| ಶಿವಾನಂದ ತಗಡೂರುಬೆಂಗಳೂರುಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗುವ ಮುನ್ನವೇ ಗ್ರಾಪಂನಲ್ಲಿ ಅಧಿಕಾರ ಸ್ಥಾಪಿಸಲು ಕಸರತ್ತು ಆರಂಭಿಸಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸದಸ್ಯರ ಖರೀದಿ ಆರಂಭಿಸಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಗ್ರಾಮಗಳಲ್ಲಿ ವಿಜಯೋತ್ಸವ ಆಚರಣೆ ಮಾಡಿದ ಸದಸ್ಯರಿಗೆ ನೆಮ್ಮದಿಯಾಗಿ ಮನೆಯಲ್ಲಿ ಇರಲು ರಾಜಕೀಯ ಬಿಡುತ್ತಿಲ್ಲ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸದಸ್ಯರನ್ನು ಕರೆದುಕೊಂಡು ರೆಸಾರ್ಟ್, ಹೋಂ ಸ್ಟೇಗಳತ್ತ ಮುಖ ಮಾಡಿದ್ದಾರೆ. ಇನ್ನು ಕೆಲವರು ಪ್ರವಾಸದ ನೆಪದಲ್ಲಿ ತೆರಳಿದ್ದಾರೆ. ಕೆಲವು ಕಡೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಒಂದೇ ಪಕ್ಷದ ಬೆಂಬಲಿತರು ಆಯ್ಕೆಯಾಗಿದ್ದಾರೆ. ಆದರೆ ಬಹುಮತ ಇಲ್ಲದ ಗ್ರಾಪಂಗಳಲ್ಲಿ ಅಧಿಕಾರ ಹಿಡಿಯಲು ರಾಜಕೀಯ ತಂತ್ರ ನಡೆಯುತ್ತಿದ್ದು, ಕೆಲ ಸದಸ್ಯರಿಗೆ ಆಸೆ-ಆಮೀಷ ಒಡ್ಡಿ ಕರೆದುಕೊಂಡು ಹೋಗಿ ಗುಪ್ತವಾದ ಸ್ಥಳಗಳಲ್ಲಿ ಇಡಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳು ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರ ಕಣ್ಗಾವಲಿನಲ್ಲಿಯೇ ನಡೆಯುತ್ತಿರುವುದು ವಿಶೇಷ.
ಮೀಸಲಾತಿ ಆತಂಕ: ಈಗಾಗಲೇ ತಂಡವಾಗಿ ಟೂರ್ ಬಂದಿರುವ ಗ್ರಾಪಂ ಸದಸ್ಯರಿಗೂ ಮೀಸಲಾತಿ ಯಾವುದಕ್ಕೆ ನಿಗದಿಯಾಗು ತ್ತದೆಯೋ ಎನ್ನುವ ಆತಂಕ ಕಾಡುತ್ತಿದೆ. ಮೀಸಲಾತಿ ಪ್ರಕಟವಾದ ಮೇಲೆ ಈ ತಂಡದೊಳಗೆ ಯಾರನ್ನಾದರೂ ಒಬ್ಬರನ್ನು ಅಧ್ಯಕ್ಷರ ನ್ನಾಗಿ ಮಾಡಲು ಪರಸ್ಪರ ಭರವಸೆ ನೀಡುವ ಕೆಲಸವೂ ನಡೆದಿದೆ.
ಅಡ್ವಾನ್ಸ್ ಬುಕಿಂಗ್:ಬಹುಮತಕ್ಕೆ ಸದಸ್ಯರು ಕಡಿಮೆ ಇರುವ ಗ್ರಾಪಂಗಳಲ್ಲಿ ಭರ್ಜರಿ ವ್ಯಾಪಾರವೂ ನಡೆದಿದೆ. ನಮಗೆ ಮತ ಹಾಕಬೇಕು ಎಂದು ಈಗಲೇ ನಿಗದಿ ಮಾಡಿ ಅವರಿಗೆ ಅಡ್ವಾನ್ಸ್ ಕೊಡುವ ಮತ್ತು ಕೆಲವರಿಗೆ ಬೇರೆ ಆಸೆ ಆಮಿಷ ತೋರಿಸುವ ಕೆಲಸವೂ ನಡೆಯುತ್ತಿದೆ. ಒಬ್ಬೊಬ್ಬ ಗ್ರಾಪಂ ಸದಸ್ಯರ ಸೆಳೆಯಲು 5 ಲಕ್ಷದಿಂದ- 25 ಲಕ್ಷ ರೂ. ತನಕವೂ ವ್ಯವಹಾರ ಕುದುರಿಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 17 =
Remember me
