ಚಾಮರಾಜನಗರ:ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಪ್ರಗತಿಯಲ್ಲಿದ್ದು, ಕೆಲವೆಡೆ ಸಣ್ಣಪುಟ್ಟ ಲೋಪದೋಷಗಳ ಕಾರಣಕ್ಕೆ ಮತದಾನ ವಿಳಂಬವಾಗಿದೆ. ಇನ್ನು ಕೆಲವೆಡೆ, ಮತಪತ್ರಗಳಲ್ಲಿನ ಎಡವಟ್ಟು ಕಾರಣ ಮತದಾನ ಸ್ಥಗಿತಗೊಂಡಿದೆ. ಅಂತಹ ಎಡವಟ್ಟು ಗುಂಡ್ಲುಪೇಟೆ ತಾಲೂಕಿನಲ್ಲೂ ಆಗಿದೆ.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿಯಲ್ಲಿ ಶಶಿಕುಮಾರ್ ಎಂಬ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳು 9ನೇ ಕ್ರಮ ಸಂಖ್ಯೆ ನೀಡಿದ್ದರು. ಅದರಂತೆ ಕರಪತ್ರ ಮುದ್ರಿಸಿ ಪ್ರಚಾರ ಮಾಡಿದ್ದ ಅಭ್ಯರ್ಥಿಗೆ ಮತಗಟ್ಟೆಗೆ ಆಗಮಿಸಿದಾಗ ಶಾಕ್ ಕಾದಿತ್ತು.
ಇದನ್ನೂ ಓದಿ:ನಾವು ಮನರಂಜನೆ ನೀಡುವ ವ್ಯಕ್ತಿಗಳಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಡಿಸಿಎಂ ಪ್ರತಿಕ್ರಿಯೆ​
ಮತಪತ್ರದಲ್ಲಿ ಶಶಿಕುಮಾರ್​ಗೆ 8ನೇ ಕ್ರಮ ಸಂಖ್ಯೆ ನೀಡಲಾಗಿತ್ತು. ಈ ಬಗ್ಗೆ ಅಭ್ಯರ್ಥಿ ಶಶಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ನನ್ನ ಪರ ಮತ ಚಲಾವಣೆ ಮಾಡುವ ಮತದಾರರಿಗೆ ಗೊಂದಲ ಉಂಟಾಗುತ್ತಿದೆ. ಆದ್ದರಿಂಧ ಚುನಾವಣೆ ಮುಂದೂಡಬೇಕು ಎಂದು ಆಗ್ರಹಿಸಿ ಚುನಾವಣಾ ಅಧಿಕಾರಿಗಳಿಗೆ ಕೂಡಲೇ ಮನವಿ ಸಲ್ಲಿಸಿದರು. ಆದರೆ, ಮನವಿ ತಿರಸ್ಕೃತವಾಗಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಗ್ರಾಮಾಯಣ: ಕಂಬೀಪುರ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 7 =
Remember me
