ಬೆಂಗಳೂರು:ಕರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ವರ್ಷಾಂತ್ಯಕ್ಕೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಕರೊನಾ ಹಾವಳಿ ಕಾಲದಲ್ಲಿ ನಡೆಯುವ ಚುನಾವಣೆಗಳಿಗಾಗಿ ಕೇಂದ್ರ ಚುನಾವಣಾ ಆಯೋಗ ಹೊಸ ನೀತಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ 6-7 ತಿಂಗಳಿಂದ ಚುನಾವಣೆ ನಡೆಯದೆ ಆಡಳಿತಾಧಿಕಾರಿಗಳ ಕೈಗೊಂಬೆಯಾಗಿರುವ ಗ್ರಾಪಂಗಳು ಕೆಲವೇ ತಿಂಗಳಲ್ಲಿ ಜನಪ್ರತಿನಿಧಿಗಳ ಕೈ ಸೇರಲಿವೆ. ಕರೊನಾ ತುಸು ಹತೋಟಿಗೆ ಬಂದರೂ ಸಾಕು ಡಿಸೆಂಬರ್​ನಲ್ಲಿ ಆಯೋಗ ಚುನಾವಣೆ ನಡೆಸುವುದು ಬಹುತೇಕ ಖಚಿತವಾಗಿದೆ.
ಮಾರ್ಗಸೂಚಿ ಏನು?
* ಮನೆ ಮನೆ ಪ್ರಚಾರ ಸಂದರ್ಭ ಐವರಿಗೆ ಮಾತ್ರ ಅವಕಾಶ
* ಸಾರ್ವಜನಿಕ ಸಭೆಗೆ ಕೇಂದ್ರ ಗೃಹ ಸಚಿವಾಲಯ ನಿಯಮಾವಳಿಗಳ ಪಾಲನೆ
* ಮತದಾನ ಕೇಂದ್ರದಲ್ಲಿ ಸಾಮಾಜಿಕ ಅಂತರ
* ಕೈಗವಸುಗಳನ್ನು ಧರಿಸಿ ಮತ ಚಲಾವಣೆ
* ಮತದಾರ ಮಾಸ್ಕ್ ಧರಿಸುವುದ ಕಡ್ಡಾಯ
ವ್ಯವಸ್ಥಿತ ಸಿದ್ಧತೆಮತದಾರರ ಪಟ್ಟಿ, ಮತಗಟ್ಟೆ, ಮತಗಟ್ಟೆ ಸಿಬ್ಬಂದಿಗೆ ಚುನಾವಣಾ ತರಬೇತಿ, ಮೀಸಲಾತಿ ಪಟ್ಟಿ ಸೇರಿ ಸಕಲ ಸಿದ್ಧತೆಗಳನ್ನೂ ಚುನಾವಣಾ ಆಯೋಗ ಬಹು ಹಿಂದೆಯೇ ಮಾಡಿಕೊಂಡಿದೆ. ಪಕ್ಷಗಳನ್ನು ಬೇರು ಮಟ್ಟದಲ್ಲಿ ಬಲವರ್ಧನೆಗೊಳಿಸುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಲಿವೆ.
ಅಸಾಧಾರಣ ಸಂದರ್ಭ ಕಾರಣರಾಜ್ಯದಲ್ಲಿ 6025 ಗ್ರಾಪಂಗಳಿದ್ದು, ಅವುಗಳ ಅವಧಿ ಜೂನ್-ಜುಲೈಗೆ ಅಂತ್ಯವಾಗಿದೆ. ಕರೊನಾ ಕಾರಣ ಅಸಾಧಾರಣ ಸಂದರ್ಭ ಎಂದು ಭಾವಿಸಿ ರಾಜ್ಯ ಚುನಾವಣಾ ಆಯೋಗ ಪಂಚಾಯತಿಗಳ ಚುನಾವಣೆಯನ್ನು ಮೇಗೆ ಮುಂದೂಡಿತ್ತು. ಈ ಮಧ್ಯೆ ಚುನಾವಣೆ ಮುಂದೂಡಿಕೆ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಗ್ರಾಪಂ ಚುನಾವಣೆಗಾಗಿ 21 ಜಿಲ್ಲೆಗಳಲ್ಲಿ ಮೀಸಲಾತಿ ಪಟ್ಟಿ ಸಿದ್ಧವಾಗಿರುವುದಾಗಿ ರಾಜ್ಯ ಚುನಾವಣಾ ಆಯೋಗ ಇತ್ತೀಚಿಗೆ ಹೈಕೋರ್ಟ್​ಗೆ ಮಾಹಿತಿ ನೀಡಿತ್ತು. ಉಳಿದಿರುವ 9 ಜಿಲ್ಲೆಗಳ ಮೀಸಲಾತಿ ಪಟ್ಟಿಗಾಗಿ ಸಮಯವನ್ನು ಕೋರಿತ್ತು. ಈ ನಡುವೆ ಕೇಂದ್ರ ಚುನಾವಣಾ ಆಯೋಗ ಕರೊನಾ ಕಾಲದಲ್ಲಿ ಚುನಾವಣೆ ನಡೆಸಲು ನಿಯಮ ರೂಪಿಸಿರುವುದರಿಂದ ಅದರನ್ವಯ ಗ್ರಾಪಂ ಚುನಾವಣೆ ನಡೆಸುವ ಸಾಧ್ಯತೆಗಳಿವೆ.
ಅವಾಕ್ಸ್​ ಖರೀದಿಗೆ 147.81 ಶತಕೋಟಿ ಡಿಫೆನ್ಸ್ ಡೀಲ್?| 200 ಟ್ಯಾಕ್ಟಿಕಲ್​ ಡ್ರೋನ್​ಗಳು ಸೇರಲಿವೆ ಸೇನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
