ಚಾಮರಾಜನಗರ:ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ನಿ ಅವಿರೋಧ ಆಯ್ಕೆಯಾದ ಖುಷಿಯಲ್ಲಿದ್ದ ಪತಿ, ಸ್ನೇಹಿತರಿಗೂ ಪಾರ್ಟಿ ಕೊಡಿಸಿ ಸಂಭ್ರಮಿಸಿದ್ದ. ಇದಕ್ಕೂ ಮುನ್ನ ಮುಖಂಡರ ಜೊತೆಗೂಡಿ ಪತ್ನಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದ್ದ. ಇದೀಗ ಗೆಲುವಿನ ಖುಷಿಯಲ್ಲಿದ್ದ ಮನೆಯಲ್ಲೀಗ ಶೋಕ ಮಡುಗಟ್ಟಿದೆ.
ಹೌದು, ನೂತನ ಗ್ರಾಪಂ ಸದಸ್ಯೆ ಪತಿ ಮಂಗಳವಾರ ತಡರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರ್ಘಟನೆ ಕೂಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡರಾಯಪೇಟೆಯಲ್ಲಿ ಸಂಭವಿಸಿದೆ.
ದೊಡ್ಡರಾಯಪೇಟೆಯ 2ನೇ ವಾರ್ಡ್​ಗೆ ಪರಿಶಿಷ್ಟ ವರ್ಗ ಮಹಿಳಾ ಮೀಸಲು ಕ್ಷೇತ್ರದಿಂದ ಗಗನ ಎಂಬುವವರು ಗ್ರಾಪಂ ಸದಸ್ಯರಾಗಿ ಸೋಮವಾರ ಅವಿರೋಧ ಆಯ್ಕೆಯಾದರು. ಇವರ ನಿಂಗರಾಜು(30) ಮಂಗಳವಾರ ತಡರಾತ್ರಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೂ ಮುನ್ನ ಅಂದ್ರೆ ಮಂಗಳವಾರ ರಾತ್ರಿ ಪತ್ನಿ ಗ್ರಾಪಂ ಸದಸ್ಯೆ ಆದ ಖುಷಿಯಲ್ಲಿ ನಿಂಗರಾಜು ತನ್ನ ಸ್ನೇಹಿತರಿಗೆ ಪಾರ್ಟಿ ಕೊಟ್ಟು ಮನೆಗೆ ಬಂದಿದ್ದರು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಮಕ್ಕಳಾಗಲಿಲ್ಲ ನೊಂದುಕೊಂಡಿದ್ದ ನಿಂಗರಾಜು ಜಿಗುಪ್ಸೆಗೊಂಡು ಸಾವಿನ ಕದಟ್ಟಿದ್ದಾರೆಂದು ತಾಯಿ ಮಹದೇವಮ್ಮ, ಪತ್ನಿ ಗಗನ ಗೋಳಾಡುತ್ತಿದ್ದರು. ಚಾಮರಾಜನಗರ ಪೂರ್ವ‌ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.
ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?

ಸಚಿವ-ಸಂಸದ-ಜಿಲ್ಲಾಧಿಕಾರಿಯನ್ನೇ ‘ಬೋ…ಮಗ’ ಎಂದ ಕಾಂಗ್ರೆಸ್​ ಶಾಸಕ! ಆಡಿಯೋ ವೈರಲ್​

ಜೆಡಿಎಸ್​ ಮನೆಗೆ ಬಂದ ಸಿ.ಎಂ.ಇಬ್ರಾಹಿಂ! ನಾನು ಮತ್ತು ದೇವೇಗೌಡರು ತಂದೆ-ಮಗ ಇದ್ದಂತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − twelve =
Remember me
