ಬಳ್ಳಾರಿ :ಗ್ರಾಮಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಶುರುವಾಗಿದ್ದು, ಅಲ್ಲೊಂದು, ಇಲ್ಲೊಂದು ಎಂಬಂತೆ ಅಧ್ವಾನಗಳ ವಿವರ ಬೆಳಕಿಗೆ ಬರತೊಡಗಿದೆ. ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮ ಪಂಚಾಯಿತಿಯ ತೊಲಮಾಮಿಡಿ ಗ್ರಾಮದ ವಾರ್ಡ್ ಸಂಖ್ಯೆ 7ರ ಅಭ್ಯರ್ಥಿ ಪದ್ಮಾವತಿ ಅವರ ಚುನಾವಣಾ ಚಿಹ್ನೆ ಬದಲಾಗಿದೆ.
ಅಭ್ಯರ್ಥಿಗೆ ಮಡಕೆ ಚಿಹ್ನೆ ಮಂಜೂರಾಗಿದೆ. ಆದರೆ, ಮತಪತ್ರದಲ್ಲಿ ಸಿಲಿಂಡರ್ ಚಿಹ್ನೆ ಮುದ್ರಿತವಾಗಿದ್ದು, ಗೊಂದಲ ಏರ್ಪಟ್ಟಿದೆ. ಪದ್ಮಾವತಿ ಅವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ತಹಸೀಲ್ದಾರ್ ರೆಹಾನ್ ಪಾಷಾ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ:ಗ್ರಾಮಾಯಣ: ಮೈದಾಳ‌ ಗ್ರಾಪಂನಲ್ಲಿ ಸಿದ್ದಗಂಗಾಶ್ರೀಗಳ ಮತದಾನ
ಗ್ರಾಪಂ ಚುನಾವಣಾ ಅಧಿಕಾರಿ (ರಿಟರ್ನಿಂಗ್ ಆಫೀಸರ್) ಲೋಪದೋಷದಿಂದ ಚಿಹ್ನೆ ಬದಲಾವಣೆ ಆಗಿದೆ. ಸದ್ಯಕ್ಕೆ ಮತದಾನ ಸ್ಥಗಿತವಾಗಿದೆ. ಗ್ರಾಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತೆರಳುತ್ತಿದ್ದಾರೆ ಎಂದು ತಹಸೀಲ್ದಾರ್ ರೆಹಾನ್ ಪಾಷಾ ತಿಳಿಸಿದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಗ್ರಾಮಾಯಣ: ಪ್ರಗತಿಯಲ್ಲಿದೆ ಮೊದಲ ಹಂತದ ಮತದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
