ರಾಯಚೂರು:ಸಿರಿವಾರ ತಾಲೂಕಿನ ಗಣದನ್ನಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆ ಬದಲಾವಣೆಯಾಗಿ ಉಂಟಾದ ಗೊಂದಲದ ಕಾರಣ ಮತದಾನ ವಿಳಂಬವಾಗಿ ಶುರುವಾಗಿದೆ. ಗಣದನ್ನಿ ಗ್ರಾಮ ಪಂಚಾಯಿತಿಯ ಕೆ.ತುಪ್ಪದೂರು ಗ್ರಾಮದಲ್ಲಿ ಮತದಾನ ಆರಂಭವಾಗುತ್ತಿದ್ದ ಹಾಗೆ ಮತಪತ್ರದಲ್ಲಿ ಅಭ್ಯರ್ಥಿಗಳಿಗೆ ನೀಡಿದ್ದ ಚಿಹ್ನೆಗಳು ಅದಲುಬದಲಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಕಾರಣ ಮತದಾನವನ್ನು ಕೊಂಚಕಾಲ ತಡೆ ಹಿಡಿಯಲಾಗಿತ್ತು.
ಅಭ್ಯರ್ಥಿ ಸಿದ್ದಮ್ಮಗೆ ಮಡಕೆ ಬದಲಾಗಿ ಆಟೋ ಹಾಗೂ ಅಭ್ಯರ್ತಿ ದೇವಮ್ಮಗೆ ಟ್ರ್ಯಾಕ್ಟರ್ ಬದಲಾಗಿ ಗ್ಯಾಸ್​ ಸ್ಟೋವ್​ ಗುರುತು ಮುದ್ರಿತವಾಗಿತ್ತು. ಐವರು ಅಭ್ಯರ್ಥಿಗಳ ಪೈಕಿ ಇಬ್ಬರ ಚಿಹ್ನೆ ಬದಲಾಗಿತ್ತು. 449 ಮತಗಳಿರು ಬೂತ್​ನಲ್ಲಿ ಈ ತೊಂದರೆ ಉಂಟಾಗಿತ್ತು. ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ಅವರು ಕೂಡಲೆ ಹೊಸದಾಗಿ ಮತಪತ್ರ ಮುದ್ರಿಸುವುದಕ್ಕೆ ಕ್ರಮ ತೆಗೆದುಕೊಂಡರು. ಅದು ಬಂದ ನಂತರದಲ್ಲಿ ನಾಲ್ಕು ಗಂಟೆ ತಡವಾಗಿ ಮತದಾನ ಪ್ರಕ್ರಿಯೆ ಶುರುವಾಗಿದೆ.
ಇದನ್ನೂ ಓದಿ:ಗ್ರಾಮಾಯಣ: ಕಂಬೀಪುರ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದೇಕೆ?
ಕಲ್ಲು ತೂರಾಟ: ಇದೇ ಜಿಲ್ಲೆಯ ದೇವದುರ್ಗ ತಾಲೂಕಿನ ಜುಟಮರಡಿ ಗ್ರಾಮದಲ್ಲಿ ಶಾಸಕ ಶಿವನಗೌಡ ನಾಯಕರ ಸಂಬಂಧಿಕ ಪೊಲೀಸ್ ಜೀಪ್ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ವರದಿಯಾಗಿದೆ. ಮತಗಟ್ಟೆ ಪ್ರವೇಶಿಸುತ್ತಿದ್ದ ವೇಳೆ ಪೊಲೀಸರೊಂದಿಗೆ ವಾಗ್ವಾದ ಉಂಟಾದ ಕಾರಣ ಗಲಾಟೆ ಆಗಿದೆ. ಲಿಂಗಸುಗೂರ ಡಿವೈಎಸ್​ಪಿ ಎಸ್​.ಎಸ್​.ಹುಲ್ಲೂರ ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮದಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಗ್ರಾಮಾಯಣ: ಚುನಾವಣೆಗೂ ಮೊದಲೇ ಸೋಲಿನ ಭೀತಿಗೆ ಅಭ್ಯರ್ಥಿ ಆತ್ಮಹತ್ಯೆ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + nineteen =
Remember me
