|ಗುರುಪ್ರಸಾದ್ ತುಂಬಸೋಗೆಮೈಸೂರು
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪ್ರಸಿದ್ಧ ಕೊಕ್ಕರೆಬೆಳ್ಳೂರಿನ ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ನೂತನ ಪ್ರಯೋಗಕ್ಕೆ ಮುಂದಾಗಿದ್ದು, ಎರಡು ಹೆಜ್ಜಾರ್ಲೆ(ಪೆಲಿಕಾನ್)ಗಳಿಗೆ ಜಿಪಿಎಸ್ ಟ್ಯಾಗ್ ಅಳವಡಿಸಲು ತಯಾರಿ ನಡೆಸಿದೆ.
ಹಕ್ಕಿಗಳ ವಲಸೆ ಮತ್ತು ಜೀವನ ಕ್ರಮದ ಅಧ್ಯಯನಕ್ಕಾಗಿ ಅಕ್ಟೋಬರ್ ಹೊತ್ತಿಗೆ ಸೋಲಾರ್ ಶಕ್ತಿಯ ಜಿಪಿಎಸ್-ಜಿಎಸ್​ಎಂ ಪೆಟಾಜಿಯಲ್ ಟ್ಯಾಗ್ ಉಪಕರಣ ಅಳವಡಿಸಲು ಉದ್ದೇಶಿಸಲಾಗಿದೆ. ವೈಲ್ಡ್​ಲೈಫ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಂಘಟನೆಯೊಂದಿಗೆ ಸೇರಿ ಈ ಕಾರ್ಯ ಮಾಡಲಾಗುತ್ತಿದ್ದು, ಈಗಾಗಲೇ ಇಲಾಖೆಯ ಮುಖ್ಯಸ್ಥರಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಪಡೆಯಲಾಗಿದೆ. ಜರ್ಮನಿಯಿಂದ ಈ ಉಪಕರಣ ತರಿಸುತ್ತಿದ್ದು, 4 ಲಕ್ಷ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.
ವಲಸೆ ಅಧ್ಯಯನಕ್ಕೆ ಸಹಕಾರಿ:ವಿವಿಧ ಕಡೆಯಿಂದ ಕೊಕ್ಕರೆಬೆಳ್ಳೂರಿಗೆ ಆಗಮಿಸುವ ಹೆಜ್ಜಾರ್ಲೆ ಮತ್ತು ಬಣ್ಣದ ಕೊಕ್ಕರೆ (ಪೆಂಡೆಟ್ ಸ್ಟ್ರೋಕ್)ಗಳು ಜನ ಸಮುದಾಯದ ನಡುವೆ ಇರುವ ಮರಗಳಲ್ಲಿ ಗೂಡುಕಟ್ಟಿ ಸಂತಾನಾಭಿವೃದ್ಧಿ ಮಾಡುತ್ತವೆ. ಈ ಪ್ರಕ್ರಿಯೆ ಮುಗಿದ ನಂತರ ಮತ್ತೆಲ್ಲಿಗೋ ತೆರಳುತ್ತವೆ. ಎಲ್ಲಿಂದ ಬರುತ್ತವೆ, ಎಲ್ಲಿಗೆ ಹೋಗುತ್ತವೆ ಎಂಬುದು ಸರಿಯಾಗಿ ತಿಳಿದಿಲ್ಲ. ಜಿಪಿಎಸ್ ಟ್ಯಾಗ್ ಅಳವಡಿಸುವುದರಿಂದ ಸಂತಾನಾಭಿವೃದ್ಧಿ ನಂತರ ಯಾವ ಪ್ರದೇಶಕ್ಕೆ ತೆರಳುತ್ತವೆ, ಅವುಗಳ ವಲಸೆ ಕ್ರಮ ಏನು ಎಂಬುದನ್ನು ತಿಳಿಯಬಹುದು. ಹೆಜ್ಜಾರ್ಲೆಗಳು ಸ್ಥಳೀಯವಾಗಿ ಮಾತ್ರ ವಲಸೆ ಹೋಗುತ್ತವೆ ಎಂಬ ಅಭಿಪ್ರಾಯಗಳಿದ್ದು, ಸಂಚಾರ ಮಾಡಿದ ಸಮಯ ಮತ್ತು ಎಷ್ಟು ದೂರ ಕ್ರಮಿಸಿವೆ ಎಂಬ ಅಧ್ಯಯನಕ್ಕೂ ಸಹಕಾರಿಯಾಗಲಿದೆ.
ರೆಕ್ಕೆಗಳಿಗೆ ನಂಬರ್ ಟ್ಯಾಗ್:ಅರಣ್ಯ ಇಲಾಖೆ ಕೊಕ್ಕರೆಬೆಳ್ಳೂರಿನಲ್ಲಿ ಕೆಲ ಹಕ್ಕಿಗಳಿಗೆ ಈಗಾಗಲೇ ನಂಬರ್ ಟ್ಯಾಗ್ ಅಳವಡಿಸಿದೆ. ಗ್ರಾಮಗಳ ನಡುವೆ ಮರಗಳಲ್ಲಿ ಸಂತಾನಾಭಿವೃದ್ಧಿಯಲ್ಲಿ ತೊಡಗುವ ಸಂದರ್ಭದಲ್ಲಿ ಎಷ್ಟೋ ಮರಿಗಳು ಕೆಳಗೆ ಬೀಳುತ್ತವೆ. ಅವುಗಳನ್ನು ರಕ್ಷಣೆ ಮಾಡಿ ಕೃತಕ ಬೃಹತ್ ಬಲೆಯೊಳಗೆ ಮೀನು ಮುಂತಾದ ಆಹಾರ ನೀಡಿ ಮೂರ್ನಾಲ್ಕು ತಿಂಗಳು ಆರೈಕೆ ಮಾಡಿ ನಂತರ ಬಿಡಲಾಗುತ್ತದೆ. ಅವುಗಳಲ್ಲಿ ಕೆಲವು ಮರಿಗಳ ರೆಕ್ಕೆಗಳಿಗೆ ಪೆಟಾಜಿಯಲ್ ನಂಬರ್ ಟ್ಯಾಗ್ ತೊಡಿಸಿ ಬಿಟ್ಟು ಅಧ್ಯಯನ ಮಾಡಲಾಗುತ್ತಿದೆ. ಆದರೆ ಇದರಿಂದ ಜಿಪಿಎಸ್ ಟ್ಯಾಗ್ ನಂತೆ ಎಲ್ಲೆಲ್ಲಿ ಹೋಗಿವೆ ಎಂಬುದನ್ನೆಲ್ಲ ತಿಳಿಯಲು ಸಾಧ್ಯವಿಲ್ಲ. ಆದರೆ ಮತ್ತೊಂದು ಕಡೆ ಕಾಣಸಿಕೊಂಡು ಮತ್ತೊಬ್ಬರು ಗುರುತಿಸಿ ಮಾಹಿತಿ ವಿನಿಮಯ ಮಾಡಿಕೊಂಡಾಗ ಮಾತ್ರ ಎಲ್ಲೆಲ್ಲಿ ಸಂಚಾರ ಮಾಡಿವೆ ಎಂಬುದನ್ನು ಅಂದಾಜಿಸಲು ಅನುಕೂಲವಾಗಲಿದೆ. 2021ರ ಮಾರ್ಚ್​ನಲ್ಲಿ ನಾಲ್ಕು ಹೆಜ್ಜಾರ್ಲೆ ಮರಿಗಳಿಗೆ ಕೆ01, ಕೆ02, ಕೆ03 ಮತ್ತು ಕೆ04 ಎಂಬ ಸಂಖ್ಯೆ ಇರುವ ಟ್ಯಾಗ್​ಗಳನ್ನು ರೆಕ್ಕೆಗಳಿಗೆ ಅಳವಡಿಸಿ ಬಿಡುಗಡೆಗೊಳಿಸಲಾಗಿದೆ. 2021ರ ಏಪ್ರಿಲ್​ನಲ್ಲಿ ಕೆಲವು ಬಣ್ಣದ ಕೊಕ್ಕರೆಗಳಿಗೆ ಎಪಿಯು/ಕೆ-5551, ಎಪಿಎಸ್/ಕೆ-5552, ಎವೈಎನ್/ಕೆ-5554, ಎವೈಎಕ್ಸ್/ಕೆ-5555, ಎವೈವೈ/ಕೆ-5556, ಎಪಿಟಿ/ಕೆ-5557, ಎಪಿವಿ/ಕೆ-5558, ಎಪಿಆರ್/ಕೆ-5559, ಎಪಿಎಕ್ಸ್/ಕೆ-5560 ನಂಬರಿನ ಟ್ಯಾಗ್ ಅಳವಡಿಸಲಾಗಿದೆ.

ಮರದಿಂದ ಬಿದ್ದ ಮರಿ ಪಕ್ಷಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಕೊಕ್ಕರೆಬೆಳ್ಳೂರು ಗ್ರಾಮದ ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಲಿಂಗೇಗೌಡ ಈ ಹಿಂದೆ ಪ್ರಯೋಗ ಮಾಡಿದ್ದರು. ಆರೈಕೆ ಮಾಡಿದ ಮರಿಗಳನ್ನು ಬಿಡುವ ಮೊದಲು ಕಾಲುಗಳಿಗೆ ಬಣ್ಣದ ವಯರ್ ಮಾದರಿಯನ್ನು ಟ್ಯಾಗ್ ರೀತಿಯಲ್ಲಿ ಕಟ್ಟಿ ಬಿಡುತ್ತಿದ್ದರು. ನಂತರದಲ್ಲಿ ಆ ಪಕ್ಷಿಗಳು ಮೈಸೂರು ಭಾಗದಲ್ಲಿ ಕಾಣಿಸಿಕೊಂಡಿದ್ದವು ಎನ್ನುತ್ತಾರೆ ಲಿಂಗೇಗೌಡರು.
ಅರಣ್ಯ ಇಲಾಖೆಯಿಂದ ಎರಡು ಹೆಜ್ಜಾರ್ಲೆಗಳಿಗೆ ಜಿಪಿಎಸ್ ಟ್ಯಾಗ್ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಇದರಿಂದ ಅವುಗಳ ವಲಸೆ ಮತ್ತು ಜೀವನ ಕ್ರಮ ತಿಳಿಯಲು ಅನುಕೂಲವಾಗಲಿದೆ. ಈ ಕಾರ್ಯಕ್ಕೆ ಪಿಸಿಸಿಎಫ್ ಅವರು ಅನುಮತಿ ನೀಡಿದ್ದಾರೆ.
|ಡಾ.ಕೆ.ಸಿ.ಪ್ರಶಾಂತ್​ಕುಮಾರ್ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 8 =
Remember me
