| ಗಂಗಾಧರ್ ಬೈರಾಪಟ್ಟಣ ರಾಮನಗರ
ಗೆದ್ದವನು ಸೋತ, ಸೋತವನು ಸತ್ತ… ಎನ್ನುವ ಮಾತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹುತೇಕ ಸಾಬೀತಾಗಿದೆ.
ಪಕ್ಷಗಳಿಗೆ ಚುನಾವಣೆ ಹೇಗೆ ಪ್ರತಿಷ್ಠೆಯ ಕಣವೋ ಅದಕ್ಕಿಂತ ಮಿಗಿಲು ಸ್ಥಳೀಯರ ನಡುವಿನ ಜಟಾಪಟಿ. ಈ ಹಿನ್ನೆಲೆಯಲ್ಲಿ ಚುನಾವಣೆ ವೆಚ್ಚದಾಯಕವಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಪ್ರತಿ ವಾರ್ಡ್ ನಲ್ಲಿ ಗೆಲುವು ಸಾಧಿಸಲು ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ನಿರ್ವಣವಾಗಿದೆ. ಗೆದ್ದ ಅಭ್ಯರ್ಥಿ ಗೆಲುವಿನ ನಗೆ ಬೀರಿದರೂ ಒಳಗೊಳಗೇ ಹಾಕಿದ ಬಂಡವಾಳ ಹೇಗೆ ವಾಪಸ್ ತೆಗೆಯಬೇಕು ಎನ್ನುವ ಲೆಕ್ಕಾಚಾರ ಹಾಕುವಂತೆ ಆಗಿದ್ದರೆ, ಮಾಡಿದ ಸಾಲ ತೀರಿಸಲು ಹೇಗೆಲ್ಲ ಹೆಣಗಾಡಬೇಕು ಎನ್ನುವ ಆತಂಕ ಸೋತ ಅಭ್ಯರ್ಥಿಗಳದ್ದಾಗಿದೆ.
ಪ್ರಾಮಾಣಿಕ ಪ್ರಯತ್ನ:ಕೆಲವರು ಚುನಾವಣೆಗಾಗಿ ಸಾಲ ಮಾಡಿಕೊಂಡು ಊರು ಬಿಡುವ ಹಂತಕ್ಕೆ ತಲುಪಿದ್ದರೆ, ಕೆಲವರು ಹಣವನ್ನೇ ನೀಡದೆ ಚುನಾವಣೆ ಎದುರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ನೀತಿಸಂಹಿತೆ ಬರೀ ಕಾಗದಕ್ಕೆ:ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿ ಆಗುವ ನೀತಿಸಂಹಿತೆ ನಿಯಮಗಳು ಗ್ರಾಪಂ ಚುನಾವಣೆಗೆ ಏಕೆ ಇಲ್ಲ ಎನ್ನುವ ದೊಡ್ಡ ಪ್ರಶ್ನೆ ಮೂಡಿದೆ. ಜಿಲ್ಲೆಯಲ್ಲಿ ರಾಜಾರೋಷವಾಗಿಯೇ ಮತದಾರರಿಗೆ ಹಣ ಮತ್ತು ಇತರ ಸಾಮಗ್ರಿ ಹಂಚಿಕೆ ಮಾಡಿದ್ದರೂ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದರೆ ತಪ್ಪಾಗಲಾರದು.
ಜಮೀನು ಅಡವಿಟ್ಟರು
ಗ್ರಾಮ ಪಂಚಾಯಿತಿ ಚುನಾವಣೆ ಸ್ಥಳೀಯ ಮುಖಂಡರ ಪ್ರತಿಷ್ಠೆಯ ಪ್ರಶ್ನೆ ಆಗಿರುವ ಕಾರಣ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಜಮೀನು ಮತ್ತು ನಿವೇಶನ ಅಡವಿಟ್ಟು ಚುನಾವಣೆ ಮಾಡಿದ್ದಾರೆ. ಪ್ರತಿ ವಾರ್ಡ್​ನಲ್ಲಿ ಕನಿಷ್ಠವೆಂದರೂ 10-15 ಲಕ್ಷ ರೂ.ವರೆಗೆ ಅಭ್ಯರ್ಥಿಗಳ ಸಿಂಡಿಕೇಟ್ ಖರ್ಚು ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದು ಮತಕ್ಕೆ ಕೆಲವು ಕಡೆಗಳಲ್ಲಿ 200 ರೂ.ನಿಂದ ಆರಂಭಗೊಂಡು, 5 ಸಾವಿರ ರೂ.ವರೆಗೂ ನೀಡಲಾಗಿದೆ. ಕೆಲವು ಕಡೆಗಳಲ್ಲಿ ಕುಕ್ಕರ್, ದೀಪ, ಬ್ಯಾಟರಿ ಸೇರಿ ಸಣ್ಣಪುಟ್ಟ ವಸ್ತುಗಳ ಚಿಹ್ನೆಗಳನ್ನು ಪಡೆದ ಅಭ್ಯರ್ಥಿಗಳು ಅವುಗಳನ್ನೇ ಮತದಾರರಿಗೆ ಹಂಚಿದ್ದೂ ಉಂಟು. ಇದರಿಂದಾಗಿ ಸ್ಪರ್ಧಿ ಅನಿವಾರ್ಯವಾಗಿ ಹೆಚ್ಚು ಖರ್ಚು ಮಾಡಲು ನಿವೇಶನ, ಜಮೀನುಗಳನ್ನು ಅಡವಿಟ್ಟಿದ್ದಾರೆ. ರಾಮನಗರ ತಾಲೂಕಿನ ವಾರ್ಡ್ ಒಂದರಲ್ಲಿ ಸ್ಪರ್ಧಿಯೊಬ್ಬರು ಸುಮಾರು 60 ಲಕ್ಷ ರೂ. ಖರ್ಚು ಮಾಡಿ ಗೆಲುವು ಸಾಧಿಸಿದ್ದಾರೆ ಎನ್ನುವ ಚರ್ಚೆಗಳೂ ನಡೆದಿವೆ.
ನರೇಗಾ ಆಕರ್ಷಣೆ
ಗ್ರಾಮ ಪಂಚಾಯಿತಿ ಚುನಾವಣೆ ಇಷ್ಟೊಂದು ವೆಚ್ಚದಾಯಕವಾಗಿರುವುದರ ಹಿಂದೆ ಒಂದೆಡೆ ಪ್ರತಿಷ್ಠೆ ಇದ್ದರೆ ಮತ್ತೊಂದೆಡೆ ಗ್ರಾಪಂನಲ್ಲಿ ನರೇಗಾ ಸೇರಿದಂತೆ ಇತರ ಮೂಲಗಳಿಂದ ದೊರೆಯುವ ಅನುದಾನಗಳೂ ಕಾರಣವಾಗಿವೆ. ನರೇಗಾದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಮಿತಿಯೇ ಇಲ್ಲದಿರುವುದರಿಂದ ಗ್ರಾಪಂಗಳಿಗೆ ಹೆಚ್ಚಿನ ಹಣ ಬರುತ್ತದೆ. ಇದರ ಜತೆಗೆ ವರ್ಗ 1 (ಸ್ಥಳೀಯ ಕರ ಸಂಗ್ರಹ), 15ನೇ ಹಣಕಾಸು ಯೋಜನೆಯಲ್ಲಿ ದೊರೆಯುವ ಅನುದಾನಗಳು ಗ್ರಾಪಂ ಮೇಲೆ ಕಣ್ಣಿಡುವಂತೆ ಮಾಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 18 =
Remember me
