ಕೊಳ್ಳೇಗಾಲ:ತಾಲೂಕಿನ ಸಿದ್ದಯ್ಯನಪುರ ಗ್ರಾಮ ಪಂಚಾಯಿತಿಯ 4 ಸ್ಥಾನಗಳ ಆಯ್ಕೆಗೆ 2 ಮತಗಳನ್ನು ಮಾತ್ರ ಹಾಕಲು ಅವಕಾಶ ನೀಡಿರುವುದನ್ನು ವಿರೋಧಿಸಿದ ಮತದಾರರು ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ. ಸಿದ್ದಯ್ಯನಪುರ 1ನೇ ವಾರ್ಡ್ ನಲ್ಲಿ ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನ, ಪರಿಶಿಷ್ಟ ಜಾತಿ ಹಾಗೂ ಪತಿಶಿಷ್ಟಜಾತಿ‌ ಮಹಿಳೆ ಸೇರಿ ಒಟ್ಟು 4 ಸ್ಥಾನಗಳ ಪೈಕಿ ಕೇವಲ ಎಸ್ಸಿ ಮತ್ತು ಎಸ್ಸಿ ಮಹಿಳಾ ಸ್ಥಾನಕ್ಕೆ ಮಾತ್ರ ಒಟ್ಟು 11 ಜನರು ನಾಮಪತ್ರ ಸಲ್ಲಿಸಿದ್ದಾರೆ‌.
ಈ ನಡುವೆ ಅಭ್ಯರ್ಥಿಗಳು ಚುನಾವಣಾ ಪ್ರಚಾರದ ವೇಳೆ ನಾಲ್ಕು ಮತ ಚಲಾಯಿಸಲು ಅವಕಾಶವಿದೆ ಎಂದು ಮತದಾರರಿಗೆ ತಿಳಿಸಿದ್ದರು. ಆದರೆ, ಇಂದು ಮತಗಟ್ಟೆಗೆ ಬಂದ ಜನರಿಗೆ ಕೇವಲ 2 ಮತ ಚಲಾಯಿಸಲು ಅವಕಾಶವಿದೆ ಎಂಬುದನ್ನು ತಿಳಿದು ಬೇಸರಗೊಂಡು ಮತದಾನ ಬಹಿಷ್ಕಾರ ಮಾಡಿದರು‌.
ಇದನ್ನೂ ಓದಿ:ಮದುವೆ ದಿನವೇ ಮುಟ್ಟಾಗಿದ್ದಳಾಕೆ : ಡಿವೋರ್ಸ್​ಗೆ ಅದುವೇ ಕಾರಣವಾಯ್ತಾ?
ಈ ಕುರಿತು ತಹಸೀಲ್ದಾರ್ ಕುನಾಲ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಆಗಮಿಸಿ ಜನರನ್ನು ಮನವೊಲಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಜನರು ನಾವು ಮತದಾನ ಮಾಡುವುದಿಲ್ಲ.ಮತಗಟ್ಟೆ ಚುನಾವಣಾಧಿಕಾರಿ ರಮೇಶ್ ಅವರು ನಮಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದು ಗ್ರಾಮಕ್ಕೆ ಡಿಸಿ ಎಂ.ಆರ್.ರವಿ ಹಾಗೂ ಎಎಸ್ಪಿ ಅನಿತಾ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
2,950 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರನ್ನು ಓಪನ್ ಮಾರ್ಕೆಟ್​ನಲ್ಲಿ ಖರೀದಿಸಿತು ವೇದಾಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + nineteen =
Remember me
