ಬೆಂಗಳೂರುಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರು ಮತ್ತು ಸಿಬ್ಬಂದಿಯು ಖಾಸಗಿ ಟುಟೋರಿಯಲ್‌ಗಳನ್ನು ನಡೆಸುವುದು ಅಥವಾ ಟುಟೋರಿಯಲ್‌ಗಳಲ್ಲಿ ಪಾಠ-ಪ್ರವಚನ ಮಾಡುವುದು ಅಪರಾಧವಾಗಿದ್ದು, ಅಂತಹ ಟುಟೋರಿಯಲ್‌ಗಳನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿನ ಡಿಪ್ಲೊಮೊ, ಇಂಜಿನಿಯರಿಂಗ್, ಇತರೆ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಟುಟೋರಿಯಲ್ ಸಂಸ್ಥೆಗಳು ಕಾರ್ಯ ನಿರ್ವಹಿಸಲು ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 35 ಮತ್ತು ಕರ್ನಾಟಕ ಟುಟೋರಿಯಲ್ ಇನ್‌ಸ್ಟಿಟ್ಯೂಷನ್ಸ್-2001ರ ಪ್ರಕಾರ, ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಾಂತ್ರಿಕ ಶಿಕ್ಷಣ ಇಲಾಖೆಯು ತಿಳಿಸಿದೆ.
ಅನಧಿಕೃತವಾಗಿ ಮನೆಪಾಠ, ಸಿಇಟಿ ಕೋಚಿಂಗ್ ಸೇರಿ ಇತರೆ ಟುಟೋರಿಯಲ್‌ಗಳನ್ನು ನಡೆಸುವುದು ಮತ್ತು ಸಂಸ್ಥೆಗಳನ್ನು ಹೊಂದುವುದು ಕೂಡ ಅಪರಾಧವಾಗಿದೆ. ನಿಯಮಗಳ ಪ್ರಕಾರ ಪ್ರತಿ ವರ್ಷ ಇಲಾಖೆಗೆ ವಾರ್ಷಿಕ ವರದಿಯನ್ನು ಸಲ್ಲಿಸಿ ನೋಂದಣಿ ನವೀಕರಣ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ.
ನೋಂದಾಯಿತ ಟುಟೋರಿಯಲ್‌ಗಳು ನಿಯಮಗಳ ಪ್ರಕಾರ, ಅನುಮೋದಿಸಿದ ಕಟ್ಟಡ, ನಿಗದಿತ ವಿಸ್ತೀರ್ಣವುಳ್ಳ ತರಗತಿ ಕೋಣೆಗಳು, ಶೌಚಾಲಯ, ನೀರಿನ ವ್ಯವಸ್ಥೆ ಹೊಂದಿರಬೇಕು. ಗರಿಷ್ಠ 30 ವಿದ್ಯಾರ್ಥಿಗಳಿಗೆ ಅನುಗುಣವಾಗಿ ಪೀಠೋಪಕರಗಳ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ವಿದ್ಯಾರ್ಥಿಗೆ ಕನಿಷ್ಠ 5ರಿಂದ 7 ಚದರ ಅಡಿ ವಿಸ್ತೀರ್ಣದ ಜಾಗವನ್ನು ಹೊಂದಿರಬೇಕು ಎಂದು ತಿಳಿಸಿದೆ.
ಟುಟೋರಿಯಲ್ ತರಗತಿಗಳಣ್ನು ನಡೆಸಲು ಪರಿಣಿತ ಉಪನ್ಯಾಸಕರು, ಶಿಕ್ಷಕರನ್ನು ನೇಮಿಸಿ ಅವರ ವಿದ್ಯಾರ್ಹತೆ, ಅನುಭವ, ಸಂಭಾವನೆ ವಿವರಗಳನ್ನು ಇಲಾಖೆಗೆ ಸಲ್ಲಿಸಬೇಕು. ವಿದ್ಯಾರ್ಥಿಗಳಿಂದ ಪಡೆದ ಟಟೋರಿಯಲ್ ಶುಲ್ಕದ ವಿವರಗಳನ್ನು ರಶೀದಿಗಳ ಸಮೇತ ಸಲ್ಲಿಸಬೇಕು. ಬಟವಾಡೆ ವಿವರಗಳು, ಇತರೆ ಖರ್ಚು ವೆಚ್ಚಗಳನ್ನು ವಾರ್ಷಿಕ ವರದಿಯಲ್ಲಿ ಇಲಾಖೆಗೆ ಸಲ್ಲಿಸಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಸಿದ್ದಲ್ಲಿ ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸಿ ಟುಟೋರಿಯಲ್ ಕಾರ್ಯವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + thirteen =
Remember me
