ಬೆಂಗಳೂರು:ತಮ್ಮನ್ನೂ ಸರ್ಕಾರಿ ಸಿಬ್ಬಂದಿಯನ್ನಾಗಿ ಪರಿಗಣಿಸಬೇಕು ಎಂಬುದರ ಜತೆಗೆ ಹಲವು ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರಿ ಬಸ್​ಗಳು ರಸ್ತೆಗಿಳಿಯದ ಕಾರಣ ಶುಕ್ರವಾರ ಪ್ರಯಾಣಿಕರೂ ಭಾರಿ ಸಂಕಷ್ಟ ಎದುರಿಸಿದ್ದರು. ಇದೇ ಪರಿಸ್ಥಿತಿ ಇಂದೂ ಕೂಡ ಮುಂದುವರಿದಿದೆ.
ಮೈಸೂರು, ಕೇರಳ ,ತಮಿಳುನಾಡು ಕಡೆ ಹೋಗಬೇಕಿದ್ದ ಪ್ರಯಾಣಿಕರು ಬೆಂಗಳೂರಿನ ಮೆಜೆಸ್ಟಿಕ್​, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಪರದಾಡುತ್ತಿರುವ ದೃಶ್ಯ ಬೆಳ್ಳಂಬೆಳಗ್ಗೆಯೇ ಕಂಡುಬಂತು. ಬಸ್​ಗಳಿಲ್ಲದೇ ಖಾಸಗಿ ವಾಹನಗಳತ್ತ ಪ್ರಯಾಣಿಕರು ಮುಖಮಾಡುತ್ತಿದ್ದರಾದರೂ ಬಹುತೇಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
ಮಂಡ್ಯದಲ್ಲಿ ಕೆಎಸ್‌‌ಆರ್‌ಟಿಸಿ ಬಸ್​ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬಸ್​ಗಳು ಡಿಪೋ ಸೇರಿವೆ. ಹಾಗಾಗಿ ಮಂಡ್ಯ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿದೆ. ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಪ್ರಯಾಣ ದರ ಹೆಚ್ಚಿಸಿರುವ ಖಾಸಗಿ ಬಸ್‌ಗಳು ಬೆಂಗಳೂರಿಗೆ 140 ರೂ. ನಿಗದಿ ಮಾಡಿವೆ. ಮಂಡ್ಯದಿಂದ ಬೆಂಗಳೂರಿಗೆ ಕೆಎಸ್‌‌ಆರ್‌ಟಿಸಿ ಬಸ್​ನ ದರ 95 ರೂ. ಇದೆ.
ಇನ್ನು ಚಿತ್ರದುರ್ಗ ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲೂ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ವಿಜಯಪುರದಲ್ಲೂ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೊರ ರಾಜ್ಯಗಳಿಂದ ಬಂದ ಪ್ರಯಾಣಿಕರು ಪರದಾಡುವಂತಾಗಿದೆ. ಮಹಾರಾಷ್ಟ್ರದ ಬಾಡನಿಂದ ಮಕ್ಕಳ ಜತೆಗೆ ಬಂದ ಮಹಿಳೆಯೊಬ್ಬರು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣಕ್ಕೆ ತೆರಳಲು ಬಸ್ ಇಲ್ಲದೆ ಕಣ್ಣೀರಿಟ್ಟರು.
ಹಾಸನ ಸಾರಿಗೆ ಬಸ್ ನಿಲ್ದಾಣದಲ್ಲಿ ಯಾವುದೇ ಒಂದು ಬಸ್ ಕೂಡ ಇಲ್ಲ. ಯಾವ ನೌಕರರೂ ಕರ್ತವ್ಯಕ್ಕೆ ಹಾಜರಾಗಿಲ್ಲ. ‘ನಿಮನ್ನು ಕೈ ಮುಗಿದು ಕೇಳುತ್ತೇವೆ, ನಮ್ಮ ಬೇಡಿಕೆಗೆ ಸ್ಪಂದಿಸಿ. ಯಾವುದೇ ಕಾರಣಕ್ಕೂ ನಮ್ಮ ಮುಷ್ಕರ ಕೈ ಬಿಡಲ್ಲ ಎಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.
ಬೀದರ್ ಕೇಂದ್ರೀಯ ಬಸ್ ನಿಲ್ದಾಣ ಮುಂಭಾಗ ಸಾರಿಗೆ ಇಲಾಖೆ ಸಿಬ್ಬಂದಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. 250ಕ್ಕೂ ಹೆಚ್ಚು ಸಿಬ್ಬಂದಿ ಪೆಂಡಾಲ್​ ಹಾಕಿಕೊಂಡು ಪ್ರತಿಭಟನೆ ನಡೆಯುತ್ತಿದ್ದಾರೆ. ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲೂ ಪ್ರತಿಭಟನೆ ನಡೆಯುತ್ತಿದೆ.
ಮಡಿಕೇರಿ ಬಸ್ ನಿಲ್ದಾಣದಲ್ಲಿ ನೌಕರರು ಅರೆಬೆತ್ತಲೆಯಾಗಿ ಧರಣಿಗೆ ಕುಳಿತಿದ್ದಾರೆ. ಮೈಸೂರಿನಲ್ಲಿ ಬಸ್​ ಸಂಚಾರ ಸಂಪೂರ್ಣ ಬಂದ್ ಆಗಿದ್ದು. ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಒಂದೇ ಒಂದು ಬಸ್ ಇಲ್ಲ. ಎಲ್ಲ ಬಸ್​ಗಳೂ ಡಿಪೋದಲ್ಲೇ ಇವೆ. ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದ ಗ್ರಾಮಾಂತರ ಬಸ್ ನಿಲ್ದಾಣವೂ ಇದೀಗ ಬಿಕೋ ಎನ್ನುತ್ತಿದೆ. ಬಸ್ ಇಲ್ಲದೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಹುಬ್ಬಳ್ಳಿಯಲ್ಲೂ ಬಸ್​ಗಳೆಲ್ಲ ಡಿಪೋದಲ್ಲೇ ಇವೆ.
ಇನ್ನು ಹೊಸಪೇಟೆಯ ಹಗರಿಬೊಮ್ಮನ ಹಳ್ಳಿಯಿಂದ ಎಮ್ಮಿಗನೂರಿಗೆ ತೆರಳುತ್ತಿದ್ದ ಬಸ್​ಗೆ ಕಲ್ಲು ತೂರಲಾಗಿದೆ. ಸದ್ಯ ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆ ಆವರದಲ್ಲಿ ಬಸ್ ಅನ್ನು ನಿಲ್ಲಿಸಲಾಗಿದೆ.
ಹೀಗೆ ಗದಗ, ಕೊಲಾರ, ರಾಯಚೂರು, ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ಎಲ್ಲೆಡೂ ಸಾರಿಗೆ ಬಸ್​ ಸಂಚಾತ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾರಿಗೆ ನೌಕರರು ಮುಷ್ಕರದ ಬಿಸಿ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ, ಸಾರ್ವಜನಿಕರಿಗೂ ತಟ್ಟಿದೆ.
ಸಾರಿಗೆ ನೌಕರರ ಮುಷ್ಕರ ಎರಡನೆ ದಿನ: ಸಾರಿಗೆ ಸಮರಕ್ಕೆ ನಲುಗಿದ ಸಾರ್ವಜನಿಕರು, ಮಲಗಿದೆ ಆಡಳಿತ ಯಂತ್ರ

ಸ್ಕೆಚ್​ ಹಾಕಿ ಕುಮಾರಸ್ವಾಮಿ ಸರ್ಕಾರವನ್ನ ಕೆಡವಿದ್ದು ನಾನೇ… ಎಂದ ಯೋಗೇಶ್ವರ್​ ಆಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 12 =
Remember me
