ಬೆಂಗಳೂರು: ವಿವಿಧ ಇಲಾಖೆಗಳು, ಹಲವು ಯೋಜನೆ ಅಥವಾ ಇನ್ನಿತರ ಉದ್ದೇಶಕ್ಕೆ ಜನರಿಂದ ಸಂಗ್ರಹಿಸುವ ದತ್ತಾಂಶ (ಡೇಟಾ) ಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕ್ರಮ ದೇಶದಲ್ಲೇ ಮೊದಲು ಎಂಬುದು ವಿಶೇಷ.  ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸೇವಾದಾರರು ಅಥವಾ ಮೂರನೇ ವ್ಯಕ್ತಿ ವ್ಯವಸ್ಥೆ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಾ ಬಂದಿದೆ. ಸಹಾಯವಾಣಿ, ಮೊಬೈಲ್ ಆಪ್, ಟೆಲಿಮೆಡಿಸನ್ ಹೀಗೆ ಹಲವು ರೂಪದಲ್ಲಿ ಜನರ ಮಾಹಿತಿ ಸಂಗ್ರಹಿಸಲಾಗುತ್ತದೆ.
ಪ್ರಮುಖ ತೀರ್ಮಾನಗಳು
1ಡೇಟಾ ಸಂಗ್ರಹಿಸುವವರು ಇನ್ನು ಮುಂದೆ ಅದನ್ನು ಎಲ್ಲಿಯೂ ಬಹಿರಂಗಪಡಿಸಲ್ಲ ಎಂದು ಕರಾರು ಮಾಡಿಕೊಡಬೇಕು. ಅದಕ್ಕೆ ತಕ್ಕಂತೆ ಬದಟಛಿತೆಯಿಂದ ನಡೆದುಕೊಳ್ಳಬೇಕು.
2ಇ- ಆಡಳಿತ ಇಲಾಖೆ ಸಿದ್ಧಪಡಿಸಿರುವ ಶಿಷ್ಟಾಚಾರದ ಪ್ರಕಾರವೇ ದಾಖಲೆ ಸಂಗ್ರಹಿಸಬೇಕು. ಎಲ್ಲ ಇಲಾಖೆಗಳು ಈ ಮಾರ್ಗಸೂಚಿಯನ್ನು ಅನುಸರಿಸಬೇಕು.
ಆದರೆ, ಈ ಮಾಹಿತಿಗಳ ರಕ್ಷಣೆ ಪ್ರಯತ್ನ ಇದುವರೆಗೆ ಆಗಿಲ್ಲ. ಕೇಂದ್ರ ಸರ್ಕಾರ ಡೇಟಾ ಪ್ರೊಟೆಕ್ಷನ್ ಆಕ್ಟ್-2019 ಸಿದ್ಧಪಡಿಸಿದ್ದು, ಸಂಸತ್​ನಲ್ಲಿ ಅನುಮೋದನೆಗೆ ಕಾಯುತ್ತಿದೆ. ಆಧಾರ್ ವಿಚಾರದಲ್ಲಿ ಮಾಹಿತಿ ಬಹಿರಂಗವಾಗುತ್ತಿದೆ ಎಂಬ ಗುಲ್ಲೆದ್ದಾಗ ಡೇಟಾ ರಕ್ಷಣೆಗೆ ಗಮನ ನೀಡಿ ಕಾನೂನಿನ ಚೌಕಟ್ಟು ರೂಪಿಸಲು ಕೇಂದ್ರ ನಿರ್ಧರಿಸಿತ್ತು.  ಈ ನಡುವೆ ಕರ್ನಾಟಕದಲ್ಲಿ ಡೇಟಾ ರಕ್ಷಣೆ ಸಂಬಂಧ ಇದೇ ಮೊದಲ ಬಾರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಸುತ್ತೋಲೆ ಹೊರಡಿಸಿ, ಆ ಪ್ರಕಾರವೇ ಡೇಟಾ ಸಂಗ್ರಹ ಮತ್ತು ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ.
ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆ: ಹಿಂದೂ ದೇವತೆಗಳನ್ನು ಅವಹೇಳನಗೈಯ್ಯುವ ಪೋಸ್ಟ್​ಗಳನ್ನು ಮುಲಾಜಿಲ್ಲದೆ ಹಾಕುವ ಇವರಿಗೆ ಸರಿಯಾದ ಉತ್ತರ ಕೊಟ್ಟರೆ ಯಾಕಿಷ್ಟು ಕೋಪ!
ಇಲಾಖೆಗಳು ಶಿಷ್ಟಾಚಾರ ಪಾಲಿಸಲಿಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಜನರಿಂದ ವಿವಿಧ ಕೋರಿಕೆ ಸ್ವೀಕರಿಸಲು ಸಹಾಯವಾಣಿ ಮತ್ತು ಮೊಬೈಲ್ ಆಪ್ ಸೇವೆ ಆರಂಭಿಸಿದ್ದವು. ಈ ವೇಳೆ ಸಹಾಯವಾಣಿ ಮತ್ತು ಮೊಬೈಲ್ ಆಪ್​ಗಳನ್ನು ಅರೆ ಸರ್ಕಾರಿ ಅಥವಾ ಖಾಸಗಿ, ಥರ್ಡ್ ಪಾರ್ಟಿ ಕಂಪನಿಗಳು ನಿರ್ವಹಿಸಿದ್ದವು. ಅವುಗಳ ಬಳಿ ಜನರ ವಿವರಣೆಗಳಿರುವ ಡೇಟಾ ಸಂಗ್ರಹ ಬೃಹತ್ ಮಟ್ಟದಲ್ಲಿದೆ. ಅವು ದುರ್ಬಳಕೆ ಆಗಬಾರದೆಂದು ಎರಡು ತಿಂಗಳ ಹಿಂದೆಯೇ ಇ- ಆಡಳಿತ ಸಲಹೆಗಾರರು ಸರ್ಕಾರದ ಗಮನಕ್ಕೆ ತಂದಿದ್ದು. ಅಂತಿಮವಾಗಿ ಡೇಟಾ ಸಂಗ್ರಹ ಮತ್ತು ರಕ್ಷಣೆ ವಿಚಾರದಲ್ಲಿ ಶಿಷ್ಟಾಚಾರ ರೂಪುಗೊಂಡಿದೆ. ಇನ್ನು ಮುಂದೆ ಎಲ್ಲ ಇಲಾಖೆಗಳು ಈ ಶಿಷ್ಟಾಚಾರದಂತೆ ನಡೆಯಬೇಕು ಎಂದು ಸೂಚಿಸಲಾಗಿದೆ.ಡೇಟಾ ರಕ್ಷಣೆಗೆ ಕಾಯ್ದೆ ತರುವುದು ಅನಿವಾರ್ಯ. ಆದರೆ, ಅದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಮುಂದೆ ನೀತಿ ತರುವ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 10 =
Remember me
