*ಮಾನವ ಸಂಪನ್ಮೂಲ ಬಳಕೆಯಲ್ಲಿ ಅಸಮತೋಲನ*ಹೆಚ್ಚುವರಿ ನೌಕರರಿಂದ ಆರ್ಥಿಕ ಸಂಕಷ್ಟ
ಅವಿನಾಶ ಮೂಡಂಬಿಕಾನಬೆಂಗಳೂರು: ಕರೊನಾ ಹಾಗೂ ಪ್ರವಾಹ ಸಂಕಷ್ಟದಿಂದಾಗಿ ತೆರಿಗೆ ಸಂಗ್ರಹ ದಾಖಲೆ ಪ್ರಮಾಣದಲ್ಲಿ ಕುಸಿತವಾಗಿರುವ ನಡುವೆಯೇ ಬಿಳಿಯಾನೆಯಂತಾಗಿರುವ ಇಲಾಖೆಗಳ ನಿರ್ವಹಣೆ ಕೂಡ ರಾಜ್ಯದ ಅರ್ಥವ್ಯವಸ್ಥೆಗೆ ಹೊರೆಯಾಗಿದೆ. ವಿವಿಧ ಇಲಾಖೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಇರುವ ಪರಿಣಾಮ ವಾರ್ಷಿಕ 2 ಸಾವಿರ ಕೋಟಿ ರೂ.ನಷ್ಟ ಉಂಟಾಗುತ್ತಿದೆ ಎಂದು ಅಂದಾಜಿಸಲಾಗಿದೆ.

5,20,000
72 ಇಲಾಖೆಗಳ ನೌಕರರ ಸಂಖ್ಯೆ
40,000
ಕೋಟಿ ರೂ. ವೇತನಕ್ಕೆ ವ್ಯಯ
2,40,000
ಸರ್ಕಾರಿ ಹುದ್ದೆ ಖಾಲಿ
ರಾಜ್ಯ ಸರ್ಕಾರದ 72 ಇಲಾಖೆಗಳಲ್ಲಿ 5.20 ಲಕ್ಷ ನೌಕರರಿದ್ದು, ವಾರ್ಷಿಕ ಅಂದಾಜು 40 ಸಾವಿರ ಕೋಟಿ ರೂ. ವೇತನಕ್ಕಾಗಿಯೇ ಬೇಕಾಗುತ್ತದೆ. ಕೆಲ ಇಲಾಖೆಗಳಲ್ಲಿ ಕಾರ್ಯಭಾರಕ್ಕಿಂತ ಹೆಚ್ಚಿನ ಪ್ರಮಾಣದ ಸಿಬ್ಬಂದಿಯಿದ್ದು, ಮಾಡಲು ಕೆಲಸವೇ ಇಲ್ಲದಂತಾಗಿದೆ. ಇಷ್ಟಾದರೂ ರಾಜ್ಯದಲ್ಲಿ 2.40 ಲಕ್ಷ ಸರ್ಕಾರಿ ಹುದ್ದೆ ಇನ್ನೂ ಖಾಲಿಯಿವೆ. ಈ ಅಸಮತೋಲನ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ.
ಲೋಕಾಯುಕ್ತ ಉದಾಹರಣೆ
ರಾಜ್ಯದ ಕೆಲ ಸಣ್ಣ ಇಲಾಖೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವುದಕ್ಕೆ ಲೋಕಾಯುಕ್ತ ಸಂಸ್ಥೆ ಜ್ವಲಂತ ಉದಾಹರಣೆ. ಲೋಕಾಯುಕ್ತದಲ್ಲಿ ರಾಜ್ಯಾದ್ಯಂತ 1,400 ಹುದ್ದೆಗಳಿದ್ದು, 95 ನೌಕರರಿದ್ದಾರೆ. ಇವರ ವಾರ್ಷಿಕ ವೇತನಕ್ಕೆ ಸರ್ಕಾರ 65 ಕೋಟಿ ರೂ. ಮೀಸಲಿಟ್ಟಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ, ಲೋಕಾಯುಕ್ತ ಪೊಲೀಸ್ ವಿಭಾಗಕ್ಕಿದ್ದ ತನಿಖಾ ಅಧಿಕಾರವನ್ನು 2016ರಲ್ಲಿ ಹಿಂಪಡೆಯಲಾಯಿತು.
ಈ ವಿಚಾರ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯಿತಾದರೂ ನಂತರದಲ್ಲಿ ಬಂದ ಸರ್ಕಾರಗಳು ಈ ಅಧಿಕಾರವನ್ನು ಹಿಂದಿರುಗಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಇಲ್ಲಿರುವ ಸುಮಾರು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ.
ಇದನ್ನೂ ಓದಿ:ಮದುವೆಯಾದ 3ನೇ ದಿನ ತವರಿಗೆ ದಬ್ಬಿದ… 8ನೇ ದಿನ ತಲಾಖ್​… ತಲಾಖ್​… ತಲಾಖ್​… ಎಂದ!
2 ಸಾವಿರ ಕೋಟಿ ರೂ. ಪೋಲು
ಗೃಹ, ಶಿಕ್ಷಣ, ಆರೋಗ್ಯ ಇಲಾಖೆಗಳಲ್ಲಿ ಅಗತ್ಯ ಸಿಬ್ಬಂದಿಯಿಲ್ಲದೇ ಪರದಾಡುವ ಸ್ಥಿತಿ ಇದೆ. ರೇಷ್ಮೆ, ವಿಮಾ, ಖಜಾನೆ, ಸಣ್ಣ ಉಳಿತಾಯ, ಉದ್ಯೋಗ ಮತ್ತು ತರಬೇತಿ, ಉದ್ಯೋಗ ವಿನಿಮಯ, ಪ್ರವಾಸೋದ್ಯಮ, ಭಾಷಾಂತರ, ಯುವಜನ ಸೇವಾ ಮತ್ತು ಕ್ರೀಡೆ, ಗೆಜೆಟಿಯರ್, ಕಾನೂನು ಮಾಪನ, ಸೈನಿಕ ಕಲ್ಯಾಣ, ಬಂದರು ಮತ್ತು ಒಳನಾಡು ಜಲಸಾರಿಗೆ, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣಾ ಇಲಾಖೆ, ವಿಮಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಲ್ಲಿ ಕಾರ್ಯಭಾರ ಮರುಹಂಚಿಕೆ ಆಗಿಲ್ಲದೆ ಅನೇಕ ಹುದ್ದೆ ಹೆಸರಿಗೆ ಮಾತ್ರ ಸೀಮಿತವಾಗಿವೆ. ಮಾನವ ಸಂಪನ್ಮೂಲದ ಸದ್ಬಳಕೆ ಮಾಡಿಕೊಳ್ಳಲು ವಿಫಲವಾಗಿರುವ ಕಾರಣ ಇಂತಹ ನೌಕರರ ವೇತನ, ಭತ್ಯೆಗಾಗಿ ವಾರ್ಷಿಕವಾಗಿ ಅಂದಾಜು 2 ಸಾವಿರ ಕೋಟಿ ರೂ. ವ್ಯಯವಾಗುತ್ತಿರುವ ಅಂದಾಜಿದೆ.
ಇದನ್ನೂ ಓದಿ:ರಾಗಿಣಿ ಮನೆಯಲ್ಲಿತ್ತು ಗಾಂಜಾ ತುಂಬಿದ್ದ ಸಿಗರೇಟ್ !
ಮರುಹಂಚಿಕೆಗೆ ಸಲಹೆ
ರಾಜ್ಯದಲ್ಲಿ ಜನಸಂಖ್ಯೆಯ ಶೇ 0.85 ಸರ್ಕಾರಿ ನೌಕರರಿದ್ದಾರೆ. ಅನಗತ್ಯ ಹುದ್ದೆ ತೆಗೆದುಹಾಕಿ, ಹೆಚ್ಚುವರಿ ಸಿಬ್ಬಂದಿಯನ್ನು ಇತರ ಹುದ್ದೆಗಳಿಗೆ ಮರುಹಂಚಿಕೆ ಮಾಡಿ ಅವರ ಸೇವೆಯನ್ನು ಹೆಚ್ಚು ಉಪಯುಕ್ತವಾಗಿ ಬಳಸಿಕೊಳ್ಳುವ ಬಗ್ಗೆ ಪರಾಮಶಿಸುವ ಅಗತ್ಯವಿದೆ ಎಂಬುದಾಗಿ 6ನೇ ವೇತನ ಆಯೋಗ ಸರ್ಕಾರಕ್ಕೆ ಸಲಹೆ ನೀಡಿದೆ. ಇದೀಗ ಕರೊನಾ ಬಿಕ್ಕಟ್ಟಿನಿಂದ ಕೆಲ ಇಲಾಖೆಗಳ ಕರ್ತವ್ಯಗಳಲ್ಲಿ ಮಾರ್ಪಾಟಾದ ಪರಿಣಾಮ ಕೆಲ ಇಲಾಖೆಗಳಲ್ಲಿ ಹೆಚ್ಚುವರಿ ಹುದ್ದೆಗಳ ಅಗತ್ಯ ಉಂಟಾಗಿದ್ದರೆ ಕೆಲವು ಇಲಾಖೆಗಳಲ್ಲಿ ಅನಗತ್ಯ ಸಿಬ್ಬಂದಿ ಪ್ರಮಾಣ ಸ್ಪಷ್ಟವಾಗುತ್ತಿದೆ. 44 ಇಲಾಖೆಗಳಲ್ಲಿ ಶೇ.40ಕ್ಕಿಂತ ಅಧಿಕ ಮತ್ತು 29 ಇಲಾಖೆಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಹುದ್ದೆ ಖಾಲಿಯಿವೆ. ಇ-ಆಫೀಸ್ ಅಳವಡಿಕೆ, ಆರ್ಥಿಕ ಸ್ವರೂಪದ ಬದಲಾವಣೆಯಿಂದ ಕೆಲವು ಸೇವೆಗಳಿಗಿದ್ದ ಬೇಡಿಕೆ ತಗ್ಗಿದ್ದು, ಅನೇಕ ಹುದ್ದೆಗಳು ಅನುಪಯುಕ್ತವಾಗಿವೆ.
ಇದನ್ನೂ ಓದಿ:ನಿತ್ಯ ಭವಿಷ್ಯ: ಈ ರಾಶಿಯವರಿಗೆ ಆಕಸ್ಮಿಕ ಬೆಳವಣಿಗೆಯಲ್ಲಿ ಹಳೆಯ ಸಂಕಟಗಳು ದೂರಾಗಲಿವೆ
ತೊಡಕಾಗದಂತೆ ಕ್ರಮ
ಸರ್ಕಾರಿ ನೌಕರರ ವೇತನಕ್ಕಾಗಿ ಪ್ರತಿ ಬಜೆಟ್​ನಲ್ಲಿ ಶೇ.17 ರಿಂದ ಶೇ.18 ಪ್ರಮಾಣ ಮೀಸಲಿಡಲಾಗುತ್ತದೆ. ಆಡಳಿತ ಸುಧಾರಣೆಗಾಗಿ ಸರ್ಕಾರ ಸಮಿತಿ ರಚಿಸಿದೆ. ಸಣ್ಣ-ಸಣ್ಣ ಇಲಾಖೆಗಳನ್ನು ತೆಗೆದು, ಕಚೇರಿ ಹಾಗೂ ಕೆಲ ಇಲಾಖೆಗಳನ್ನು ಮರುವಿನ್ಯಾಸ ಮಾಡುವ ಪ್ರಕ್ರಿಯೆಗಳನ್ನು ಸರ್ಕಾರ ಮಾಡಲು ಹೊರಟಿದೆ. ಸಂಘಗಳ ಜತೆ ರ್ಚಚಿಸಿ ಯಾವುದೇ ನೌಕರರಿಗೂ ತೊಡಕಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ. ಸರ್ಕಾರದ ಈ ಕ್ರಮವನ್ನು ಸ್ವಾಗತಿಸುತ್ತೇವೆ ಎಂದು ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಅಧಿವೇಶನ ಮುನ್ನ ಸಂಪುಟ ವಿಸ್ತರಣೆ : ವಾರದ ಕೊನೆಯಲ್ಲಿ ಸಿಎಂ ದೆಹಲಿ ಭೇಟಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 4 =
Remember me
