ತುಮಕೂರು:ಚುನಾವಣೆ ಅಂದರೆ ಹಣ, ಹೆಂಡ, ಆಮಿಷಗಳ ಸುರಿಮಳೆ ಎಂಬ ಭಾವನೆ ಮೊದಲಿಂದಲೂ ಇದ್ದು, ಈ ಬಾರಿಯೂ ಮುಂದುವರಿದಿದೆ. ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳಷ್ಟೇ ಅಲ್ಲ, ಮತದಾರರೂ ಗಮನಸೆಳೆಯುತ್ತಿದ್ದಾರೆ. ಗುಬ್ಬಿ ತಾಲೂಕಿನ ನಿಟ್ಟೂರು ಮತಗಟ್ಟೆಯಲ್ಲಿದ್ದ ಒಬ್ಬರ ಮತದಾರ ಗಮನ ಸೆಳೆದ ಬಗೆ ಇದು.
ಮತದಾರನ ಹೆಸರು ನರಸೇಗೌಡ. ವೃತ್ತಿಯಲ್ಲಿ ಟ್ರ್ಯಾಕ್ಟರ್ ಚಾಲಕ. ಸದ್ಯ ಕೆಲಸ ಇಲ್ಲ. ಮದ್ಯವ್ಯಸನಿ. ಓಡಾಟ ಕಷ್ಟ. ಹೀಗಾಗಿ ಮತಗಟ್ಟೆ ಸಮೀಪ ಬಂದು ಕುಳಿತು, ‘ನಂಗೆ ಯಾರು ಹೆಚ್ಚು ಹಣ ಕೊಡ್ತೀರಿ? ಅಧಿಕ ಹಣ ಕೊಟ್ಟವರಿಗೆ ಮತ ಚಲಾಯಿಸುವೆ’ ಎಂದು ಬಹಿರಂಗವಾಗಿ ಕೂಗಿ ಹೇಳುತ್ತಿದ್ದುದು ಕಂಡುಬಂತು.
ಇದನ್ನೂ ಓದಿ:ಶ್ರೀನಗರದಲ್ಲೂ ಅರಳಿತು ಕಮಲ! ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಮೊದಲ ಜಯ ದಾಖಲಿಸಿದ ಬಿಜೆಪಿ!
ಕುಡುಕನಾದ ಕಾರಣ ನರಸೇಗೌಡರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಂತೆ ಕಾಣಲಿಲ್ಲ. ಆದರೆ, ಮತ ಮಾರಾಟದ ವಸ್ತುಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ ಇತ್ತು ಅವರ ಮಾತು ಮತ್ತು ನಡವಳಿಕೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಮತಪತ್ರದಲ್ಲಿ ಚಿಹ್ನೆ ಬದಲಾವಣೆ: ವಿಳಂಬವಾಗಿ ಶುರುವಾಯಿತು ಮತದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 14 =
Remember me
