ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 5 , 9ಕ್ಕೆ ಗ್ರಾಮಪಂಚಾಯಿತಿಗಳ ಸಾರ್ವತಿಕ ಚುನಾವಣೆ ನಡೆಯಲಿದೆ ಎಂಬ ಒಕ್ಕಣೆ ಇರುವ ಕರ್ನಾಟಕ ರಾಜ್ಯಪತ್ರದ ಪ್ರತಿ ಶನಿವಾರ ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಾಧ್ಯಮಗಳಲ್ಲೂ ಇದು ನೈಜ ಸುದ್ದಿ ಎಂಬಂತೆಯೇ ಬಿತ್ತರವಾಗಿತ್ತು. ಮಧ್ಯಾಹ್ನದ ವೇಳೆ ಈ ರಾಜ್ಯಪತ್ರದ ಅಸಲೀಯತ್ತು ಬಹಿರಂಗವಾಗಿತ್ತು. ಅಷ್ಟರೊಳಗೆ ಕೆಲವರು ಅದರಲ್ಲಿ ಕಾಗುಣಿತ ದೋಷಗಳನ್ನು ಪಟ್ಟಿ ಮಾಡಿ ವಾಟ್ಸ್​ಆ್ಯಪ್​ನಲ್ಲಿ ಕೂಡ ಹರಿಯಬಿಡಲಾಗಿತ್ತು. ಅಲ್ಲದೆ ಅದರಲ್ಲಿನ ಇತರೆ ವಿವರಗಳಲ್ಲಿರುವ ಲೋಪಗಳನ್ನು ಕೆಂಪುಗುರುತು ಹಾಕಿ ಅಧಿಕಾರಿಗಳಿಗೆ ಕನ್ನಡ ಬರುವುದಿಲ್ಲವೇನೋ ಎಂಬರ್ಥದಲ್ಲಿ ಕಮೆಂಟ್ ಹಾಕಿದ್ದು ಕೂಡ ವೈರಲ್ ಆಗಿತ್ತು.
ಈ ರಾಜ್ಯಪತ್ರ ಸುದ್ದಿ ವ್ಯಾಪಕವಾಗುತ್ತಿರುವುದನ್ನು ಗಮನಿಸಿದ ರಾಜ್ಯ ಚುನಾವಣಾ ಆಯೋಗ, ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ಚುನಾವಣಾ ಅಧಿಸೂಚನೆ ನಕಲಿ ಎಂಬುದನ್ನು ಸ್ಪಷ್ಟಪಡಿಸಿತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × three =
Remember me
