ಬೆಂಗಳೂರು:ರಾಜ್ಯದಲ್ಲಿ ವ್ಯಾಪಿಸುತ್ತಿರುವ ಕರೊನಾ ವೈರಸ್​ ಸೋಂಕಿನ ತಡೆಗೆ ಲಾಕ್​ಡೌನ್​ ಪರಿಹಾರವಲ್ಲ. ಇದರ ವಿರುದ್ಧದ ಹೋರಾಟದಲ್ಲಿ ಜನತೆಯ ಸಹಕಾರ ಅಗತ್ಯವಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಿರಿಯ ನಾಗರಿಕರು ಹಾಗೂ ‌ಮಕ್ಕಳು‌ ಮನೆಯಲ್ಲಿರಬೇಕು. ಕೊರೊನಾ ಸೋಂಕಿತರ ಬಗ್ಗೆ ಕೀಳರಿಮೆ ತಾಳದಂತೆ ಅವರು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಕೊರೊನಾ ಸೋಂಕು ನಿಯಂತ್ರಣಕ್ಕೆ ‘5 T’ ಸೂತ್ರ ಅಳವಡಿಸಿಕೊಂಡಿದೆ. ಅವೆಂದರೆ, Trace (ಪತ್ತೆ), Track (ಗುರುತಿಸು), Test (ಪರೀಕ್ಷೆ), Treat (ಚಿಕಿತ್ಸೆ) ಹಾಗೂ Technology (ತಂತ್ರಜ್ಞಾನ). ಜತೆಗೆ, ಕಂಟೈನ್ಮೆಂಟ್ ವಲಯಗಳಲ್ಲಿ ಮತ್ತಷ್ಟು ಬಿಗಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ;ಬೆಳಗ್ಗೆ 6 ಗಂಟೆಯಿಂದ ಬೆಂಗಳೂರಿನಿಂದ ಹೊರ ಸ್ಥಳಗಳಿಗೂ ಬಸ್​ ಸಂಚಾರ; ಸರ್ಕಾರ ಸ್ಪಷ್ಟನೆ
ಬೆಂಗಳೂರಿನಲ್ಲಿ 11,230 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಕರೊನಾ ಸೋಂಕಿತರ ಪರೀಕ್ಷೆಯ ವರದಿ 24 ಗಂಟೆಯಲ್ಲಿ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ. ಆಂಬುಲೆನ್ಸ್ ಗಳ ಕೊರತೆ‌ ನೀಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಬೂತ್ ಹಂತದಲ್ಲಿ ಆಂಬ್ಯಲೆನ್ಸ್ ನಿರ್ವಹಣೆಗೆ ವ್ಯವಸ್ಥೆ ಎಂದು ಅವರು ವಿವರಿಸಿದ್ದಾರೆ.
ಕರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಉಪಕರಣ ಖರೀದಿ ಸಂಪೂರ್ಣ ಪಾರದರ್ಶಕವಾಗಿದೆ. ಒಂದು ರೂಪಾಯಿ ಅವ್ಯವಹಾರಕ್ಕೆ ಅವಕಾಶ ನೀಡಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಯಾವುದೇ ದಾಖಲೆ‌ ಬೇಕಾದರೂ ಪರಿಶೀಲಿಸಬಹುದಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜತೆ ಸಹಕಾರ‌ ನೀಡಬೇಕು. ಅನಗತ್ಯ ಗೊಂದಲಗಳಿಗೆ ಅವಕಾಶ ನೀಡಬಾರದೆಂದು ಕೋರಿದ್ದಾರೆ.
ಇದನ್ನೂ ಓದಿ;ರಾಜ್ಯದಲ್ಲಿ ಹಿಡಿತಕ್ಕೆ ಸಿಗುತ್ತಿದೆಯೇ ಕರೊನಾ? ನಿನ್ನೆಗಿಂತ ಒಂದೇ ಪ್ರಕರಣ ಹೆಚ್ಚು…!
ಕರೊನಾ ಸೋಂಕಿತರಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಾವುದೇ ಕಾರಣಕ್ಕೂ ಯಾರೂ ಸಹ ಇಂತಹ ನಿರ್ಧಾರ ಕೈಗೊಳ್ಳಬಾರದು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಅಂತಹ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಲಾಕ್ಡೌನ್ ಜಾರಿ ಮಾಡದೆ ಪರ್ಯಾಯವಾಗಿ ಸೋಂಕು ನಿಯಂತ್ರಣ ಮಾಡುವ ಕಡೆ ಒತ್ತು ನೀಡುವ ಜತೆಗೆ ಜನತೆಯಲ್ಲಿ ಅರಿವು ಮೂಡಿಸಲು ಸೂಚನೆ ನೀಡಲಾಗಿದೆ.
ನಾಳೆಯಿಂದ ರಾಜ್ಯದ ಯಾವುದೇ ಭಾಗದಲ್ಲಿಯೂ ಲಾಕ್​ಡೌನ್​ ಇರಲ್ಲ. ಆರ್ಥಿಕ ಸಂಪನ್ಮೂಲ ಕ್ರೂಢೀಕರಣದ ಜವಾಬ್ದಾರಿ ಇದೆ. ಜನ ಸಹಕಾರ‌‌ ನೀಡಬೇಕು. ಮಾಸ್ಕ್ ಧರಿಸಿದವರ ವಿರುದ್ದ ಅನಿವಾರ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ.|ಬಿ.ಎಸ್​. ಯಡಿಯೂರಪ್ಪ,ಸಿಎಂ
https://www.vijayavani.net/fda-cautions-not-use-toxic-hand-sanitizers/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + nineteen =
Remember me
