’ಹು ಬ್ಬಳ್ಳಿ: ಭಾರತದಲ್ಲಿ ಶಿಕ್ಷಣದ ವೈಫಲ್ಯಕ್ಕೆ ರಾಜಕಾರಣಿಗಳಾಗಲೀ, ಆಡಳಿತ ಮಂಡಳಿಗಳಾಗಲೀ ಕಾರಣ ಅಲ್ಲ. ಈ ವೈಫಲ್ಯದ ನೇರ ಜವಾಬ್ದಾರಿ ಶಿಕ್ಷಕರದ್ದು. ಶಿಕ್ಷಕರು ಮನಸ್ಸು ಮಾಡಿದರೆ ಯಾವುದೇ ಹಣಕಾಸಿನ ನೆರವು ಇಲ್ಲದೇ ಶೈಕ್ಷಣಿಕ ಕ್ರಾಂತಿ ಮಾಡಬಹುದು ಎಂದು ನೂತನ ಶಿಕ್ಷಣ ನೀತಿಯ ಕರಡು ರಚನಾ ಸಮಿತಿ ಸದಸ್ಯ ಪ್ರೊ. ತೇಜಸ್ವಿ ಕಟ್ಟಿಮನಿ ಪ್ರತಿಪಾದಿಸಿದರು. ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೊಸ ಶಿಕ್ಷಣ ನೀತಿಯ ಕುರಿತು ಸಂವಾದ ನಡೆಸಿದ ಅವರು, ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರಕಬೇಕಾದರೆ ತ್ಯಾಗ ಮನೋಭಾವನೆಯಿಂದ ಕೆಲಸ ಮಾಡುವ ಶಿಕ್ಷಕರನ್ನು ತಯಾರಿಸಬೇಕು ಎಂದರು.
ಅವರು ಹೇಳಿದ ಇತರ ಅಂಶಗಳು: ಹೊಸ ಶಿಕ್ಷಣ ನೀತಿಯು ಕಲಿಕೆಯ ವಿಭಜಕಗಳನ್ನು ದೂರ ಮಾಡಿ ಹಳ್ಳಿಗಾಡಿನ ಬದುಕು, ಒಕ್ಕಲುತನ, ಕಮ್ಮಾರಿಕೆ, ಕುಂಬಾರಿಕೆ, ತೋಟಗಾರಿಕೆ ಮೊದಲಾದ ವೃತ್ತಿಗಳಿಂದ ಕೂಡಿರುವ ಗ್ರಾಮಿಣ ಭಾರತವನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲಿದೆ. ಆಧುನಿಕ ಶಿಕ್ಷಣ ಪದಟಛಿತಿಯಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಕೌಶಲಗಳನ್ನು ಅಲಕ್ಷಿಸಿದ ಪರಿಣಾಮ ದೈಹಿಕ ಶ್ರಮ ಆಧರಿಸಿದ ಕೌಶಲ ವಿದ್ಯೆಗಳನ್ನು ನಾವು ಶಿಕ್ಷಣವೆಂದು ಪರಿಗಣಿಸಿಯೇ ಇಲ್ಲ. ಬಿಳಿ ಕಾಲರಿನ ಉದ್ಯೋಗಿಗಳನ್ನು ಮಾತ್ರ ಸುಶಿಕ್ಷಿತರೆಂದು ಭಾವಿಸಿದ್ದೇವೆ. ಗ್ರಾಮೀಣ ಭಾರತವನ್ನು ಪಠ್ಯದ ಬಹುಮುಖ್ಯ ಭಾಗವಾಗಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೊಂದಾಣಿಕೆ ತರುವುದು ಶಿಕ್ಷಣದ ಹೊಸ ನೀತಿಯ ಆಶಯವಾಗಿದೆ. ಒಕ್ಕಲುತನದೊಂದಿಗೆ ಶಿಕ್ಷಣ ನೀಡುವಂತಾಗಬೇಕು. ಶಿಕ್ಷಣದಲ್ಲಿ ಕೌಶಲ ಇರಬೇಕು. ಆದರೆ ಈಗಿನ ಪಠ್ಯಪುಸ್ತಕಗಳಲ್ಲಿ ಈ ರೀತಿಯ ಯಾವುದೆ ವಿಷಯ ಕಾಣುವುದಿಲ್ಲ. ಪಠ್ಯದಲ್ಲಿ ಹಳ್ಳಿಯ ಸೊಬಗು ಕಾಣೆಯಾಗಿದೆ. ರೈತ ಅದೃಶ್ಯನಾಗಿದ್ದಾನೆ. ಪೂರ್ವ ಪ್ರಾಥಮಿಕ ಹಂತದಿಂದಲೇ ಸದೃಢ ಶಿಕ್ಷಣ ನೀಡುವಂತಾಗಬೇಕು.
https://www.vijayavani.net/uk-prime-minister-boris-johnson-takes-ride-in-made-in-india-hero-cycles/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
