ಬೆಂಗಳೂರು:ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ 2ನೇ ಹಂತದ ಮತದಾನ ಭಾನುವಾರ ನಡೆದಿದೆ. ಹಕ್ಕು ಚಲಾಯಿಸಿ ಹೋಗುವ ಮಾರ್ಗದಲ್ಲಿ ಹಾಗೂ ಮತದಾನ ಮಾಡಲೆಂದು ಬರುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಓರ್ವ ಅಭ್ಯರ್ಥಿಯೂ ಸೇರಿದ್ದಾನೆ.
ಅಭ್ಯರ್ಥಿ ಸಾವು:ಕಕ್ಕೇರಿಯ ಗ್ರಾಮದ 2ನೇ ವಾರ್ಡ್​ನಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ಚಂದ್ರಶೇಖರ ಬಸಪ್ಪ ಅಂಬೋಜಿ(64) ಅನಾರೋಗ್ಯದಿಂದ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ವಕೀಲರಾಗಿದ್ದ ಚಂದ್ರಶೇಖರ 3 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಿಷ್ಠಾದೇವಿ ಜೀಣೋದ್ಧಾರ ಟ್ರಸ್ಟ್ ಅಧ್ಯಕ್ಷರು, ಕಕ್ಕೇರಿ ಪಿಕೆಪಿಎಸ್ ಅಧ್ಯಕ್ಷರು ಹಾಗೂ ಗ್ರಾಪಂ ಸದಸ್ಯರಾಗಿ ಕೆಲಸ ಮಾಡಿದ್ದರು. ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷರಾಗಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಮತಗಟ್ಟೆಯಲ್ಲೇ ನಿವೃತ್ತ ಶಿಕ್ಷಕ ಸಾವು:ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮತ ಚಲಾಯಿಸಲು ಬಂದ ತೀರ್ಥಪುರದ ನಿವೃತ್ತ ಶಿಕ್ಷಕ ಪುಟ್ಟಮರುಳಾರಾದ್ಯ (76) ಮತಗಟ್ಟೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದರು. ಮತ ಚಲಾವಣೆಗೂ ಮುನ್ನವೇ ಈ ದುರಂತ ಸಂಭವಿಸಿದೆ. ಮತಗಟ್ಟೆ ಒಳಗೆ ತೆರಳುತ್ತಿದ್ದಾಗಲೇ ಕುಸಿದು ಬಿದ್ದರು.ಇದನ್ನೂ ಓದಿರಿಮತದಾನಕ್ಕೆ ಕರೆದೊಯ್ಯುತ್ತಿದ್ದ ಕಾರು ಪಲ್ಟಿ, 11 ಜನರ ಸ್ಥಿತಿ ಗಂಭೀರ
ವೋಟ್​ ಮಾಡಿ ಜೀವಬಿಟ್ಟ 90 ವರ್ಷದ ಅಜ್ಜಿ:ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಶಿವಪುರ ಗ್ರಾಮದ ಸರೋಜಮ್ಮ (90) ಮತದಾನ ಮಾಡಿದ ಬಳಿಕ ಸಾವನ್ನಪ್ಪಿದ್ದಾರೆ. ಮಗ ಮತ್ತು ಮೊಮ್ಮಗನ ಜೊತೆ ಮತದಾನಕ್ಕೆ ತೆರಳಿದ್ದ ಅಜ್ಜಿ ಹಕ್ಕು ಚಲಾಯಿಸಿ ವಾಪಾಸ್ ಬರುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದರು.
ಮತದಾನಕ್ಕೆ ಹೋಗಿದ್ದ ಮಹಿಳೆ ಸಾವು:ಚಿತ್ತಾಪುರ ಹೊರವಲಯದಲ್ಲಿ ಆಟೋ ಪಲ್ಟಿಯಾಗಿ ಯರಗಲ್ ಮೂಲದ ಚಿತ್ತಾಪುರ ಪಟ್ಟಣ ನಿವಾಸಿ ಸರಸ್ವತಿ ಕುಲಕರ್ಣಿ (40) ಮೃತಪಟ್ಟಿದ್ದಾರೆ. ಗ್ರಾಪಂ ಚುನಾವಣೆ ಹಿನ್ನೆಲೆ ಸ್ವಗ್ರಾಮ ಯರಗಲ್​ಗೆ ಕುಟುಂಬದವರ ಜತೆ ಹೋಗಿ ಮತದಾನದ ಹಕ್ಕು ಚಲಾಯಿಸಿ ಸರಸ್ವತಿ ಆಟೋದಲ್ಲಿ ಮರಳುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಚಾಲಕ ಮತ್ತು ಒಂದೇ ಕುಟುಂಬದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿತ್ತಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

ಹಳ್ಳಿ ಫೈಟ್​ನಲ್ಲಿ ಕುಡುಕರ ರಂಪಾಟ: ಡಿಸಿ ಕಾರಿನ ಮುಂದೆಯೇ ನಿದ್ರೆ… ಮತ ಚಲಾಯಿಸಿ ಬ್ಯಾಲೆಟ್ ಪೇಪರ್ ಹರಿದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + ten =
Remember me
