ಬೆಂಗಳೂರುಕಾನೂನು ಕ್ಷೇತ್ರವು ಕೇವಲ ಶಾಸನಗಳನ್ನು ಅರ್ಥೈಸುವುದು ಮತ್ತು ಪ್ರಕರಣಗಳನ್ನು ವಾದಿಸುವುದು ಮಾತ್ರವಲ್ಲ. ನ್ಯಾಯ, ಸಮಾನತೆ ಮತ್ತು ಸತ್ಯದ ತತ್ವಗಳನ್ನು ಎತ್ತಿಹಿಡಿಯುವುದಾಗಿದೆ. ದನಿ ಇಲ್ಲದವರು ಮತ್ತು ತುಳಿತಕ್ಕೊಳಗಾದವರಿಗೆ ದನಿಯಾಗಿ ಪ್ರತಿ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವುದಾಗಿದೆ ಎಂದು ಹೈಕೊರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ತಿಳಿಸಿದರು.
ಆರ್.ವಿ. ಇನ್‌ಸ್ಟಿಟ್ಯೂಟ್ ಆ್ ಲೀಗಲ್ ಸ್ಟಡೀಸ್ ಭಾನುವಾರ ಜೆ.ಪಿ. ನಗರದ ಆರ್.ವಿ. ದಂತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮೊದಲ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಪದವೀಧರರಾಗಿ ಜಗತ್ತಿಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳು, ನಿಮ್ಮ ಕಕ್ಷಿದಾರರಿಗೆ ಮಾತ್ರವಲ್ಲದೆ, ಸಮಾಜಕ್ಕಾಗಿ ಕರ್ತವ್ಯ ನಿರ್ವಹಿಸಬೇಕಿದೆ. ನಿಮ್ಮ ಜ್ಞಾನ ಮತ್ತು ಪರಿಣತಿಯು ಬದಲಾವಣೆ ಬಯಸಲು, ಅನ್ಯಾಯವನ್ನು ಪ್ರಶ್ನಿಸಲು ಮತ್ತು ಕಾನೂನು ಜಾರಿಯಲ್ಲಿಡಲು ಶಕ್ತಿ ನೀಡುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು, ಪ್ರಕರಣಗಳು ಮತ್ತು ಪ್ರಸ್ತುತಪಡಿಸುವ ವಾದಗಳು ಜೀವನವನ್ನು ರೂಪಿಸಲಿವೆ ಎಂದರು.
ಕಾನೂನು ಪ್ರಪಂಚದಲ್ಲಿ ಮಾನವೀಯ ಅಂಶಗಳನ್ನು ಎಂದಿಗೂ ಮರೆಯಬಾರದು. ಪ್ರತಿ ಪ್ರಕರಣದ ಹಿಂದೆ ಪ್ರತಿ ಕಾನೂನು ಮತ್ತು ತತ್ವದ ಹಿಂದೆ ನೈಜ ಕತೆಗಳೊಂದಿಗೆ ನಿಜವಾದ ಜನರಿರುತ್ತಾರೆ. ನ್ಯಾಯ ವ್ಯವಸ್ಥೆಯಲ್ಲಿ ಶ್ರೀಸಾಮಾನ್ಯನ ನಂಬಿಕೆಯನ್ನು ದುರ್ಬಲಗೊಳಿಸದೆ, ಅದರ ಸಮಗ್ರತೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ ಎಂದು ಹೇಳಿದರು.
ಹಣದ ಹಿಂದೆ ಹೋಗಬೇಡಿ:ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಳ್ಳಿ. ನ್ಯಾಯಾಲಯಗಳಲ್ಲಿ ನಡೆಯುವ ಅದಾಲತ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತ್ತು ಬಡ ದಾವೆದಾರರಿಗೆ ಸೇವೆ ಸಲ್ಲಿಸಿ ಹಣದ ಹಿಂದೆ ಹೋಗಬೇಡಿ ಎಂದು ಸಲಹೆ ನೀಡಿದರು.
ಸಮಕಾಲೀನ ಸನ್ನಿವೇಶದಲ್ಲಿ ಕಾನೂನು ಪದವೀಧರರಿಗೆ ನ್ಯಾಯಾಂಗ ಅಧಿಕಾರಿಯಾಗಿ ಸೇವೆ ಸಲ್ಲಿಸುವುದರಿಂದ ಹಿಡಿದು ಸಾರ್ವಜನಿಕ ಅಭಿಯೋಜಕರಾಗುವ ತನಕ ಕಾನೂನು ಕ್ಷೇತ್ರದಲ್ಲಿ ವಿುಲ ಅವಕಾಶಗಳಿವೆ. ವ್ಯಾಜ್ಯಗಳನ್ನು ನಿಭಾಯಿಸುವ ವೈವಿಧ್ಯಮಯ ಮಾರ್ಗಗಳು ನಿಮಗಾಗಿ ಕಾಯುತ್ತಿವೆ ಎಂದರು.
ಜೀವನದಲ್ಲಿ ಬರುವ ಸವಾಲುಗಳು ಮತ್ತು ಅವಕಾಶಗಳನ್ನು ಮುಕ್ತವಾಗಿ ಸ್ವೀಕರಿಸಿ. ಇದರ ಜತೆಗೆ ನೈತಿಕತೆ ಮತ್ತು ಬದ್ಧತೆ ಅಳವಡಿಸಿಕೊಂಡರೆ, ಯಶಸ್ಸನ್ನು ಮಾತ್ರವಲ್ಲದೆ, ಕಾನೂನು ವ್ಯವಸ್ಥೆ ಮತ್ತು ಸಮಾಜದ ಸುಧಾರಣೆಗೆ ಕೊಡುಗೆ ನೀಡುವ ಅವಕಾಶ ಸಿಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ. ಎಂ.ಪಿ. ಶ್ಯಾಮ್ ಮಾತನಾಡಿ, ಜೀವನದ ಪ್ರತಿ ಹಂತದಲ್ಲಿಯೂ ಸವಾಲುಗಳಿರುತ್ತವೆ. ಅದನ್ನು ಮೆಟ್ಟಿನಿಲ್ಲುವ, ಸ್ವೀಕರಿಸುವ ಗುಣ ಅಳವಡಿಸಿಕೊಂಡರೆ ಜೀವನ ಸುಖಮಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಅಂಜಿನ ರೆಡ್ಡಿ ಕೆ.ಆರ್. ಸೇರಿ ಕಾಲೇಜಿನ ಗಣ್ಯರು ಉಪಸ್ಥಿತರಿದ್ದರು.
ಕಾನೂನು ಕ್ಷೇತ್ರವು ಸಾಮಾನ್ಯವಾಗಿ ಪುರುಷ ಪ್ರಾಬಲ್ಯವನ್ನು ಹೊಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರತಿಭಾನ್ವಿತ ಮಹಿಳೆಯರು ಕೂಡ ಪ್ರವೇಶಿಸುತ್ತಿರುವುದು ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಎಲ್ಲ ಪದವೀಧರ ಮಹಿಳೆಯರು ಅಡತಡೆಗಳನ್ನು ನಿವಾರಿಸಿ ತಮ್ಮದೇ ಛಾಪು ಮೂಡಿಸಲು ಸಿದ್ಧರಾಗಿ.– ಪ್ರಸನ್ನ ಬಿ. ವರಾಳೆ, ಹೈಕೊರ್ಟ್ ಮುಖ್ಯ ನ್ಯಾಯಮೂರ್ತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
