ಕಲಬುರಗಿ:ಗ್ರಾಮ ಪಂಚಾಯಿತಿ ಚುನಾವಣಾ ರಾಜಕೀಯ ಜಗಳದಲ್ಲಿ ನಾಲ್ಕು ವರ್ಷದ ಹೆಣ್ಣು ಮಗು ಬಲಿಯಾಗಿದೆ!
ಗ್ರಾಪಂ ಚುನಾವಣೆ ಲೋಕಲ್​ ಫೈಟ್​ ಎಂದೇ ಬಿಂಬಿತವಾಗಿದೆ. ಹಲವೆಡೆ ಜಿದ್ದಾಜಿದ್ದಿನ ಅಖಾಡವಾಗಿದೆ. ಕಳೆದ ಡಿಸೆಂಬರ್​ 30ರಂದು ಫಲಿತಾಂಶವೂ ಪ್ರಟವಾಗಿದೆ. ಅಂದು ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ಜೈನಾಪೂರದಲ್ಲಿ ರಾಜಕೀಯ ಸಂಘರ್ಷ ಸಂಭವಿಸಿತ್ತು.ಜೈನಾಪೂರದಲ್ಲಿನ ಸಂಘರ್ಷ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಜೇವರ್ಗಿ ಪೊಲೀಸರು ಈ ಸಂಬಂಧ 10 ಜನರನ್ನು ಬಂಧಿಸಿದ್ದರು. ಅದರಲ್ಲಿ ಸಂಗೀತ ಎಂಬಾಕೆಯ ಗಂಡನೂ ಸೇರಿದ್ದ.ಇದನ್ನೂ ಓದಿರಿಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಮಾರ್ಗಸೂಚಿ ಪ್ರಕಟ: ಇಲ್ಲಿದೆ ಪೂರ್ಣ ಪಟ್ಟಿ
ಮರುದಿನ ನನ್ನ ಮನೆ ಬಾಗಿಲಿಗೆ ಬಂದ ಪೊಲೀಸರು, ಸದ್ಯಕ್ಕೆ ನೀವಿಲ್ಲಿ ಇರೋದು ಬೇಡ. ತವರು ಮನೆಗೆ ಬಿಡ್ತೀವಿ ಬನ್ನಿ ಅತ್ತೆ-ನನ್ನ ಮಕ್ಕಳನ್ನೂ ಎಂದು ಕರೆದೊಯ್ದ ಪೊಲೀಸರು ಹಲ್ಲೆ ಮಾಡಿದರು. ನನ್ನ ಮಗಳು ಭಾರತಿ ಜ್ವರದಿಂದ ಬಳಲುತ್ತಿದ್ದಳು. ಆಸ್ಪತ್ರೆಗೆ ಹೋಗಬೇಕು ಎಂದು ಬೇಡಿದರೂ ಪೊಲೀಸರು ಬಿಡಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನೂ ನನ್ನೊಂದಿಗೆ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದರು. ತೀವ್ರ ಅಸ್ವಸ್ಥಗೊಂಡ ಮಗುವನ್ನು ಶುಕ್ರವಾರ ರಾತ್ರಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು(ಶನಿವಾರ) ಬೆಳಗ್ಗೆ ಭಾರತಿ ಮೃತಪಟ್ಟಿದ್ದಾಳೆ ಎಂದು ಮೃತ ಮಗುವಿನ ತಾಯಿ ಕಣ್ಣೀರಿಟ್ಟಿದ್ದಾರೆ.
ನನ್ನ ಮಗುವಿನ ಸಾವಿಗೇ ಜೇವರ್ಗಿ ಪೊಲೀಸ್​ ಠಾಣೆಯ ಪಿಎಸ್​ಐ ಕಾರಣ ಎಂದು ತಾಯಿ ಸಂಗೀತಾ ಆರೋಪಿಸಿದ್ದಾರೆ. ಪೊಲೀಸರು ಹಲ್ಲೆ ನಡೆಸುವಾಗ ಅಡ್ಡಬಂದ ಮಗುವಿಗೂ ಏಟು ಬಿದ್ದಿತ್ತು. ಅದರಿಂಲೇ ಮಗು ಸತ್ತಿದೆ ಎಂದು ಪಾಲಕರು ಗಂಭೀರ ಆರೋಪ ಮಾಡಿದ್ದಾರೆ. ಮೃತ ಮಗುವಿನ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.(ದಿಗ್ವಿಜಯ ನ್ಯೂಸ್​)
ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

ಕೋವಿಡ್​ ನಿಯಂತ್ರಿಸಲು ‘ಕೆಂಪಿರುವೆ’ಗಾಗಿ ಹುಡುಕಾಟ ಶುರುವಾಯ್ತು!

54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
