ಚಾಮರಾಜನಗರ/ ಗಂಗಾವತಿ:2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಾಣೆಯ ಮತದಾನದ ವೇಳೆ ಕುಡುಕರ ಕಿತಾಪತಿಗೆ ಅಧಿಕಾರಿಗಳು ಹೈರಾಣಾದ ಪತ್ಯೇಕ ಘಟನೆ ಇಂದು(ಭಾನುವಾರ) ಸಂಭವಿಸಿದೆ.
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮತಚಲಾಯಿಸಿ ಮತಗಟ್ಟೆಯಿಂದ ಹೊರ ಬಂದು ರಸ್ತೆಯಲ್ಲಿ ಮಲಗಿ ರಂಪಾಟ ನಡೆಸುತ್ತಿದ್ದ. ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಚಾಮರಾಜನಗರ ಜಿಲ್ಲಾಧಿಕಾರಿ ಅವರ ವಾಹನದ ಮುಂದೆ ಮಲಗಿ ಮತ ಚಲಾಯಿಸಬೇಕು ಎಂದು ರಂಪಾಟ ನಡೆಸಿದ. ಕೂಡಲೇ ಪೊಲೀಸರು ಕುಡುಕನನ್ನು ಎಳೆದು ಮನೆಯೊಂದರ ಪಕ್ಕದಲ್ಲಿ ಮಲಗಿಸಿದರು. ಇಷ್ಟಕ್ಕೆ ಸುಮ್ಮನಾಗದ ಪಾನಮತ್ತ ವ್ಯಕ್ತಿ ರಂಪಾಟ ಹೆಚ್ಚು ಮಾಡಿದ. ಕೊನೆಗೆ ಗ್ರಾಮಸ್ಥರು ಆತನನ್ನು ಹೊತ್ತೊಯ್ದರು.ಇದನ್ನೂ ಓದಿರಿಮತದಾನಕ್ಕೆ ಕರೆದೊಯ್ಯುತ್ತಿದ್ದ ಕಾರು ಪಲ್ಟಿ, 11 ಜನರ ಸ್ಥಿತಿ ಗಂಭೀರ
ಮತಪತ್ರ ಹರಿದು ಹಾಕಿದ ಕುಡುಕರು: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಪಂ‌ ಚುನಾವಣೆ ವಾರ್ಡ್ ಸಂಖ್ಯೆ 1 ಮತ್ತು 3ರ ಮತಗಟ್ಟೆಯಲ್ಲಿ ಮದ್ಯ ಸೇವಿಸಿ ಆಗಮಿಸಿದ್ದ ಇಬ್ಬರು ಮತದಾರರು ಮತ ಚಲಾವಣೆಯ ನಂತರ‌ ಬ್ಯಾಲೆಟ್ ಪೇಪರ್ ಹರಿದು ಹಾಕಿದ್ದಾರೆ. ಇದರಿಂದ ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ತಹಸೀಲ್ದಾರ್ ಎಂ.ರೇಣುಕಾ, ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಭೇಟಿ ನೀಡಿ ಪರಿಶೀಲಿಸಿದರು. ತಿಮ್ಮಪ್ಪ ಮತ್ತು ನಂದಕುಮಾರ್ ಎಂಬುವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.
ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

ರಾಜಕೀಯ ತುಂಬಾ ಕಷ್ಟ… ಎಂದ ಅಣ್ಣಾಮಲೈ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + twelve =
Remember me
