ವಿಜಯನಗರ:ಗಣ್ಯರ ಮಕ್ಕಳ ಮದುವೆ ಎಂದರೆ ಕಾರ್ಯಕ್ರಮದ ಮಟ್ಟ ದೊಡ್ಡದಾಗಿಯೆ ಇರುತ್ತೆ. ಇದೀಗ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪುತ್ರಿಯ ಅದ್ದೂರಿ ಆರತಕ್ಷತೆ ನಡೆಲಿದೆ. ಈ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ಕೂಡ ನಡೆದಿದೆ.
ಸಚಿವ ಆನಂದ್​ ಸಿಂಗ್​ ಮಗಳ ಆರತಕ್ಷತೆಗೆ ಗಣ್ಯಾತಿ ಗಣ್ಯರು, ಸಚಿವರು, ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ವಿಜಯನಗರದ ಹೊಸಪೇಟೆಯಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಅದ್ದೂರಿ ಸೆಟ್ ಹಾಕಾಲಗಿದೆ. ಹೀಗಾಗಿ ಹೊಸಪೇಟೆಗೆ ಸಚಿವರ ದಂಡೇ ಆಗಮಿಸಲಿದೆ.
ಆರತಕ್ಷತೆ ಸೆಟ್​ಗೆ ಉತ್ತರ, ದಕ್ಷಿಣ ಭಾರತದ ಶೈಲಿಯ ವಾಸ್ತುಶಿಲ್ಪದ ಟಚ್ ನೀಡಲಾಗಿದೆ. ಈ ಸೆಟ್​ನಲ್ಲಿ 200 ಅಡಿ ಉದ್ದದ, 75 ಅಡಿ ಅಗಲದ ವೇದಿಕೆ ನಿರ್ಮಾಣ ಮಾಡಲಾಗಿದೆ. ಅಂದಹಾಗೆ ಈ ಅದ್ದೂರಿ ಸೆಟ್​ಅನ್ನು ಹೊಸಪೇಟೆಯ ಭಟ್ರಳ್ಳಿ ಆಂಜನೇಯ ದೇಗುಲದ ಬಳಿ ಹಾಕಲಾಗಿದೆ
ಆನಂದ್ ಸಿಂಗ್ ಮಗಳು ವೈಷ್ಣವಿ ಸಿಂಗ್​ಗೆ ಮಧ್ಯಪ್ರದೇಶದ ಯಶರಾಜ್ ಸಿಂಗ್ ಜಾಧೋನ್ ಜತೆ ಜೈಪುರದಲ್ಲಿ ಇದೇ 5 ರಂದು ವಿವಾಹವಾಗಿದೆ. ಜೈಪುರದಲ್ಲಿ ವಿವಾಹವಾಗಿ ಕರ್ನಾಟಕದಲ್ಲಿ ಆರತಕ್ಷತೆ ಇಟ್ಟುಕೊಳ್ಳದಿದ್ದರೆ ಹೇಗೆ? ಹೀಗಾಗಿ ಅದ್ದೂರಿ ಸೆಟ್ ಹಾಕಲಾಗಿದ್ದು ಜೈಪುರದ ಕೋಟೆಯೇ ಹೊಸಕೋಟೆಯಲ್ಲಿ ಧರೆಗಿಳಿದಂತಿದೆ. ಈ ಕಾರ್ಯಕ್ರಮದಲ್ಲಿ 40 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎನ್ನುವ ಮಾಹಿತಿ ಕೂಡ ಹೊರಬಿದ್ದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
