ಬೆಂಗಳೂರು:ಅಧಿಕಾರವಿಲ್ಲದೆ ಹಲ್ಲು ಕಿತ್ತ ಹಾವಿನಂತಾಗಿರುವ ರಾಜ್ಯದ ಗ್ರಾಪಂ ಗಳಿಗೆ ಬಲ ತುಂಬಲು ಸರ್ಕಾರ ಮುಂದಾಗಿದ್ದು, ಕೇರಳ ಮಾದರಿ ಯಲ್ಲಿ ‘ಸ್ಥಳೀಯ ಸರ್ಕಾರ’ ಎಂಬಂತೆ ಮಾಡಲು ನಿರ್ಧರಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದ ತಂಡ ಕೇರಳದಲ್ಲಿ ಅಧ್ಯಯನ ನಡೆಸಿ ಬಂದಿದ್ದು, ಅಲ್ಲಿನ ಗ್ರಾಪಂಗಳಲ್ಲಿ ಜಾರಿಯಲ್ಲಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಇಲ್ಲಿ ಅಳವಡಿಸಲು ಇದೇ ಬಜೆಟ್​ನಲ್ಲಿ ಘೋಷಿಸಲು ಈಗಾಗಲೇ ಚರ್ಚೆ ನಡೆದಿದೆ.
ಕೇರಳದಲ್ಲಿ 35 ಸಾವಿರ ಜನಸಂಖ್ಯೆಗೆ ಒಂದು ಗ್ರಾಪಂ ಇದ್ದರೆ, ರಾಜ್ಯದಲ್ಲಿ 5 ಸಾವಿರ ಜನಸಂಖ್ಯೆಗೆ ಒಂದರಂತೆ 6,021 ಇವೆ. ಅಲ್ಲಿರುವ ಎಲ್ಲ ಸೌಲಭ್ಯಗಳನ್ನು ತಕ್ಷಣ ಇಲ್ಲಿ ನೀಡಲಾಗದಿದ್ದರೂ ಕೆಲವೊಂದು ಸೇವೆಗಳನ್ನು ಒದಗಿಸುವ ಪ್ರಯತ್ನಕ್ಕೆ ತಕ್ಷಣ ಚಾಲನೆಯಂತೂ ಸಿಗಲಿದೆ.
ವ್ಯಾಜ್ಯಮುಕ್ತ ಗ್ರಾಮ:ಯಾವುದೇ ಗ್ರಾಮದಲ್ಲಿ ಅಭಿವೃದ್ಧಿ ಶಕೆ ಆರಂಭವಾಗಬೇಕಾದರೆ ಅವು ವ್ಯಾಜ್ಯಮುಕ್ತ ಗ್ರಾಮಗಳಾಗಿರ ಬೇಕು. ಹಾಗಾಗಿ ಗ್ರಾಮಗಳಲ್ಲಿ ವ್ಯಾಜ್ಯಗಳ ಸಂಖ್ಯೆ ಶೂನ್ಯಕ್ಕೆ ಇಳಿಸುವ ಪ್ರಯತ್ನ ನಡೆಯಲಿದೆ. ವೈಯಕ್ತಿಕ ವ್ಯಾಜ್ಯಗಳಿಗಿಂತ ಪ್ರಭುತ್ವ ಮತ್ತು ನಾಗರಿಕ ನಡುವೆ ವ್ಯಾಜ್ಯ ಇರಬಾರದು ಎಂಬುದು ಯೋಜನೆ ಉದ್ದೇಶವಾಗಿದೆ. ಪ್ರಾಯೋಗಿಕವಾಗಿ ಕೆಲವೊಂದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಪ್ರಯೋಗ ಮಾಡಲಾಗುತ್ತದೆ.
ಪ್ಲಾಸ್ಟಿಕ್​ ಮುಕ್ತ ಗ್ರಾಮ:ಪ್ಲಾಸ್ಟಿಕ್ ನಿಷೇಧ ಮಾಡಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಆದರೆ, ಎಲ್ಲಿಯೂ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸುವ ಬಗ್ಗೆಯೂ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುತ್ತದೆ. ಕೆಲ ಗ್ರಾಮ ಗಳನ್ನು ಆಯ್ದು ಅವುಗಳನ್ನು ಪ್ಲಾಸ್ಟಿಕ್​ವುುಕ್ತ ಮಾಡಿ ಮಾದರಿ ಗ್ರಾಮಗಳನ್ನಾಗಿ ಮಾಡುವುದು ಸರ್ಕಾರದ ಆಶಯವಾಗಿದೆ. ಜಾಗೃತಿ ಹೊರತಾಗಿ ಹೆಚ್ಚಿನ ಅನುದಾನದ ಅಗತ್ಯವೇನೂ ಇದಕ್ಕೆ ಬೇಕಾಗುವುದಿಲ್ಲ.
ಕೇರಳದ ಗ್ರಾಪಂಗಳಲ್ಲಿ ಜನಸ್ನೇಹಿ ವಾತಾವರಣ ಇದೆ. ಕಚೇರಿಗೆ ಬರುವವರನ್ನು ಕೂರಿಸಿ ಮಾತನಾಡಿಸಲಾಗುತ್ತದೆ. ಇಲ್ಲಿನ ಪಂಚಾ ಯಿತಿಗಳನ್ನೂ ಹೆಚ್ಚು ಜನಸ್ನೇಹಿ ಮಾಡುವ ಉದ್ದೇಶ ಸರ್ಕಾರಕ್ಕಿದೆ.
ಬಯಲು ಶೌಚಮುಕ್ತ ರಾಜ್ಯ ಮಾಡುವ ಕಡೆ ಹೆಜ್ಜೆಯನ್ನಿಟ್ಟಿರುವ ಸರ್ಕಾರ, ಇದೀಗ ಗ್ರಾಪಂಗಳಲ್ಲಿ ಹೊಸ ಪ್ರಯತ್ನವೊಂದಕ್ಕೆ ನಾಂದಿಯಾಡಲು ಮುಂದಾ ಗಿದೆ. ವ್ಯಾಜ್ಯ ಹಾಗೂ ಪ್ಲಾಸ್ಟಿಕ್​ವುುಕ್ತ ಗ್ರಾಮಗಳನ್ನು ರೂಪಿಸುವ ಬಗ್ಗೆ ಬಜೆಟ್​ನಲ್ಲಿ ಘೋಷಣೆ ಮಾಡಲು ಸಿದ್ಧತೆ ನಡೆಸಿದೆ. ಹೆಚ್ಚಿನ ಹಣಕಾಸಿನ ಹೊರೆ ಇಲ್ಲದ ಈ ಯೋಜನೆಗಳ ಮೂಲಕ ಹೊಸ ಕ್ರಾಂತಿಯೊಂದಕ್ಕೆ ಮುನ್ನಡಿ ಬರೆಯಲಿದೆ ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
ಕೇರಳದಲ್ಲಿ ‘ಕುಟುಂಬಶ್ರೀ’ ಎಂಬ ಯೋಜನೆ ಇದ್ದು ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟ, ಸ್ವಸಹಾಯ ಸಂಘಗಳ ಮೂಲಕವೇ ನರೇಗಾ ಅನುಷ್ಠಾನ ಸೇರಿ ವಿವಿಧ ಕಾರ್ಯಕ್ರಮಗಳು ಇದರ ಮೂಲಕವೇ ಜಾರಿಗೊಳ್ಳುತ್ತವೆ. ರಾಜ್ಯದಲ್ಲಿಯೂ ನರೇಗಾ ಅನುಷ್ಠಾನವನ್ನು ಸ್ವಸಹಾಯ ಸಂಘಗಳ ಮೂಲಕ ಏಕೆ ಮಾಡಬಾರದೆಂಬ ಬಗ್ಗೆ ಚಿಂತನೆ ನಡೆದಿದೆ.
ಕೇರಳದ ಪಂಚಾಯಿತಿ ಗಳಲ್ಲಿ 3 ಸ್ಥಾಯಿ ಸಮಿತಿಗಳಿರುತ್ತವೆ. ಆರೋಗ್ಯ, ಶಿಕ್ಷಣ ಹೀಗೆ ಗ್ರಾಮೀಣ ಭಾಗದವರಿಗೆ ಬೇಕಾದ ಯೋಜನೆಗಳ ಬಗ್ಗೆ ಈ ಸ್ಥಾಯಿ ಸಮಿತಿಗಳು ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತವೆ. ಅದೇ ಮಾದರಿ ರಾಜ್ಯದಲ್ಲಿಯೂ ಜಾರಿಗೆ ತರುವ ಉದ್ದೇಶ ಸರ್ಕಾರಕ್ಕಿದೆ.
ವರಮಾನ ಪ್ರಮಾಣಪತ್ರ, ಜನನ ಮತ್ತು ಮರಣ ಪ್ರಮಾಣಪತ್ರ, ಸಾಮಾಜಿಕ ಪಿಂಚಣಿಗಳನ್ನು ನೀಡುವುದು ಕಂದಾಯ ಇಲಾಖೆ ಕೆಲಸ. ಅವುಗಳನ್ನು ಪಂಚಾಯಿತಿಯಲೇ ಅನುಷ್ಠಾನ ಮಾಡಿದರೆ ತಾಲೂಕು ಹಾಗೂ ಹೋಬಳಿ ಕೇಂದ್ರಕ್ಕೆ ಫಲಾನುಭವಿಗಳ ಅಲೆದಾಟ ತಪು್ಪತ್ತದೆ. ಈ ಬಗ್ಗೆಯೂ ಚಿಂತನೆ ನಡೆದಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಬಾಪೂಜಿ ಸೇವಾ ಕೇಂದ್ರಗಳನ್ನು ತೆರೆದಿತ್ತು. ಆದರೆ, ಅವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ.
ಕೇರಳದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಿ ದರ್ಜೆ ಅಧಿಕಾರಿಗಳಿದ್ದರೆ, ಇಲ್ಲಿ ಸಿ ದರ್ಜೆ. ಇಲ್ಲಿಯೂ ಬಿ ದರ್ಜೆಗೆ ತರುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಹಣಕಾಸು ಇಲಾಖೆ ಒಪ್ಪಿಗೆ ಬಾಕಿ ಇದೆ.
ಕೇರಳದ ಗ್ರಾಮ ಪಂಚಾಯಿತಿಗಳ ಬಗ್ಗೆ ಅಧ್ಯಯನ ಮಾಡಿದ್ದೇವೆ. ಇಲ್ಲಿ ಸಾಕಷ್ಟು ಬದಲಾವಣೆ ಆಗಬೇಕಾಗಿದೆ. ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ.
| ಕೆ.ಎಸ್. ಈಶ್ವರಪ್ಪಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − ten =
Remember me
