ಮತ್ತು ನಿರ್ವಹಿಸುತ್ತದೆ ಎಂದು ಸರ್ಕಾರ ನಿರ್ದಿಷ್ಟಪಡಿಸಬಹುದು’ ಅಧಿಕಾರವನ್ನು ಸರ್ಕಾರ ಇದೀಗ ಚಲಾಯಿಸಿದೆ.
ಪವನ, ಸೌರ ಇತ್ಯಾದಿ ನವೀಕೃತ, ಕೋಜನ್, ಕಿರು ಜಲ, ಶಾಖೋತ್ಪನ್ನ ಸೇರಿ ರಾಜ್ಯದೊಳಗಿನ ಖಾಸಗಿ ಉತ್ಪಾದಕರಿಂದ 1,500 ಮೆ.ವಾ. ಲಭಿಸುವ ಅಂದಾಜಿಸಿದೆ. ರಾಜ್ಯದೊಳಗೆ ಪರವಾನಗಿ ಹೊಂದಿದ ವಿತರಕರೊಂದಿಗೆ ಖಾಸಗಿ ಉತ್ಪಾದಕರು ಅರ್ಹವಾದ ವಿದ್ಯುತ್ ಖರೀದಿ ಒಪ್ಪಂದ (ಪಿಪಿಎ) ಮಾಡಿಕೊಂಡಿದ್ದರೆ ಈ ನಿರ್ಬಂಧ ಅನ್ವಯಿಸುವುದಿಲ್ಲ.
ಪೂರ್ವ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳದ ಖಾಸಗಿ ವಿದ್ಯುತ್ ಕೇಂದ್ರಗಳು ಇನ್ನು ಮುಂದೆ ಮುಕ್ತ ಜಾಲಕ್ಕೆ ಮಾರಾಟ ಮಾಡಲು ಅವಕಾಶವಿಲ್ಲ. ಉಡುಪಿ ವಿದ್ಯುತ್ ಸ್ಥಾವರವು ಪ್ರತಿದಿನ ಉತ್ಪಾದಿತ ವಿದ್ಯುತ್‌ನ್ನು ಪಿಪಿಎ ಪ್ರಕಾರ ರಾಜ್ಯಕ್ಕೆ ನೀಡುತ್ತಿದೆ. ಆದರೆ ಸ್ಥಾಪಿತ ಸಾಮರ್ಥ್ಯ (ಎರಡು ಘಟಕಗಳು ತಲಾ 600 ಮೆ.ವಾ.)ದಂತೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ನೀಡಲು ಸೂಚಿಸಿದೆ.
ಖಾಸಗಿ ಉತ್ಪಾದಕರು ನೀಡುವ ಪ್ರತಿ ಯೂನಿಟ್‌ಗೆ ಸಾಗಣೆ ಮತ್ತು ಇತರ ವೆಚ್ಚ ಹೊರತುಪಡಿಸಿ ಪ್ರತಿ ಯೂನಿಟ್‌ಗೆ 4.86 ರೂ.ದರವನ್ನು ಆದೇಶದಲ್ಲಿ ಸರ್ಕಾರ ಪ್ರಸ್ತಾಪಿಸಿದೆ. ಕೇಂದ್ರೀಯ ವಿದ್ಯುತ್ ವಿನಿಮಯದ ದತ್ತಾಂಶಗಳು, ಕಳೆದ ಆರು ಅವಧಿಯಲ್ಲಿನ ಅಲ್ಪಾವಧಿ ಖರೀದಿ ಒಪ್ಪಂದದ ದರಗಳನ್ನು ವಿಶ್ಲೇಷಿಸಿ ಸರ್ಕಾರ ಈ ದರ ಉಲ್ಲೇಖಿಸಿದೆ.
ಆದರೆ ಎಸ್ಕಾಂಗಳು ಅಧಿಕೃತವಾಗಿ ಸಲ್ಲಿಸಲಿರುವ ಅಫಿಡವಿಟ್‌ಗೆ ಕೆಇಆರ್‌ಸಿ ನೀಡಲಿರುವ ಆದೇಶದ ಪ್ರಕಾರ ಪ್ರತಿ ಯೂನಿಟ್ ದರ ಅಂತಿಮಗೊಳ್ಳಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ವಿದ್ಯುತ್ ಮಾಪಕ ಜಂಟಿಯಾಗಿ ಓದಿದ ಬಳಿಕ ಮಾಸಿಕ ಇನ್‌ವೈಸ್ ಸೃಷ್ಟಿಯಾಗುತ್ತದೆ. ಈ ಬಿಲ್ ಸರ್ಕಾರಕ್ಕೆ ಸಲ್ಲಿಕೆಯಾದ ಐದು ದಿನಗಳೊಳಗೆ ಪಾವತಿಸಿದರೆ ಶೇ.2ರಷ್ಟು ಇಲ್ಲವೇ 30 ದಿನಗಳೊಳಗೆ ಪಾವತಿಸಿದರೆ ಶೇ.1ರಷ್ಟು ವಿನಾಯಿತಿ ಲಭಿಸಲಿದೆ.
ಹಾಗೆಯೇ ಖಾಸಗಿ ಉತ್ಪಾದಕರಿಂದ ಪಡೆದ ಎಸ್ಕಾಂಗಳು ಬಿಲ್ ಪಾವತಿಸಲು ವಿಳಂಬ ಮಾಡಿದರೆ ಬ್ಯಾಂಕ್ ನಿಯಮಾವಳಿ ಪ್ರಕಾರ ದಂಡವನ್ನೂ ತೆರಬೇಕಾಗುತ್ತದೆ. ಬಿಲ್ ಪಾವತಿ ವಿಳಂಬದ ಅವಧಿ ಆಧರಿಸಿ ದಂಡದ ಮೊತ್ತ ನಿಗದಿಯಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
