ನಿಯಮ ಕಡ್ಡಾಯವಾಗಿದ್ದರೂ ಪಾಲನೆ ಆಗ್ತಿಲ್ಲ | ಆದೇಶ ಪಾಲಿಸದಿದ್ದರೆ ಎಫ್​ಸಿ ನವೀಕರಣವಿಲ್ಲ
| ಕೀರ್ತಿನಾರಾಯಣ ಸಿ. ಬೆಂಗಳೂರು
ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್​ಗಳು ತಡೆರಹಿತವಾಗಿ ಸಂಚರಿಸುವುದಕ್ಕೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ತಂತ್ರಜ್ಞಾನ ಅಳವಡಿಸುವುದನ್ನು ಕಡ್ಡಾಯ ಮಾಡಿದ್ದ ಸರ್ಕಾರದ ಆದೇಶ ಇನ್ನೂ ಸರಿಯಾಗಿ ಪಾಲನೆ ಆಗಿಲ್ಲ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ ಮುಂದಿನ 1 ತಿಂಗಳಲ್ಲಿ ಎಲ್ಲ ಆಂಬುಲೆನ್ಸ್ ಗಳಿಗೂ ಜಿಪಿಎಸ್ ಅಳವಡಿಸಿಕೊಳ್ಳು ವುದಕ್ಕೆ ಕಾಲಾವಕಾಶ ನೀಡಿದೆ. ಗಡುವು ಮೀರಿದಲ್ಲಿ ವಾಹ ನದ ಫಿಟ್​ನೆಸ್ ಸರ್ಟಿಫಿಕೇಟ್ (ಎಫ್​ಸಿ) ನವೀಕರಿಸದಿರಲು ತೀರ್ವನಿಸಿದೆ.
ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರದ 12,107 ಆಂಬುಲೆನ್ಸ್​ಗಳಿವೆ. ಸಾರಿಗೆ ಇಲಾಖೆ ಮಾಹಿತಿ ಪ್ರಕಾರ 2024ರ ಏಪ್ರಿಲ್ ಅಂತ್ಯಕ್ಕೆ ಎಲ್ಲ ಆರ್​ಟಿಒ ಕಚೇರಿಗಳ ಅಂಕಿ-ಅಂಶದಂತೆ 8584 ಆಂಬುಲೆನ್ಸ್ ಗಳಲ್ಲಿ 2532 ಆಂಬುಲೆನ್ಸ್​ಗಳಿಗಷ್ಟೇ ಜಿಪಿಎಸ್ ಅಳವಡಿಸಲಾಗಿದೆ. ಇನ್ನೂ 6046 ವಾಹನಗಳಿಗೆ ಅಳವಡಿಕೆ ಬಾಕಿ ಇದೆ. ಇದರಲ್ಲಿ ಜ್ಞಾನಭಾರತಿ, ಯಲಹಂಕ ಮತ್ತು ಚಂದಾಪುರ ಆರ್​ಟಿಒ ಕಚೇರಿಗಳ ವ್ಯಾಪ್ತಿಯಲ್ಲಿರುವ ಆಂಬುಲೆನ್ಸ್​ಗಳ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರಕ್ಕೆ ಸೇರಿದ ಆಂಬ್ಯುಲೆನ್ಸ್​ಗಳಿಗೆ ಕೂಡಲೇ ಜಿಪಿಎಸ್ ಅಳವಡಿಸುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿ, ಮುಂದಿನ 1ತಿಂಗಳ ಒಳಗೆ ಅಳವಡಿಸಿಕೊಳ್ಳಬೇಕು.
ಮುಂದಿನ ಪರಿಶೀಲನಾ ಸಭೆಯಲ್ಲಿ ಜಿಪಿಎಸ್ ವ್ಯವಸ್ಥೆ ಹಾಕಿರುವ ವಾಹನಗಳ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಆರ್​ಟಿಒಗಳಿಗೆ ನಿರ್ದೇಶಿಸಲಾಗಿದೆ. ಹಾಸನದಲ್ಲಿ 174 ಸರ್ಕಾರಿ ಆಂಬುಲೆನ್ಸ್​ಗಳಿದ್ದು, ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗಿದೆ ಎಂದು ಸಾರಿಗೆ ಆಯುಕ್ತರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟ್ರಾಫಿಕ್​ನಲ್ಲಿ ಸಿಕ್ಕರೆ ಇಲ್ಲಿಗೆ ಕರೆ ಮಾಡಿ…:ಬೆಂಗಳೂರು ನಗರದಲ್ಲಿ ರೋಗಿಯನ್ನು ತುರ್ತು ಸೇವೆಗಾಗಿ ರವಾನಿಸುವಾಗ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರೆ, ರೋಗಿಗಳ ಕುಟುಂಬಸ್ಥರು, ಆಂಬುಲೆನ್ಸ್ ಸಿಬ್ಬಂದಿ ಸಹಾಯವಾಣಿ ಸಂಖ್ಯೆ-112 ಅಥವಾ ದೂರವಾಣಿ ಸಂಖ್ಯೆಗಳು 080-22943131, 080-22943030, 080-22943663, 080-22943684ಗೆ ಕರೆ ಮಾಡಿ ಸಂಚಾರ ದಟ್ಟಣೆ ನಿವಾರಿಸಲು ಕೋರಬಹುದು.
ವಾಹನ್​ನಿಂದ ವಿವರ ಸಂಗ್ರಹ:ಇತ್ತೀಚೆಗೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ.ಯೋಗೀಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಂಬುಲೆನ್ಸ್​ಗಳಿಗೆ ಜಿಪಿಎಸ್ ಅಳವಡಿಸದ ಬಗ್ಗೆ ಚರ್ಚೆಯಾಗಿದೆ. ಈಗಾಗಲೇ ನೋಂದಣಿ ಆಗಿರುವ ಖಾಸಗಿ ಮಾಲೀಕತ್ವದ ಆಂಬುಲೆನ್ಸ್​ಗಳ ವಿವರಗಳನ್ನು ವಾಹನ್ ಡೆಟಾಬೇಸ್​ನಿಂದ ಪಡೆದು ಹಾಗೂ ಖಾಸಗಿ ಮಾಲೀಕತ್ವದ ಆಂಬುಲೆನ್ಸ್​ಗಳ ವಿವರ ಪಡೆದು ಇಎಂಆರ್​ಐ ಎಂಪಾನಲ್​ವೆುಂಟ್ ಸಹಯೋಗದಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಆಯುಕ್ತ ಸಿ.ಮಲ್ಲಿಕಾರ್ಜುನ ಅವರು ಎಲ್ಲ ಆರ್​ಟಿಒಗಳಿಗೆ ಸೂಚನೆ ನೀಡಿದ್ದಾರೆ.
ಸರ್ಕಾರ ಹೇಳಿದ್ದೇನು?:ಆಂಬುಲೆನ್ಸ್​ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಸಂಚಾರ ಪೊಲೀಸರ ವತಿಯಿಂದ ವಿಶೇಷ ತುರ್ತು ಪ್ರತಿಕ್ರಿಯೆ ಸೇವೆ ಮತ್ತು ಸ್ಥಿರ ದೂರವಾಣಿ ಸಂಖ್ಯೆಯ ವ್ಯವಸ್ಥೆ ಮಾಡಲಾಗಿದೆ. ಆಂಬುಲೆನ್ಸ್​ಗಳು ಸಂಚಾರ ಆರಂಭಿಸಿದಾಗ ಮತ್ತು ರೋಗಿಗಳನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯುವಾಗ ಬೆಂಗಳೂರು ನಗರದಲ್ಲಿ ಟ್ರಾಫಿಕ್​ನಲ್ಲಿ ಸಿಲುಕಿದರೆ, ವಾಹನ ದಟ್ಟಣೆ ನಿವಾರಿಸಲು ಇಆರ್​ಎಸ್​ಎಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು. ಈ ಸಹಾಯವಾಣಿ ಸಂಖ್ಯೆಯನ್ನು ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪರ ಮತ್ತು ಕೋಲಾರ ಜಿಲ್ಲೆಗಳ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳ ಆಂಬುಲೆನ್ಸ್​ಗಳಿಗೆ ನೀಡಲಾಗಿದೆ ಎಂದು ಸರ್ಕಾರ ಹೈಕೋರ್ಟ್​ಗೆ ತಿಳಿಸಿತ್ತು.
. ಎಫ್​ಸಿ ನವೀಕರಣ ವೇಳೆ ಪರೀಕ್ಷೆ ಕಡ್ಡಾಯ
. ಜಿಪಿಎಸ್ ವ್ಯವಸ್ಥೆಯನ್ನು ಪರಿಶೀಲಿಸಬೇಕು
. ದೃಢಪಟ್ಟ ಬಳಿಕವೇ ಮುಂದಿನ ಕ್ರಮ ಆಗಲಿ
. ಜಿಪಿಎಸ್ ಅಳವಡಿಸದಿದ್ದರೆ ಎಫ್​ಸಿ ಬೇಡ
. ಎಲ್ಲ ಆರ್​ಟಿಒ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ
. ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಜತೆ ಆರ್​ಟಿಒಗಳು ಸಭೆ ನಡೆಸಬೇಕು
. ಆಂಬುಲೆನ್ಸ್​ಗೆ ಜಿಪಿಎಸ್ ಅಳವಡಿಸುವ ಆದೇಶ ಪಾಲನೆಗೆ ಸೂಚಿಸಿ
. ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಚರ್ಚೆ ಆಗಲಿ
. ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲು ಅಪರ ಸಾರಿಗೆ ಆಯುಕ್ತರಿಗೆ ಸೂಚನೆ
. ಮುಂದಿನ ಒಂದು ತಿಂಗಳಲ್ಲಿ ಶೇ.100 ಜಿಪಿಎಸ್ ಅಳವಡಿಸಬೇಕು
ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಶಾಲೆ, ಮನೆಗಳಿಗೆ ಬೆಂಕಿ

ಬೆಳಗ್ಗೆ ರಾಷ್ಟ್ರಗೀತೆಯೊಂದಿಗೆ ಶಾಲೆಗಳನ್ನು ಆರಂಭಿಸಲು ಜಮ್ಮು ಕಾಶ್ಮೀರ ಸರ್ಕಾರ ಸೂಚನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
