ಚಿಕ್ಕೋಡಿ:ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ತಮ್ಮ ಗ್ರಾಮದ ಜನರ ಹಿತವನ್ನು ಕಾಯಲು ತಮ್ಮ ಮನೆಯನ್ನೇ ಅಡವಿಟ್ಟು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮಾನವೀಯತೆ ಮೆರೆದು, ಇತರರಿಗೆ ಮಾದರಿಯಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಗವನಾಳ ಗ್ರಾಪಂ ಸದಸ್ಯ ಶ್ರೀನಿವಾಸ್​ ಅವರು ಮನೆ ಅಡವಿಟ್ಟು ಬಂದಂತಹ 30 ಸಾವಿರ ರೂ. ಹಣದಲ್ಲಿ ಬಡವರಿಗೆ ಉಚಿತವಾಗಿ ಆಹಾರ ಕಿಟ್ ವಿತರಿಸಿದ್ದಾರೆ.
ಇದನ್ನೂ ಓದಿ:ಕರೊನಾ ವೈರಸ್​ ಅಂತ್ಯ ಯಾವಾಗ? ಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷಿ ನುಡಿದ ಭವಿಷ್ಯವೇನು?
ಕರೊನಾ ಲಾಕ್​ಡೌನ್​ನಿಂದ ಇಡೀ ರಾಜ್ಯವೇ ಸ್ತಬ್ಧವಾಗಿದ್ದು, ಕೆಲಸವಿಲ್ಲದೇ ಯಾವುದೇ ಆದಾಯ ಹುಟ್ಟದಿರುವುದರಿಂದ ಅನೇಕ ಬಡಕುಟುಂಬಗಳು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಧಾವಿಸಿದ ಶ್ರೀನಿವಾಸ್​, ಬಡಕುಟುಂಬಗಳನ್ನು ಗುರುತಿಸಿ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.
ಶ್ರೀನಿವಾಸ್​ ಮಾನವೀಯ ಕಾರ್ಯಕ್ಕೆ ಇಡೀ ಗ್ರಾಮವೇ ಮೆಚ್ಚುಗೆ ಸೂಚಿಸಿದ್ದು, ಮತ ಹಾಕಿಸಿಕೊಂಡ ಕೆಲವರು ನಮಗೇಕೆ ಊರ ಉಸಾಬರಿ ಎಂದು ಸುಮ್ಮನ್ನೇ ಕೈಕಟ್ಟಿ ಕುಳಿತಿರುವ ಸಂದರ್ಭದಲ್ಲಿ ಶ್ರೀನಿವಾಸ್​ ಮಾದರಿಯಾಗಿದ್ದಾರೆ.
ಕರೊನಾ ವೈರಸ್​ ಜಾಗತಿಕವಾಗಿ ಮೃತ್ಯಕೂಪವನ್ನು ನಿರ್ಮಿಸಿದ್ದು, ಆರೋಗ್ಯ ಎಚ್ಚರಿಕೆಯ ನಡುವೆ ಮಾನವೀಯತೆಯನ್ನು ಪರೀಕ್ಷೆಗೆ ಒಡ್ಡಿದೆ. ಬಿಕ್ಕಟ್ಟಿನ ಸಮಯದಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುವ ಕುಟುಂಬಗಳಿಗೆ ಸಹಾಯಾಸ್ತ ಅಗತ್ಯವಾಗಿದ್ದು, ಮಾನವನ ಮಾನವೀಯ ಗುಣವನ್ನು ಕರೊನಾ ನಿಜಕ್ಕೂ ಪರೀಕ್ಷೆಗೆ ಒಡ್ಡಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಮುಸ್ಲಿಂ ಹುಡುಗಿಗೆ ಸೆಹ್ರಿ ಆಯೋಜಿಸಿದ ಹಿಂದು ಮಹಿಳೆ ಮೇಲೆ ಆರ್​ಎಸ್​ಎಸ್ ಹಲ್ಲೆ​ ನಡೆಸಿತೇ?: ಫ್ಯಾಕ್ಟ್​ಚೆಕ್​​ನಲ್ಲಿ ಸತ್ಯಾಂಶ ಬಹಿರಂಗ
https://www.facebook.com/VVani4U/videos/2898567226898699/
VIDEO| ವಾರ್ನರ್ ದಂಪತಿಯ ಬುಟ್ಟ ಬೊಮ್ಮ ಮಸ್ತ್​​​ ಸ್ಟೆಪ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fourteen =
Remember me
