|ಸುಭಾಸ ಧೂಪದಹೊಂಡಕಾರವಾರ
ಗೌರಮ್ಮ ಎನ್.-ಎಂಕಾಂ ಗೋಲ್ಡ್ ಮೆಡಲಿಸ್ಟ್, ಸ್ವಾತಿ ಕೃಷ್ಣ ಬಿ.-ಎಂಟೆಕ್, ಅಂಬಿಕಾಬಾಯಿ ಕೆ.-ಎಂಎ ಅರ್ಥಶಾಸ್ತ್ರ, ಪ್ರಿಯಾಂಕಾ ಆರ್.-ಎಂಕಾಂ, ಲಕ್ಷ್ಮೀದೇವಿ-ಬಿಎಸ್​ಸಿ, ಬಿಎಡ್ ಇದು ಯುಪಿಎಸ್​ಸಿ ಪರೀಕ್ಷೆಯ ಆಯ್ಕೆ ಪಟ್ಟಿಯಲ್ಲ, ಬದಲಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸಲಿರುವ ಮಹಿಳಾ ಪೊಲೀಸ್ ಕಾನ್​ಸ್ಟೆಬಲ್​ಗಳ ಹೆಸರು! ಉತ್ತರ ಕನ್ನಡ ಸೇರಿ ರಾಜ್ಯದ 13 ಜಿಲ್ಲೆಗಳಲ್ಲಿ ಮಹಿಳಾ ಪೊಲೀಸ್ ಕಾನ್​ಸ್ಟೆಬಲ್​ಗಳಾಗಿ ಕಾರ್ಯನಿರ್ವಹಿಸಲಿರುವ 121 ಸಿಬ್ಬಂದಿ ಬುಧವಾರ ಕಾರವಾರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ತಮ್ಮ ಬುನಾದಿ ತರಬೇತಿ ಪೂರೈಸಿದ್ದಾರೆ. ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿದವರು ಪಡೆಯಬಹುದಾದ ಈ ಪೊಲೀಸ್ ಕಾನ್​ಸ್ಟೆಬಲ್ ಹುದ್ದೆಗಳಿಗೆ ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ ಹೊಂದಿದವರು ಪೈಪೋಟಿ ನೀಡುತ್ತಿದ್ದಾರೆ. ಬುಧವಾರ ನಿರ್ಗಮನ ಪಥಸಂಚಲನ ನಡೆಸಿ ಕರ್ತವ್ಯ ನಿರ್ವಹಿಸಲಿರುವ ಜಿಲ್ಲೆಗಳಿಗೆ ತೆರಳಿದ 121 ಲೇಡಿ ಪಿಸಿಗಳ ಪೈಕಿ 6 ಮಂದಿ ಮಾತ್ರ ಪಿಯುಸಿ ಓದಿದವರು. 13 ಬಿಇ ಪದವೀಧರರಿದ್ದಾರೆ. 26 ಸ್ನಾತಕೋತ್ತರ ಪದವೀಧರರಿದ್ದಾರೆ. 73 ಪದವೀಧರ ಅಭ್ಯರ್ಥಿಗಳಿದ್ದಾರೆ ಎಂಬುದು ವಿಶೇಷ.
ಏಕೆ ಹೀಗೆ?:ಸರ್ಕಾರಿ ಉದ್ಯೋಗಕ್ಕಾಗಿ ಸಾಕಷ್ಟು ಪೈಪೋಟಿ ಇದೆ. ಉನ್ನತ ಶಿಕ್ಷಣ ಪಡೆದವರಿಗೂ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ಆದರೆ, ಓದಿದ ನಂತರ ಪಾಲಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಹೆಚ್ಚಿನವರು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾರೆ. ಒಂದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡ ನಂತರ ಅಲ್ಲಿ ಕರ್ತವ್ಯ ನಿರ್ವಹಿಸುತ್ತ ಮುಂದೆ ಕಷ್ಟಪಟ್ಟು ಓದಿ ಉನ್ನತ ಹುದ್ದೆಗೆ ತೆರಳುತ್ತಾರೆ. ಇತ್ತೀಚೆಗೆ ಪೊಲೀಸ್ ಕಾನ್​ಸ್ಟೆಬಲ್​ಗಳಾಗಿ ಆಯ್ಕೆಯಾಗುವ ಶೇ.90 ಅಭ್ಯರ್ಥಿಗಳು ಕನಿಷ್ಠ ಪದವೀಧರರಾಗಿರುತ್ತಾರೆ ಎಂಬುದು ಪೊಲೀಸ್ ತರಬೇತಿ ಶಾಲೆಯ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.
ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಗ್ರಾಮದ ಸ್ವಾತಿ ಕೃಷ್ಣ ಬಿ. ಅವರು ಎಂಟೆಕ್ ಪದವೀಧರೆ. ಬೆಂಗಳೂರು ನಗರದ ಪೊಲೀಸ್ ಕಾನ್​ಸ್ಟೆಬಲ್ ಆಗಿ ಆಯ್ಕೆಯಾಗಿರುವ ಅವರು ಬುನಾದಿ ತರಬೇತಿಯಲ್ಲಿ ಶಸ್ತ್ರಾಸ್ತ್ರ ಮತ್ತು ಗುಂಡು ಹಾರಿಸುವ ತರಬೇತಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ‘ಇದೊಂದು ಶಿಸ್ತಿನ ಇಲಾಖೆ ಹೊಸ ಅನುಭವಕ್ಕಾಗಿ ಪೊಲೀಸ್ ಕಾನ್​ಸ್ಟೆಬಲ್ ಪರೀಕ್ಷೆ ಬರೆದು ಆಯ್ಕೆಯಾದೆ. ಈಗಾಗಲೆ ಪಿಡಬ್ಲ್ಯುಡಿ ಇಂಜಿನಿಯರ್ ಹುದ್ದೆಗೆ ಪರೀಕ್ಷೆ ಬರೆದು, ಆಯ್ಕೆಯಾಗಿದ್ದೇನೆ’ ಎಂದು ಸ್ವಾತಿ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಬಸವನಗುಡಿ ಗ್ರಾಮದ ಗೌರಮ್ಮ ಎನ್. ಎಂಕಾಂ ಓದಿ ಬಂಗಾರದ ಪದಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಾನ್​ಸ್ಟೆಬಲ್ ಆಗಿ ಆಯ್ಕೆಯಾಗಿರುವ ಅವರು ತರಬೇತಿಯಲ್ಲಿ ಒಳಾಂಗಣ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು. ‘ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಹವ್ಯಾಸ ಹೊಂದಿದ್ದೇನೆ. ಆರ್ಥಿಕ ಸ್ವಾವಲಂಬನೆಗಾಗಿ ಈ ಹುದ್ದೆಗೆ ಬಂದೆ. ಮುಂದೆ ಯುಪಿಎಸ್​ಸಿ ಪರೀಕ್ಷೆ ಬರೆಯುವ ಗುರಿ ಹೊಂದಿದ್ದೇನೆ’ ಎನ್ನುತ್ತಾರೆ ಗೌರಮ್ಮ.
ಮೈಸೂರು ನಗರದ ಅಂಬಿಕಾಬಾಯಿ ಕೆ. ಬೆಂಗಳೂರು ನಗರ ಪೊಲೀಸ್ ಕಾನ್​ಸ್ಟೆಬಲ್ ಆಗಿ ಆಯ್ಕೆಯಾಗಿದ್ದಾರೆ. ಅರ್ಥಶಾಸ್ತ್ರದಲ್ಲಿ ಎಂಎ ಓದಿದ ಅವರು ಪೊಲೀಸ್ ತರಬೇತಿಯಲ್ಲಿ ಸವೋತ್ತಮ ಪ್ರಶಸ್ತಿ ಗಿಟ್ಟಿಸಿಕೊಂಡರು. ಅಷ್ಟೇ ಅಲ್ಲ ನಿರ್ಗಮನ ಪಥ ಸಂಚಲನದ ನಾಯಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.
ಕೆಪಿಎಸ್ಸಿ 2011ರ ಬ್ಯಾಚ್​ಗೆ ಕಾನೂನಿನ ಮುಕ್ತಿ; ಈ ಅಧಿವೇಶನದಲ್ಲೇ ವಿಶೇಷ ವಿಧೇಯಕ ಮಂಡನೆ

ಯೋಗ ಕ್ಲಾಸ್​​ನಲ್ಲಿ ಪರಪುರಷನ ಜತೆ ಲವ್ವಿಡವ್ವಿ! ಪತ್ನಿಯ ಈ ಅಸಹ್ಯ ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ

ಮಂಡ್ಯದಲ್ಲಿ ಐವರ ಕೊಲೆ: ನಮ್ಮಿಬ್ಬರಿಗೂ ಆಫೇರ್ ಇತ್ತು, ಪಂಚಾಯ್ತಿ ಮಾಡಿ ಸೀರೆ ಹಾಕಿಸಿದ್ರು… ಸ್ಫೋಟಕ ರಹಸ್ಯ ಬಾಯ್ಬಿಟ್ಟ ಮೃತಳ ಗಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + nineteen =
Remember me
