ಬೆಂಗಳೂರು:ರಾಜ್ಯದ ಗ್ರಾಮೀಣ ಭಾಗದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯ 2ನೇ ಹಂತದ ಮತದಾನ ಭಾನುವಾರ ನಡೆಯಲಿದೆ. ಒಟ್ಟಾರೆ 2,709 ಗ್ರಾ.ಪಂಗಳ 39,378 ಸ್ಥಾನಗಳಿಗೆ ಮತದಾನ ನಡೆಯಲಿದ್ದು ಒಟ್ಟು 1,05,431 ಅಭ್ಯರ್ಥಿಗಳ ಹಣೆಬರವನ್ನು ಈ ಚುನಾವಣೆ ನಿರ್ಣಯಿಸಲಿದೆ.
ಈ ನಡುವೆ, ಸುಗಮ ಮತದಾನ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ.ಬಿ.ಬಸವರಾಜು ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅಂತಿಮ ಸಿದ್ಧತೆಗಳ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಕೆಲವು ಅಗತ್ಯ ಸಲಹೆ-ಸೂಚನೆಗಳನ್ನೂ ನೀಡಿದ್ದಾರೆಂದು ತಿಳಿದು ಬಂದಿದೆ.
ಕಟ್ಟೆಚ್ಚರ, ಕಣ್ಗಾವಲು:ಮತಗಟ್ಟೆ ಅಧಿಕಾರಿಗಳು, ಮತದಾನಾಧಿಕಾರಿಗಳು, ಪೊಲೀಸರು ಸೇರಿದಂತೆ ಒಟ್ಟು 1,26,810 ಸಿಬ್ಬಂದಿ ಬಲವನ್ನು ಬಳಸಿಕೊಳ್ಳಲಾಗಿದೆ. ಸೂಕ್ಷ್ಮ, ಅತಿಸೂಕ್ಷ್ಮ ಗ್ರಾ.ಪಂ. ಹಾಗೂ ವಾರ್ಡ್​ಗಳಲ್ಲಿ ಬಿಗಿ ಕಣ್ಗಾವಲು ಇರಿಸುವ ವ್ಯವಸ್ಥೆಯಾಗಿದೆ.
30ರಂದು ಮತ ಎಣಿಕೆ:ಗ್ರಾಮ ಪಂಚಾಯಿತಿಗಳ ಎರಡೂ ಹಂತದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಡಿ.30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ನಡೆಯಲಿದೆ.
ಮೂರೂ ಪಕ್ಷಗಳ ಬಲ ಪ್ರದರ್ಶನಕ್ಕೆ ವೇದಿಕೆಚುನಾವಣೆ ಪಕ್ಷಾತೀತವಾಗಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಮಹತ್ವ ನೀಡಿರುವು ದರಿಂದ ಪ್ರತಿಷ್ಠೆ, ಜಿದ್ದಾಜಿದ್ದಿ ಹಾಗೂ ಬಲ ಪ್ರದರ್ಶನಕ್ಕೆ ಪಂಚಾಯಿತಿ ಫೈಟ್ ವೇದಿಕೆಯಾಗಿ ಮಾರ್ಪಟ್ಟಿದೆ. ಮುಖಂಡರಷ್ಟೇ ಅಲ್ಲ, ಕಾರ್ಯಕರ್ತರ ಚುನಾವಣೆಗೂ ಸಮಾನ ಆದ್ಯತೆಯ ಸಂದೇಶ ರವಾನಿಸಿ ತಳಮಟ್ಟದಲ್ಲಿ ಪಕ್ಷದ ಬುನಾದಿ ಭದ್ರಪಡಿಸಲು ರಾಜಕೀಯ ಪಕ್ಷಗಳು ಪ್ರಾಮುಖ್ಯತೆ ನೀಡಿವೆ.
ಈ ಬಾರಿ ಶೇ.80ರಷ್ಟು ಸ್ಥಾನಗಳನ್ನು ಗೆಲ್ಲಬೇಕೆಂಬ ಹುರುಪಿನೊಂದಿಗೆ ಆಡಳಿತಾರೂಢ ಬಿಜೆಪಿ ವ್ಯವಸ್ಥಿತ ಕಾರ್ಯತಂತ್ರ ರೂಪಿಸಿ, ಪ್ರತಿಯೊಬ್ಬ ಕಾರ್ಯಕರ್ತನನ್ನು ಚುನಾವಣಾ ಕಾರ್ಯದಲ್ಲಿ ತೊಡಗಿಸಿದೆ. ಮತದಾರರ ಮನಗೆಲ್ಲುವುದಕ್ಕೆ ಸಾಧ್ಯವಿರುವ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿದೆ. ಇತ್ತ ಪ್ರತಿಪಕ್ಷ ಕಾಂಗ್ರೆಸ್ ಮುಖಂಡರು ತಮ್ಮ ಪ್ರಭಾವ, ವರ್ಚಸ್ಸು ಒರೆಗಲ್ಲಿಗೆ ಹಚ್ಚಿದ್ದಾರೆ. ಅಲ್ಲದೆ, ಗ್ರಾಮೀಣಮಟ್ಟದಲ್ಲಿ ಚಾಚಿಕೊಂಡ ಬೇರುಗಳನ್ನು ಸಡಿಲವಾಗದಂತೆ ನೋಡಿಕೊಳ್ಳುವ ಹೊಣೆ ಹೊತ್ತು ಬಿಡುವಿಲ್ಲದೆ ಶ್ರಮಿಸಿದ್ದಾರೆ. ಜೆಡಿಎಸ್ ಮುಖಂಡರು ಸಹಿತ ಬೆಂಬಲಿಗರು, ಕಾರ್ಯಕರ್ತರ ಆಸಕ್ತಿಗೆ ಸ್ಪಂದಿಸಿ, ಸಂಘಟನಾ ಬಲ ಕುಗ್ಗದಂತೆ ಪ್ರಯತ್ನಿಸಿದ್ದಾರೆ.
ಪ್ರಭಾವ ಮತ್ತು ಹಿಡಿತವುಳ್ಳ ಗ್ರಾ.ಪಂ. ಕೈಬಿಟ್ಟು ಹೋಗದಂತೆ ಬೆವರಿಳಿಸಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೊರತುಪಡಿಸಿ ವೈಯಕ್ತಿಕ ವರ್ಚಸ್ಸು, ನಿಕಟ ಸಂಪರ್ಕ ನೆಚ್ಚಿಕೊಂಡವರು ಹಾಗೂ ಸಾರ್ವಜನಿಕ ಬದುಕಿನ ಹಂಬಲವುಳ್ಳವರು ಚುನಾವಣಾ ಅಖಾಡದಲ್ಲಿರುವುದು ಗಮನಾರ್ಹ. ಮೊದಲ ಹಂತದ ಚುನಾವಣೆ ಅಖಾಡದಲ್ಲಿದ್ದಂತೆ 2ನೇ ಹಂತದಲ್ಲೂ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದಾರೆ. ಹಣ, ಹೆಂಡದ ಹೊಳೆಯೇ ಹರಿದಿರುವ ಮಾಹಿತಿ ಬಹಿರಂಗವಾಗಿದೆ. ನಗರ ಪ್ರದೇಶಗಳಲ್ಲಿರುವ ಮತದಾರರನ್ನು ಶನಿವಾರವೇ ಹಳ್ಳಿಗೆ ಕರೆಸಿಕೊಳ್ಳಲು ಅಭ್ಯರ್ಥಿಗಳು ಬಸ್ ವ್ಯವಸ್ಥೆ ಮಾಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
