ಗದಗ:ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.
ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ರೈತ ವಿಜಯಕುಮಾರ ಶರಣಪ್ಪ ಭಜಂತ್ರಿ (46) ಮೃತರು. ಇವರು ಹಮ್ಮಿಗಿ 3ನೇ ವಾರ್ಡ್​ನಿಂದ ಗ್ರಾಪಂ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆ ಪ್ರಚಾರ ನಡೆಸಿ ಕಾರ್ಯದಲ್ಲಿ ಬಿಜಿಯಾಗಿರಬೇಕಿದ್ದ ರೈತ ವಿಜಯಕುಮಾರ ಶರಣಪ್ಪ ಭಜಂತ್ರಿ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಸಾಲಬಾಧೆಯಿಂದ ಆತ್ಮಹತ್ಯೆ ಎಂದು ಮುಂಡರಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತರಿಗೆ ಕೆವಿಜಿ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್‌ನಲ್ಲಿ ಸುಮಾರು 8 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲಬಾಧೆಗೆ ಸಿಲುಕಿದ್ದ ಅವರು ಜಿಗುಪ್ಸೆಗೊಂಡಿದ್ದರು ಎನ್ನಲಾಗಿದೆ.
ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದವ ಪಂಚಾಯಿತಿ ಆವರಣದಲ್ಲೇ ಸಾವು!

ಅಕ್ರಮ ಸಂಬಂಧ ಮುರಿದುಕೊಳ್ಳಲು ಒಲ್ಲೆ… ಎನ್ನುತ್ತ ಬಂದಾಕೆ ಪ್ರಿಯಕರನ ಜತೆಗೂಡಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ಳು

ಸ್ನೇಹಿತನ ಮನೆಯಲ್ಲೇ ಸಿಐಡಿ ಡಿವೈಎಸ್​ಪಿ ನೇಣಿಗೆ ಶರಣಾಗಿದ್ದೇಕೆ? ನಿನ್ನೆ ರಾತ್ರಿ ನಡೆದಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 3 =
Remember me
