ಚಾಮರಾಜನಗರ:ಹಳ್ಳಿ ರಾಜಕಾರಣಕ್ಕೂ ರೆಸಾರ್ಟ್​ ಪಾಲಿಟಿಕ್ಸ್​ ಕಾಲಿಟ್ಟಿದೆ. ಇದೀಗ ಗ್ರಾಮ ಪಂಚಾಯಿತಿ ಅಧಿಕಾರ ಹಂಚಿಕೆಗೂ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ನಡೆದಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಣ್ಣೂರು ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಸದಸ್ಯರ ನಡುವೆ ಒಪ್ಪಂದ ಆಗಿದೆ. ನುಡಿದಂತೆ ನಡೆಯುತ್ತೇವೆ. ನುಡಿದಂತೆ ನಡೆಯದಿದ್ದರೆ ಮನೆ ಹಾಳಾಗುತ್ತೆ ಎಂದು ಧರ್ಮಸ್ಥಳದಲ್ಲಿ ಕರ್ಪೂರ ಹಚ್ಚಿ ಆಣೆ-ಪ್ರಮಾಣ ಮಾಡಿರುವ ದೃಶ್ಯ ವೈರಲ್​ ಆಗಿದೆ.ಇದನ್ನೂ ಓದಿರಿಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕುಮಾರಸ್ವಾಮಿ!
ಗ್ರಾಪಂ ಅಧ್ಯಕ್ಷ ಸ್ಥಾನ ಮೊದಲ ಅವಧಿ 10 ತಿಂಗಳು ಜೆಡಿಎಸ್ ಬೆಂಬಲಿತರಿಗೆ, ಎರಡನೇ ಅವಧಿ ಬಿಜೆಪಿ ಬೆಂಬಲಿತರಿಗೆ ನೀಡಲು ಒಪ್ಪಂದ ಆಗಿದೆ. ಅದರಂತೆ ಉಪಾಧ್ಯಕ್ಷ ಸ್ಥಾನ ಮೊದಲ 10 ತಿಂಗಳು ಬಿಜೆಪಿ ಬೆಂಬಲಿತರಿಗೆ, ಎರಡನೇ ಅವಧಿಗೆ ಜೆಡಿಎಸ್ ಬೆಂಬಲಿತರಿಗೆಂದು ಒಪ್ಪಂದ ಆಗಿದೆ. ಒಟ್ಟು 15 ಸ್ಥಾನದಲ್ಲಿ ಬಿಜೆಪಿ ಬೆಂಬಲಿತ 5, ಜೆಡಿಎಸ್ ಬೆಂಬಲಿತ 5, ಕಾಂಗ್ರೆಸ್ ಬೆಂಬಲಿತ 5 ಸದಸ್ಯರಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ 20:20 ಸರ್ಕಾರದ ಅವಧಿಯಲ್ಲಿ ಉಂಟಾಗಿದ್ದ ಘಟನೆ ಮರುಕಳಿಸಬಾರದೆಂದು ಇಲ್ಲಿನ ಗ್ರಾಪಂ ಸದಸ್ಯರು ಶ್ರೀ ಮಂಜುನಾಥ ಸ್ವಾಮಿಯ ಮೊರೆ ಹೋಗಿದ್ದಾರೆ.
ಪತ್ನಿಯ ಕೊಲೆಗೆ ಕೆಎಎಸ್ ಅಧಿಕಾರಿ ಸಂಚು! ಕಾರಣ ಕೇಳಿದ್ರೆ ಹೌಹಾರುತ್ತೀರಿ…

ಧಾರವಾಡದಲ್ಲಿ ಅಪಘಾತ: ಸಾವಲ್ಲೂ ಒಂದಾದ ಬಾಲ್ಯ ಸ್ನೇಹಿತೆಯರು, ಅವರ ಮಕ್ಕಳೇ ಹೊರತಂದ ಈ ವಿಡಿಯೋ ಮನಕಲಕುತ್ತೆ!

ನನ್ನ ಮನೆಗೆ ನುಗ್ಗಿ ಬಲವಂತವಾಗಿ ಮಗಳಿಗೆ ತಾಳಿ ಕಟ್ಟೇಬಿಟ್ಟ: ಪ್ಲೀಸ್​.. ನನ್ನ ಮಗಳನ್ನು ಕಾಪಾಡಿ…

ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eleven =
Remember me
