ಬೆಂಗಳೂರು:ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಭಾನುವಾರ ಚಾಲನೆ ನೀಡಲಾಗಿದ್ದು, ಇದೀಗ ನಿನ್ನೆ ಒಂದು ದಿನ ಎಷ್ಟು ಜನ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಲಾಭ ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಅಂಕಿ-ಅಂಶ ಹೊರಬಿದ್ದಿದೆ.
ಶಕ್ತಿ ಯೋಜನೆಯಡಿ ನಿನ್ನೆ ಒಂದೇ ದಿನ 41,34,726 ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ನಿಗಮವಾರು ಸಂಚರಿಸಿದವರ ಅಧಿಕೃತ ಅಂಕಿ-ಅಂಶಗಳನ್ನುಬಿಡುಗಡೆಯಾಗಿದೆ. ನಾಲ್ಕು ನಿಗಮಗಳಿಂದ ಒಂದೇ ದಿನಕ್ಕೆ 8,83,53434 ರೂ ಖರ್ಚು ಆಗಿದೆ.

ನಿಗಮವಾರು ಸಂಚರಿಸಿದವರ ವಿವರ:ಕೆಎಸ್​ಆರ್​ಟಿಸಿ ಯಲ್ಲಿ 11,40,057 ಮಂದಿ ಮಹಿಳೆಯರು ಪ್ರಯಾಣಖರ್ಚು: 3578,46,77 ರೂ.ಬಿಎಂಟಿಸಿಯಲ್ಲಿ 17,57,887 ಮಂದಿ ಮಹಿಳೆಯರು ಪ್ರಯಾಣ ಮಾಡಿದ್ದಾರೆಖರ್ಚು : 1,75,33,234 ರೂ.ಎನ್​ ಡಬ್ಲೂ ಕೆಎಸ್​ ಆರ್​ಟಿಸಿ ಅಲ್ಲಿ 8,31,840 ಮಂದಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.ಖರ್ಚು: 2,10,66,638 ರೂ.ಕೆಕೆಆರ್​ಟಿಸಿಯಲ್ಲಿ 4,04,942 ಮಂದಿ ಸ್ತ್ರೀಯರ ಸಂಚಾರಖರ್ಚು : 1,39,68,885 ರೂ.
ರಾಜ್ಯದ ಎಲ್ಲ ಮಹಿಳೆಯರು ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದು, ಪ್ರತಿನಿತ್ಯ 41.81 ಲಕ್ಷ ಮಹಿಳೆಯರು (11.58 ಲಕ್ಷ ಪಾಸ್ ಪ್ರಯಾಣಿಕರು ಸೇರಿ) ಲಾಭ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ. ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ರಾಜ್ಯದ 6,308 ನಗರ, 5,958 ಸಾಮಾನ್ಯ ಹಾಗೂ 6,443 ವೇಗದೂತ ಸೇರಿದಂತೆ ಒಟ್ಟು 18,609 ಬಸ್‌ಗಳಲ್ಲಿ ಪ್ರಯಾಣಿಸಬಹುದು.
“ಶಕ್ತಿ” ಯೋಜನೆ ಆರಂಭವಾದ 2ನೇ ದಿನವಾದ ಸೋಮವಾರವೂ ರಾಜ್ಯದ ಹಲವೆಡೆ ಸರಕಾರಿ ಬಸ್‌ಗಳಲ್ಲಿ ಮಹಿಳೆಯರ ನೂಕುನುಗ್ಗಲು ಕಂಡುಬಂತು. ಕೆಲವು ಪ್ರದೇಶಗಳಲ್ಲಿ ಬಸ್‌ಗಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮೊದಲ ದಿನ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರೆಷ್ಟು? ಸರ್ಕಾರಕ್ಕಾದ ಖರ್ಚೆಷ್ಟು? ಇಲ್ಲಿದೆ ಪೂರ್ಣ ವಿವರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
