| ಕೀರ್ತಿನಾರಾಯಣ ಸಿ. ಬೆಂಗಳೂರುರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಇನ್ನು ಮುಂದೆ ಎಲ್ಲ ರೀತಿಯ ಸಾರ್ವಜನಿಕ ಸೇವಾವಾಹನಗಳಲ್ಲಿ ಜಿಪಿಎಸ್ ಟ್ರಾ್ಯಕಿಂಗ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸುತ್ತಿದ್ದು, ಡಿಸೆಂಬರ್​ನಿಂದ ಈ ಯೋಜನೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ. ಯೆಲ್ಲೋ ಬೋರ್ಡ್​ನ ಟ್ಯಾಕ್ಸಿಗಳು, ಕ್ಯಾಬ್​ಗಳು, ಖಾಸಗಿ ಬಸ್​ಗಳು, ನ್ಯಾಷನಲ್ ಪರ್ವಿುಟ್ ಹೊಂದಿರುವ ಗೂಡ್ಸ್ ವಾಹನಗಳಲ್ಲಿ ಪ್ಯಾನಿಕ್ ಬಟನ್ ಒಳಗೊಂಡ ವೆಹಿಕಲ್ ಲೊಕೇಷನ್ ಟ್ರಾ್ಯಕಿಂಗ್ (ವಿಎಲ್​ಟಿ) ಡಿವೈಸ್ ಅಳವಡಿಕೆಯಾಗಲಿದೆ.
ವಾಹನಗಳಲ್ಲಿ ವಿಎಲ್​ಟಿ ಡಿವೈಸ್​ಗಳನ್ನು ಅಳವಡಿಸುವ ಗುತ್ತಿಗೆ ನೀಡಲು ಸಾರಿಗೆ ಇಲಾಖೆ 2023 ಫೆ.9ರಂದು ಇ-ಟೆಂಡರ್ ಮೂಲಕ ಕಂಪನಿಗಳಿಂದ ಅರ್ಜಿ ಆಹ್ವಾನಿಸಿತ್ತು. ಈಗ ಅರ್ಹತೆ ಹೊಂದಿರುವ 13 ಕಂಪನಿಗಳು ಆಯ್ಕೆಯಾಗಿವೆ. ಈ ಕಂಪನಿಗಳು ಎಐಎಸ್ 140 ಪ್ರಮಾಣೀಕೃತ ವೆಹಿಕಲ್ ಲೋಕೇಷನ್ ಟ್ರಾ್ಯಕಿಂಗ್ ಡಿವೈಸ್ ಅಳವಡಿಸಲಿವೆ. ಯೋಜನೆ ಜಾರಿಗೊಳಿಸಲು ಅನುಮತಿ ಕೋರಿ ಸಾರಿಗೆ ಇಲಾಖೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಹಸಿರು ನಿಶಾನೆ ಸಿಕ್ಕ ಕೂಡಲೇ ಜಾರಿಯಾಗಲಿದೆ.
ಚಲಿಸುವ ಬಸ್​ನಲ್ಲಿ 23 ವರ್ಷದ ವಿದ್ಯಾರ್ಥಿನಿ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ ನಿರ್ಭಯಾ ಪ್ರಕರಣದ ನಂತರ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಎಲ್ಲ ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ ಎಂದು 2016ರ ನವೆಂಬರ್​ನಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ನಿಯಮ 2018 ಏಪ್ರಿಲ್​ನಿಂದ ದೇಶದಲ್ಲಿ ಜಾರಿಗೆ ಬಂದಿದೆ. ನವದೆಹಲಿ, ಮಹಾರಾಷ್ಟ್ರ, ಉತ್ತರಾಖಂಡ, ಛತ್ತೀಸ್​ಗಡ, ಹಿಮಾಚಲಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಜಾರಿಯಾಗಿದೆ. ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಬಂದಿರಲಿಲ್ಲ. ಹಂತಹಂತವಾಗಿ ಎಲ್ಲ ರಾಜ್ಯಗಳು ಯೋಜನೆ ಅನುಷ್ಠಾನಕ್ಕೆ ತರಲು ಆಸಕ್ತಿ ತೋರುತ್ತಿವೆ.
ಕೇರಳ ಸೇರಿ ಕೆಲ ರಾಜ್ಯಗಳಲ್ಲಿ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅನ್ನು ಅಳವಡಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಮನಸೋಇಚ್ಛೆ ದರ ವಸೂಲಿ ಮಾಡಲಾಗುತ್ತದೆ. ಒಂದು ವಾಹನಕ್ಕೆ 13 ರಿಂದ 14 ಸಾವಿರ ರೂ.ವರೆಗೆ ಪಡೆಯಲಾಗುತ್ತಿದೆ. ಕರ್ನಾಟಕದಲ್ಲಿ ಟೆಂಡರ್ ಆಹ್ವಾನಿಸಿ, ನಿರ್ದಿಷ್ಟ ಕಂಪನಿಗಳಿಗೆ ಮಾತ್ರವೇ ಡಿವೈಸ್ ಅಳವಡಿಕೆ ಜವಾಬ್ದಾರಿ ನೀಡಲಾಗುತ್ತಿದೆ. ಈಗ ಬೇರೆ ರಾಜ್ಯಗಳು ಸಹ ನಮ್ಮಂತೆ ಮಾಡಬೇಕಾಗಿತ್ತು ಎಂದು ಆಲೋಚಿಸುತ್ತಿವೆ. ಸರ್ಕಾರವೇ ದರ ನಿಗದಿಪಡಿಸಲು ತೀರ್ವನಿಸಿದ್ದು, ಉತ್ತಮ ಗುಣಮಟ್ಟದ ಡಿವೈಸ್​ಗೆ 9 ಸಾವಿರ ರೂ.ವರೆಗೆ ನಿಗದಿಪಡಿಸುವ ಅಂದಾಜಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆ ಅನ್ವಯ ಸಾರ್ವಜನಿಕ ಸೇವಾ ವಾಹನಗಳಲ್ಲಿ ಕಡ್ಡಾಯವಾಗಿ ವೆಹಿಕಲ್ ಲೊಕೇಷನ್ ಟ್ರಾ್ಯಕಿಂಗ್ ಡಿವೈಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಬೇಕು. ಈ ಡಿವೈಸ್​ಗಳನ್ನು ಅಳವಡಿಸುವ ಜವಾಬ್ದಾರಿಯನ್ನು ಈಗಾಗಲೇ ಟೆಂಡರ್ ಮೂಲಕ 13 ಕಂಪನಿಗಳಿಗೆ ಕೊಡಲಾಗಿದೆ. ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುತ್ತದೆ.
| ಬಿ.ಪಿ.ಉಮಾಶಂಕರ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಆಡಳಿತ)
ಬೆಂಗ್ಳೂರಲ್ಲಿ ಕಮಾಂಡ್ ಸೆಂಟರ್:ನಿರ್ಭಯಾ ನಿಧಿಯಡಿ ಬೆಂಗಳೂರಿನ ಶಾಂತಿನಗರ ದಲ್ಲಿರುವ ಸಾರಿಗೆ ಇಲಾಖೆ ಪ್ರಧಾನ ಕಚೇರಿಯಲ್ಲಿ ಕಮಾಂಡ್ ಸೆಂಟರ್ ಸ್ಥಾಪನೆಯಾಗಲಿದೆ. ಎಲ್ಲ ಸಾರ್ವಜನಿಕ ಸೇವಾ ವಾಹನಗಳಲ್ಲಿ ಅಳವಡಿಸುವ ಡಿವೈಸ್​ಗಳಿಂದ ಕಮಾಂಡ್ ಸೆಂಟರ್​ನಿಂದಲೇ ನಿಗಾ ವಹಿಸಲಿದ್ದಾರೆ. ಸಾರಿಗೆ, ಪೊಲೀಸ್ ಸೇರಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ನೆರವಿಗೆ ಧಾವಿಸುವ ಯೋಜನೆ ರೂಪಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಅಪರಾಧಗಳ ನಿಯಂತ್ರಣಕ್ಕೆ ವಿಎಲ್​ಟಿ ವ್ಯವಸ್ಥೆ ತುಂಬಾ ಉಪಯುಕ್ತವಾಗಲಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 15 =
Remember me
