ಡಿಪಿಎನ್ ಶ್ರೇಷ್ಠಿ
ಚಿತ್ರದುರ್ಗ:ಅಕ್ಟೋಬರ್‌ನಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಬಹುದೆಂಬ ಅಭಿಪ್ರಾಯ ಹೊರಬಿದ್ದಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿದೆ. ಈ ಚುನಾವಣೆ ಪಕ್ಷಾಧಾರಿತ ಅಲ್ಲದಿದ್ದರೂ ಪಕ್ಷ ಸಂಘಟನೆಯಲ್ಲಿ ಬಹು ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ರಾಜಕೀಯ ಪಕ್ಷಗಳು ಚುನಾವಣೆಯನ್ನು ಎದುರು ನೋಡುತ್ತಿದ್ದವು. ಕೋವಿಡ್ ಮಹಾಮಾರಿ ಕಾಟ ಇಲ್ಲದಿದ್ದರೆ ಈ ಹೊತ್ತಿಗೆ ಚುನಾವಣೆ ಪೂರ್ಣಗೊಳ್ಳುವ ಸಾಧ್ಯತೆ ಇತ್ತು. ಆದರೆ, ಜಗತ್ತಿನಾದ್ಯಂತ ಆವರಿಸಿದ ಸೋಂಕಿನ ಎಫೆಕ್ಟ್ ಅದಕ್ಕೆ ತಡೆಯೊಡ್ಡಿತ್ತು.
ಮತಪಟ್ಟಿ ಸಿದ್ಧತೆ, ಮೀಸಲು ನಿಗದಿ ಇತ್ಯಾದಿ ಚುನಾವಣಾ ಪೂರ್ವದ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ. ಅಕ್ಟೋಬರ್- ನವೆಂಬರ್‌ನಲ್ಲಿ ಚುನಾವಣೆ ನಡೆಯಬಹುದು. ಚಿತ್ರದುರ್ಗದಲ್ಲಿ 189 ಗ್ರಾಪಂಗಳ ಪೈಕಿ 186 ಗ್ರಾಪಂಗಳಿಗೆ ಆಡಳಿತಾಧಿಕಾರಿಗಳ ನೇಮಕವಾಗಿದೆ. ಮೈಸೂರಿನ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆನ್‌ಲೈನ್ ಮೂಲಕ ಆಡಳಿತಾಧಿಕಾರಿಗಳಿಗೆ ಗ್ರಾಪಂ ಆಡಳಿತ, ಕಾಯ್ದೆ ಕಾನೂನು ಕುರಿತು 2 ದಿನಗಳ ಕಾಲ ಆನ್‌ಲೈನ್ ಮೂಲಕ 15 ಸೆಷನ್‌ಗಳಲ್ಲಿ ತರಬೇತಿ ಕೊಡಿಸಲಾಗಿದೆ.ಡಾ.ಎಸ್.ಆರ್.ರಂಗಸ್ವಾಮಿ,ಉಪಕಾರ‌್ಯದರ್ಶಿ, ಜಿಪಂ, ಚಿತ್ರದುರ್ಗ.
ತಾತ್ಕಾಲಿಕವಾಗಿ ಚುನಾವಣೆ ಮುಂದೂಡಿದ ಸರ್ಕಾರದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜೂ.24 ರಂದು ನಡೆಸಿದ್ದ ಉನ್ನತಾಧಿಕಾರಿಗಳ ಸಭೆ ನಡೆದಿದ್ದು, ಪರಿಸ್ಥಿತಿ ಅವಲೋಕಿಸಿ 2020 ಅಕ್ಟೋಬರ್‌ನಲ್ಲಿ ಚುನಾವಣೆ ನಡೆಸಬಹುದೆಂದು ಆಯೋಗ ಹೈಕೋರ್ಟ್ ಗಮನಕ್ಕೆ ತಂದಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಮತಪಟ್ಟಿ ಸಿದ್ಧತೆಗೆ ವೇಳಾಪಟ್ಟಿ ನಿಗದಿಪಡಿಸಿದೆ. ಈ ಮುನ್ನ ಮತಪಟ್ಟಿ ತಯಾರಿಯನ್ನು ಕಳೆದ ಮಾರ್ಚ್ 26 ರಂದು ಸ್ಥಗಿತಗೊಳಿಸಲಾಗಿತ್ತು. ಈಗ ಜು.13 ರಿಂದ 18 ರವರೆಗೆ ಗ್ರಾಪಂ ಕ್ಷೇತ್ರ ವ್ಯಾಪ್ತಿ ಮತದಾರರ ಗುರುತಿಸುವಿಕೆ ಸೇರಿದಂತೆ ಮತಪಟ್ಟಿ ತಯಾರಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ಆಗಸ್ಟ್ 31 ಕ್ಕೆ ಅಂತಿಮ ಪಟ್ಟಿ ಪ್ರಕಟಿಸಲು ಆಯೋಗ ನಿರ್ದೇಶಿಸಿದೆ.
ಪಾಸಿಟಿವ್ ಬಂದರೆ?:ಮತಪಟ್ಟಿ ತಯಾರಿಕೆ ಸಿದ್ಧತೆ ಆರಂಭದ ಜತೆ ಚುನಾವಣೆ ಹೇಗೆ ನಡೆಸಬೇಕೆಂಬ ಕುರಿತಂತೆ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಚರ್ಚಿಸಿದ್ದಾರೆ. ಬೂತ್‌ಗಳ ಸಂಖ್ಯೆಯಲ್ಲಿ ಹೆಚ್ಚಳ, ನಾಮಪತ್ರ ಸಲ್ಲಿಕೆಗೆ ಈಗಿರುವ ಅಭ್ಯರ್ಥಿ ಜತೆ ಐವರು ಜನರ ಹಾಜರಿ ಸಂಖ್ಯೆಯನ್ನು ಕಡಿತಗೊಳಿಸಬೇಕೆ? ಮೆರವಣಿಗೆ, ಪ್ರಚಾರ ಅನುಮತಿ ಹೇಗೆ? ಒಂದು ವೇಳೆ ಅಭ್ಯರ್ಥಿಗೆ ಪಾಸಿಟಿವ್ ಬಂದರೆ ಏನು ಮಾಡಬೇಕು ಎಂಬಿತ್ಯಾದಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ಸ್‌ (ಎಸ್‌ಒಪಿ) ಕುರಿತಂತೆ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ.
2020 ಜೂನ್‌ನಲ್ಲಿ ಅವಧಿ ಪೂರ್ಣಗೊಳಿಸಿರುವ ರಾಜ್ಯದ 6068 ಗ್ರಾಪಂಗಳ ಪೈಕಿ ಬಹುತೇಕ ಗ್ರಾಪಂಗಳಿಗೆ ಈಗಾಗಲೇ ಆಡಳಿತಾಧಿಕಾರಿಗಳ ನೇಮಕವಾಗಿದೆ. ತಲಾ 2 ಗ್ರಾಪಂಗಳಿಗೆ ಒಬ್ಬ ಆಡಳಿತಾಧಿಕಾರಿ ನೇಮಕವಾಗಿದ್ದಾರೆ. ರಾಜ್ಯ ಚುನಾವಣಾ ಆಯೋಗ ಈ ಮೊದಲು ಕಳೆದ ಮೇನಲ್ಲಿ ಚುನಾವಣೆ ನಡೆಸಲು ಸಜ್ಜಾಗಿತ್ತು.—-
31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಿ- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 2 =
Remember me
