| ಸಿ.ಕೆ.ಮಹೇಂದ್ರಮೈಸೂರುಗ್ರಾಮ ಪಂಚಾಯಿತಿ ಸದಸ್ಯರಿಗೆ ತರಾತುರಿಯಲ್ಲಿ ತರಬೇತಿ ನೀಡಲು ಮುಂದಾಗಿರುವ ಸರ್ಕಾರ, ಪ್ರಾಯೋಗಿಕವಾಗಿ ಎದುರಾಗಬಹುದಾದ ಸಮಸ್ಯೆಗಳತ್ತ ಗಮನಹರಿಸಿಲ್ಲ. ಜತೆಗೆ ಸದಸ್ಯರ ತರಬೇತಿಗೆ ಇದು ಸಕಾಲವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಡಿಸೆಂಬರ್ 30ಕ್ಕೆ ಗ್ರಾಪಂ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮೂರು ದಿನಗಳ ಹಿಂದಷ್ಟೇ ಅಧ್ಯಕ್ಷ, ಉಪಾಧ್ಯಕ್ಷರ ವರ್ಗವಾರು ಮತ್ತು ತಾಲೂಕುವಾರು ಮೀಸಲಾತಿ ಪ್ರಮಾಣ ನಿಗದಿಯಾಗಿದೆ. ಸದ್ಯದಲ್ಲೇ ಪಂಚಾಯಿತಿವಾರು ಮೀಸಲು ಪಟ್ಟಿ ಹೊರಬೀಳಲಿದೆ. ಆಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಕಾಂಕ್ಷಿತರು ಸದಸ್ಯರನ್ನು ಓಲೈಸುವ ಕೆಲಸಕ್ಕೆ ಮುಂದಾಗಲಿದ್ದಾರೆ. ಇದೇ ಸಂದರ್ಭಕ್ಕೆ ಎಲ್ಲ ಸದಸ್ಯರಿಗೆ ತರಬೇತಿ ನೀಡುವ ಪ್ರಯತ್ನ ನಡೆಯುತ್ತಿದೆ. ‘ಯಾತ್ರೆ’ ಮೂಡ್​ನಲ್ಲಿರುವ ಸದಸ್ಯರು ಎಷ್ಟರಮಟ್ಟಿಗೆ ಈ ತರಬೇತಿ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ ಎಂಬುದು ಈಗ ಎದ್ದಿರುವ ಪ್ರಶ್ನೆ.
ಮೈಸೂರಿನಲ್ಲಿರುವ ಅಬ್ದುಲ್ ನಜೀರ್​ಬಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ತರಬೇತಿ ಸಂಸ್ಥೆ (ಎಸ್​ಐಆರ್​ಡಿ) ಪ್ರತಿ ಬಾರಿಯಂತೆ ಈಗಲೂ ಹೊಸದಾಗಿ ಆಯ್ಕೆಯಾಗಿರುವ ಗ್ರಾಪಂ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಿದೆ. ಜ.18ರಿಂದ ಮಾ.26ರವರೆಗೆ ತರಬೇತಿ ನಡೆಸಲು ತಯಾರಿ ಮಾಡಿಕೊಳ್ಳಲಾಗಿದ್ದು, ರಾಜ್ಯದ 176 ತಾಲೂಕು ಕೇಂದ್ರಗಳಲ್ಲಿ 5,762 ಗ್ರಾಪಂಗಳ 92,121 ಸದಸ್ಯರು ಈ ತರಬೇತಿಯಲ್ಲಿ ಭಾಗಿಯಾಗಬೇಕಾಗಿದೆ. ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಸರಾಸರಿ ತಲಾ 40ರ ಗುಂಪಿಗೆ ತರಬೇತಿ ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಸ್​ಐಆರ್​ಡಿಯ 248 ಹಾಗೂ ಹೊರಗಿನ 850 ಸಂಪನ್ಮೂಲ ವ್ಯಕ್ತಿಗಳಿಗೆ ಈಗಾಗಲೇ ಎರಡು ಸುತ್ತಿನ ತರಬೇತಿ ನೀಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ 30 ಕೋಟಿ ರೂ. ಅನುದಾನನೀಡಲಿದೆ. ತರಬೇತಿ ನೀಡುವ ಉದ್ದೇಶ ಸರಿಯಾಗಿದೆಯಾದರೂ ಅದನ್ನು ಜಾರಿಗೊಳಿಸಲು ಮುಂದಾಗಿರುವ ಸಮಯ ಸೂಕ್ತವಾಗಿಲ್ಲ, 3 ದಿನಗಳ ಶಿಬಿರವನ್ನು 5 ದಿನಗಳಿಗೆ ವಿಸ್ತರಣೆ ಮಾಡಿರುವುದು ಅಪ್ರಾಯೋಗಿಕ ಕ್ರಮ ಎಂಬುದು ಎಲ್ಲ ಕಡೆಗಳಲ್ಲೂ ಎದ್ದಿರುವ ಕೂಗು.
ಪರಿಹಾರವೇನು?:ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳೆಲ್ಲ ಮುಗಿದ ಬಳಿಕ, ಮೂರು ತಿಂಗಳು ತಡವಾಗಿ ತರಬೇತಿ ನಡೆದರೆ ಏನೂ ಪ್ರಮಾದವಾಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಮಂಡನೆ ನಂತರ (ಮೇ ತಿಂಗಳಲ್ಲಿ) ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದು. 5 ದಿನಗಳ ಕಾಲ ತರಬೇತಿ ಪಡೆಯುವಷ್ಟು ಮಾನಸಿಕ ಸಿದ್ಧತೆ ಪಂಚಾಯಿತಿ ಸದಸ್ಯರಲ್ಲಿ ಇರುವುದಿಲ್ಲ. ಹಾಗಾಗಿ ಅದನ್ನು ಮೂರು ದಿನಗಳಿಗೆ ಇಳಿಸುವುದು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.
ಆರಂಭದಲ್ಲೇ ತರಬೇತಿ ಪಡೆಯುವುದರಿಂದ ಪರಿಣಾಮಕಾರಿ ಆಡಳಿತ ನಡೆಸಲು ಅನುಕೂಲವಾಗಲಿದೆ. ಐದು ದಿನಗಳ ಕಾಲ ಪರಿಣಾಮಕಾರಿ ತರಬೇತಿ ನೀಡಲಾಗುವುದು. ತರಬೇತುದಾರರಿಗೆ ತಜ್ಞರಿಂದ ತರಬೇತಿ ಕೊಡಿಸಲಾಗಿದ್ದು, ಗ್ರಾಪಂ ಸದಸ್ಯರಿಗೆ ಇದು ಒಳ್ಳೆಯ ತರಬೇತಿಯಾಗಲಿದೆ.| ಶಿಲ್ಪಾನಾಗ್ನಿರ್ದೇಶಕಿ,ಎಸ್​ಐಆರ್​ಡಿ, ಮೈಸೂರು
ಪ್ರಾಯೋಗಿಕವಾಗಿ ಸಾಧುವಲ್ಲದ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಯಾಗುವ ಸಮಯದಲ್ಲಿ ಯಾವ ಸದಸ್ಯರೂ ತರಬೇತಿಗೆ ಬರುವುದಿಲ್ಲ. ಅಲ್ಲದೆ, 5 ದಿನಗಳ ಕಾಲ ತರಬೇತಿ ನೀಡುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಮರುಚಿಂತನೆ ಮಾಡುವುದು ಅತ್ಯಗತ್ಯ.| ವಿಲ್ಪ್ರೆಡ್ ಡಿಸೋಜಾಪಂಚಾಯಿತಿ ತಜ್ಞರು
ಸಮಜಾಯಿಷಿ:ಆಡಳಿತ ಶುರುವಾಗುವುದಕ್ಕೆ ಮುಂಚಿತವಾಗಿ ತರಬೇತಿ ಪಡೆದರೆ ಆರಂಭದಿಂದಲೇ ಅನುಭವ ಸಿಗುತ್ತದೆ. ಮಾರ್ಚ್ ಅಂತ್ಯ ಅಥವಾ ಏಪ್ರಿಲ್​ನಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯುವುದರಿಂದ ಗ್ರಾಪಂ ಸದಸ್ಯರಿಗೆ ತರಬೇತಿ ನೀಡುವುದು ತುಂಬಾ ತಡವಾಗಲಿದೆ. ಮೂರು ದಿನಗಳ ತರಬೇತಿಯಲ್ಲಿ ಏನನ್ನೂ ಹೇಳಿದಂತೆ ಆಗುವುದಿಲ್ಲ. ಹಾಗಾಗಿ 5 ದಿನಗಳಲ್ಲಿ ಎಲ್ಲವನ್ನೂ ಸಮಗ್ರವಾಗಿ ತಿಳಿಸಲು ಸಾಧ್ಯವಾಗುತ್ತದೆ. ರಾತ್ರಿ ವಾಸ್ತವ್ಯಕ್ಕೆ ಸಮಸ್ಯೆ ಇಲ್ಲವಾದರೂ ಕರೊನಾ ಕಾರಣಕ್ಕಾಗಿ ಅಂತಹ ಪ್ರಯತ್ನ ಬೇಡ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲರಿಗೂ ವಾಹನ ವ್ಯವಸ್ಥೆ ಮಾಡಲಾಗಿದೆ. ತರಬೇತಿಗಾಗಿ ಹಾಜರಾದ ಪ್ರತಿ ಸದಸ್ಯರಿಗೆ 800 ರೂ.ಗಳಂತೆ ಕೇಂದ್ರ ಸರ್ಕಾರ ಒಟ್ಟು 30 ಕೋಟಿ ರೂ. ಅನ್ನು ಈ ಕಾರ್ಯಕ್ರಮಕ್ಕಾಗಿ ನೀಡಲಿದೆ. ಸದಸ್ಯರ ಹಾಜರಾತಿ ಸಂಖ್ಯೆ ಕಡಿಮೆಯಾದಷ್ಟು ಅನುದಾನ ಕಡಿಮೆಯಾಗುತ್ತದೆ. ಪೂರ್ಣ ಹಣ ಪಡೆಯಲು ಹಾಜರಾತಿಯನ್ನು ಸೃಷ್ಟಿಸಬೇಕಾದ ಅಪಾಯಕಾರಿ ಪ್ರಕ್ರಿಯೆ ನಡೆದರೂ ಆಚ್ಚರಿಪಡಬೇಕಾಗಿಲ್ಲ. ಸರ್ಕಾರವೇ ಇಂತಹದ್ದೊಂದು ಅಕ್ರಮ ಮಾರ್ಗಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಪ್ರಶ್ನೆಗಳೇನು?
ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 18 =
Remember me
